ಗೌರಿ ಹತ್ಯೆ ಪ್ರಕರಣ: ಮಾಸ್ಟರ್ ಮೈಂಡ್ ಋಷಿಕೇಶ ದೇವ್ಡೇಕರ್ ಮಹಾರಾಷ್ಟ್ರ ನಂಟು

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಕರ್ನಾಟಕ ಎಸ್ಐಟಿ ಪೊಲೀಸರಿಂದ ಜಾರ್ಖಾಂಡಲ್ಲಿ ಬಂಧಿತನಾಗಿರುವ ಋಷಿಕೇಶ ದೇವ್ಡೇಕರ್'ಗೆ ಔರಂಗಾಬಾದ್ ನಲ್ಲಿರುವ ಪ್ರವಾಸಿ ತಾಣಗಳೊಂದಿಗೆ ನಂಟು ಹೊಂದಿದ್ದಾನೆಂದು ಮೂಲಗಳು ತಿಳಿಸಿವ. 
ಗೌರಿ ಲಂಕೇಶ್
ಗೌರಿ ಲಂಕೇಶ್

ಔರಂಗಾಬಾದ್: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಕರ್ನಾಟಕ ಎಸ್ಐಟಿ ಪೊಲೀಸರಿಂದ ಜಾರ್ಖಾಂಡಲ್ಲಿ ಬಂಧಿತನಾಗಿರುವ ಋಷಿಕೇಶ ದೇವ್ಡೇಕರ್'ಗೆ ಔರಂಗಾಬಾದ್ ನಲ್ಲಿರುವ ಪ್ರವಾಸಿ ತಾಣಗಳೊಂದಿಗೆ ನಂಟು ಹೊಂದಿದ್ದಾನೆಂದು ಮೂಲಗಳು ತಿಳಿಸಿವ. 

ಪ್ರಕರಣ ಸಂಬಂಧ ತನಿಖಾ ಬೆಳವಣಿಗೆಗಳ ಬಗ್ಗೆ ಸರ್ಕಾರ ಗಮನ ಹರಿಸಿದೆ ಎಂದು ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ಅವರು ಹೇಳಿದ್ದಾರೆ. 

ಗೌರಿ ಲಂಕೇಶ್ ಹಂತಕರ ಇತರೆ ಹಂತಕರೊ ಹೇಗೆ ನಂಟು ಹೊಂದಿದ್ದರು ಹಾಗೂ ಅವರ ಸಂಚು ಏನಾಗಿತ್ತು ಎಂಬುದರ ಬಗ್ಗೆ ತನಿಖೆ ನಡೆಯಬೇಕಿದೆ ಎಂದು ತಿಳಿಸಿದ್ದಾರೆ. 

2013ರಲ್ಲಿ ನರೇಂದ್ರ ದಾಬೋಲ್ಕರ್ ಹತ್ಯೆ, 2016ರಲ್ಲಿ ಗೋವಿಂದ್ ಪನ್ಸಾರೆ ಹಾಗೂ 2015ರಲ್ಲಿ ಎಂಎಂ ಕಲಬುರಗಿ ಹತ್ಯೆಯಾಗಿತ್ತು. ಇದಾದ ಬಳಿಕ 2017ರಲ್ಲಿ ಗೌರಿ ಲಂಕೇಶ್ ಹತ್ಯೆಯಾಗಿತ್ತು. ಈ ಎಲ್ಲಾ ಹತ್ಯೆ ಪ್ರಕರಣದಲ್ಲೂ ದೇವ್ಡೇಕರ್ ಕೈವಾಡವಿದೆ ಎಂದು ಹೇಳಲಾಗುತ್ತಿದೆ. ಗೌರಿ ಹತ್ಯೆ ಪ್ರಕರಣದಲ್ಲಿ ಮಾಸ್ಟರ್ ಮೈಂಡ್ ಆಗಿರುವ ದೇವ್ಡೇಕರ್ ಗೌರಿ ಹತ್ಯೆ ಬಳಿಕ ಔರಂಗಾಬಾದ್ ನಲ್ಲಿ ಪತ್ನಿ, ಪೋಷಕರು ಹಾಗೂ 7 ವರ್ಷದ ತನ್ನ ಪುತ್ರಿಯೊಂದಿಗೆ ನೆಲೆಯೂರಿದ್ದ. 

ಔರಂಗಾಬಾದ್ ನಲ್ಲಿ ಯೋಗಗುರು ಬಾಬಾ ರಾಮದೇವ್ ಅವರ ಪತಾಂಜಲಿ ಕಂಪನಿಯ ಉತನ್ನಗಳನ್ನು ಮಾರಾಟ ಮಾಡುತ್ತಿದ್ದ ಎಂದು ಹೇಳಲಾಗುತ್ತಿದೆ. ಔರಂಗಾಬಾದ್ ನಗರದಲ್ಲಿಯೇ ಪತಾಂಜಲಿ ವಸ್ತು ಮಾರಾಟ ಮಾಡಿ, ಜೀವನ ನಡೆಸುತ್ತಿದ್ದ ಎಂದು ವರದಿಗಳು ತಿಳಿಸಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com