ಮಲಗಿದ್ದ ನಾಯಿ ಮೇಲೆ ಕಲ್ಲು ಎತ್ತಿ ಹಾಕಿ ವಿಕೃತಿ ಮೆರೆದ ಧೂರ್ತ, ಎಫ್ ಐಆರ್ ದಾಖಲು

ಮಲಗಿದ್ದ ಬೀದಿನಾಯಿ ಮೇಲೆ ಕಲ್ಲು ಎತ್ತಿ ಹಾಕಿ ವಿಕೃತಿ ಮೆರೆದಿದ್ದ ಧೂರ್ತ ವ್ಯಕ್ತಿಯ ವಿರುದ್ಧ ಇದೀಗ ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡಿದ್ದಾರೆ.
ನಾಯಿ ಮೇಲೆ ಕಲ್ಲು ಹಾಕಿದ ಧೂರ್ತ
ನಾಯಿ ಮೇಲೆ ಕಲ್ಲು ಹಾಕಿದ ಧೂರ್ತ

ಬೆಂಗಳೂರು: ಮಲಗಿದ್ದ ಬೀದಿನಾಯಿ ಮೇಲೆ ಕಲ್ಲು ಎತ್ತಿ ಹಾಕಿ ವಿಕೃತಿ ಮೆರೆದಿದ್ದ ಧೂರ್ತ ವ್ಯಕ್ತಿಯ ವಿರುದ್ಧ ಇದೀಗ ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡಿದ್ದಾರೆ.

ಹೌದು.. ನಾಯಿಯೊಂದು ಅಪಾರ್ಟ್‍ಮೆಂಟ್ ಗೇಟ್ ಮುಂದೆ ಮಲಗಿದೆ ಎಂಬ ಒಂದೇ ಕಾರಣಕ್ಕೆ ಅಪಾ ರ್ಟ್‍ಮೆಂಟ್ ನಿವಾಸಿಯೊಬ್ಬ ಏಕಾಏಕಿ ಕಲ್ಲು ತಂದು ಮಲಗಿದ್ದ ನಾಯಿ ಮೇಲೆ ಎತ್ತಿ ಹಾಕಿರುವ ವಿಲಕ್ಷಣ ಘಟನೆ ಬೆಂಗಳೂರಿನ ಜಾಲಹಳ್ಳಿಯ ಪ್ರಸ್ಟೀಜ್ ಕೆನ್ಸಿಂಗ್ಟನ್ ಅಪಾರ್ಟ್‍ಮೆಂಟ್ ಬಳಿ  ನಡೆದಿದೆ.

ಮೂಲಗಳ ಪ್ರಕಾರ ಇದೇ ಅಪಾರ್ಟ್‍ಮೆಂಟ್ ವಾಸಿಯಾದ ವರುಣ್ ಎಂಬಾತ ಶುಕ್ರವಾರ ವಾಕಿಂಗ್ ಹೋಗಿದ್ದ. ವಾಕಿಂಗ್ ಮುಗಿಸಿ ಅಪಾರ್ಟ್‍ಮೆಂಟ್ ಬಳಿ ಬಂದಾಗ ನಾಯಿಯೊಂದು ಅಪಾರ್ಟ್‍ಮೆಂಟ್ ಮುಂಭಾದ ಗೇಟ್ ಬಳಿ ಮಲಗಿತ್ತು. ಇದನ್ನು ನೋಡಿದ ವರುಣ್ ಆಕ್ರೋಶಗೊಂಡು, ಏಕಾಏಕಿ ಕಲ್ಲೊಂದನ್ನು ತಂದು ಮಲಗಿದ್ದ ನಾಯಿ ಮೇಲೆ ಹಾಕಿದ್ದಾನೆ. ಈ ದೃಶ್ಯ ಅಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಯಾರೋ ಅದನ್ನು ಸಾಮಾಜಿಕ ಜಾಲತಾಣಗಳಿಗೆ ಅಪ್ಲೋಡ್ ಮಾಡಿದ್ದಾರೆ. ಇದೀಗ ಈ ವಿಡಿಯೋ ವೈರಲ್ ಆಗಿದ್ದು, ವಿಡಿಯೋ ವೀಕ್ಷಿಸಿದ್ದ ಪ್ರಾಣಿ ದಯಾ ಸಂಘದ ವತಿಯಿಂದ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಪ್ರಾಣಿಗಳ ಮೇಲಿನ ಹಿಂಸೆ ನಿರ್ಮೂಲನೆ ಕಾಯ್ದೆಯಡಿ ಪೊಲೀಸರು ಇದೀಗ ಪ್ರಕರಣ ದಾಖಸಿಕೊಂಡಿದ್ದು, ವರಣ್ ವಿರುದ್ಧ ಎಫ್ ಐಆರ್ ಕೂಡ ದಾಖಲಿಸಿದ್ದಾರೆ. ವರಣ್ ನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರಾದರೂ ಜಾಮೀನಿನ ಮೇಲೆ ಆತನನ್ನು ಬಿಡುಗಡೆ ಮಾಡಿದ್ದಾರೆ. ಇನ್ನು ವರಣ್ ನನ್ನು ಪರೀಕ್ಷೆಗೊಳಪಡಿಸಿದ ವೈದ್ಯರು ಆತ ಮಾನಸಿಕ ಅಸ್ವಸ್ಥ ಎಂದು ಹೇಳಿದ್ದಾರೆ. ಇನ್ನು ಅಪಾರ್ಟ್ ಮೆಂಟ್ ಬಳಿ ಮಲಗುತ್ತಿದ್ದ ನಾಯಿ ಕಳೆದ ನಾಲ್ಕು ವರ್ಷಗಳಿಂದಲೂ ಇಲ್ಲೇ ವಾಸಿಸುತ್ತಿತ್ತು ಮತ್ತು ಯಾರಿಗೂ ತೊಂದರೆ ಮಾಡುತ್ತಿರಲಿಲ್ಲ ಎಂದು ಹೇಳಲಾಗಿದೆ.

ನಾಯಿಗೆ ಚಿಕಿತ್ಸೆ ನೀಡಿದ ಪ್ರಾಣಿ ದಯಾ ಸಂಘಟನೆ
ಇನ್ನು ಕಲ್ಲು ಎತ್ತಿಹಾಕಿದ ಬಳಿಕ ಗಾಯಗೊಂಡ ನಾಯಿ ಕುರಿತು ಇಲ್ಲಿನ ನಿವಾಸಿ ಹರೀಶ್ ಎಂಬುವವರು ಪ್ರಾಣಿ ದಯಾ ಸಂಘಟನೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಪ್ರಾಣಿದಯಾ ಸಂಘಟನೆ ಸಿಬ್ಬಂದಿ ನಾಯಿಯನ್ನು ತೆಗೆದುಕೊಂಡು ಹೋಗಿ ಚಿಕಿತ್ಸೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com