ಇಸ್ರೋ ನಿರ್ಮಿತ ‘ಜಿಸ್ಯಾಟ್-30’ ಉಪಗ್ರಹ ಜ. 17 ರಂದು ಉಡಾವಣೆ
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಸ್ವದೇಶಿ ತಂತ್ರಜ್ಞಾನದ ಮೂಲಕ ನಿರ್ಮಿಸಿರುವ ‘ಜಿಸ್ಯಾಟ್-30’ ಉಪಗ್ರಹ ಇದೇ 17ರಂದು ದಕ್ಷಿಣ ಅಮೆರಿಕದ ಫ್ರೆಂಚ್ ಗಯಾನಾ ಬಾಹ್ಯಾಕಾಶ...
Published: 14th January 2020 07:48 PM | Last Updated: 14th January 2020 07:48 PM | A+A A-

ಜಿಸ್ಯಾಟ್ - 30
ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಸ್ವದೇಶಿ ತಂತ್ರಜ್ಞಾನದ ಮೂಲಕ ನಿರ್ಮಿಸಿರುವ ‘ಜಿಸ್ಯಾಟ್-30’ ಉಪಗ್ರಹ ಇದೇ 17ರಂದು ದಕ್ಷಿಣ ಅಮೆರಿಕದ ಫ್ರೆಂಚ್ ಗಯಾನಾ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಯಾಗಲಿದ್ದು, ಸಿದ್ದತೆ ಭರದಿಂದ ಸಾಗಿದೆ.
ಅಂದು, ಭಾರತೀಯ ಕಾಲಮಾನದ ಪ್ರಕಾರ, ಮಧ್ಯಾಹ್ನ 2.35ರ ಹೊತ್ತಿಗೆ ಎರೇನ್ ಲಾಂಚ್ ಕಾಂಪ್ಲೆಕ್ಸ್ ಉಡ್ಡಯನ ಕೇಂದ್ರದಿಂದ ‘ಎರೇನ್ 5’ ಎಂಬ ರಾಕೆಟ್ ವಾಹಕದ ಮೂಲಕ ಉಪಗ್ರಹ ಉಡಾವಣೆಗೊಳ್ಳಲಿದೆ ಎಂದು ಇಸ್ರೋ ಹೇಳಿದೆ.
3,357 ಕೆಜಿ ತೂಕದ ಈ ಉಪಗ್ರಹ ಟೆಲಿವಿಷನ್ ಅಪ್ ಲಿಂಕಿಂಗ್ ಹಾಗೂ ಡೌನ್ಲಿಂಕಿಂಗ್, ಡಿಟಿಎಚ್, ಟೆಲಿಪೋರ್ಟ್ ಸೇವೆಗಳು, ಡಿಜಿಟಲ್ ಸ್ಯಾಟಲೈಟ್ ಸುದ್ದಿ ಸಂಗ್ರಹ (ಡಿಎಸ್ಎನ್ಜಿ), ಸೆಲ್ಯೂರಲ್ ಬ್ಯಾಕ್ಹೌಲ್ ಕನೆಕ್ಟಿವಿಟಿ ಸೇರಿದಂತೆ ಇನ್ನೂ ಅನೇಕ ಸೇವೆಗಳನ್ನು ಸಿ-ಬ್ಯಾಂಡ್ ಮೂಲಕ ಮುಂದಿನ 15 ವರ್ಷಗಳವರೆಗೆ ಒದಗಿಸಲಿದೆ ಎಂದೂ ಇಸ್ರೋ ಮೂಲಗಳು ತಿಳಿಸಿವೆ.