ಎಸ್ಎಸ್ಎಲ್'ಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶಿಯಾದ ರಾಮನಗರ ಜಿಲ್ಲಾ ಪಂಚಾಯತ್ ಸಿಇಒ

ವಿದ್ಯಾರ್ಥಿಗಳ ಜೀವನಕ್ಕೆ ಎಸ್ಎಸ್ಎಲ್'ಸಿಯಲ್ಲಿ ಪ್ರಮುಖ ಘಟ್ಟವಾಗಿದ್ದು, ಇಂತಹ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಹೆಚ್ಚೆಚ್ಚು ಅಂಕಗಳಿಸುವಂತೆ ಮಾಡಲು ನೆರವಾಗುವಂತೆ ಅಧಿಕಾರಿಗಳಿಗೆ ರಾಮನಗರದ ಐಎಎಸ್ ಅಧಿಕಾರಿ ಮೊಹಮ್ಮದ್ ಇಕ್ರಾಮುಲ್ಲಾ ಶರೀಫ್ ತಿಳಿಸಿದ್ದಾರೆ. 
ಸಂಗ್ರ ಚಿತ್ರ
ಸಂಗ್ರ ಚಿತ್ರ

ಬೆಂಗಳೂರು: ವಿದ್ಯಾರ್ಥಿಗಳ ಜೀವನಕ್ಕೆ ಎಸ್ಎಸ್ಎಲ್'ಸಿಯಲ್ಲಿ ಪ್ರಮುಖ ಘಟ್ಟವಾಗಿದ್ದು, ಇಂತಹ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಹೆಚ್ಚೆಚ್ಚು ಅಂಕಗಳಿಸುವಂತೆ ಮಾಡಲು ನೆರವಾಗುವಂತೆ ಅಧಿಕಾರಿಗಳಿಗೆ ರಾಮನಗರದ ಐಎಎಸ್ ಅಧಿಕಾರಿ ಮೊಹಮ್ಮದ್ ಇಕ್ರಾಮುಲ್ಲಾ ಶರೀಫ್ ತಿಳಿಸಿದ್ದಾರೆ. 

2016 ಬ್ಯಾಚ್'ನ ಐಎಎಸ್ ಅಧಿಕಾರಿಯಾಗಿರುವ ಶರೀಫ್ ಅವರು, ರಾಮನಗರ ಜಿಲ್ಲಾ ಪಂಚಾಯತ್ ಅಧಿಕಾರಿ ಕೂಡ ಆಗಿದ್ದಾರೆ. ರಾಮನಗರದಲ್ಲಿ 100ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಿದ್ದು, 13,000 ವಿದ್ಯಾರ್ಥಿಗಳು ಪ್ರಸಕ್ತ ಸಾಲಿನಲ್ಲಿ ಎಸ್ಎಸ್ಎಲ್'ಸಿ ಪರೀಕ್ಷೆ ಬರೆಯುತ್ತಿದ್ದಾರೆ. ಹೀಗಾಗಿ ರಾಮನಗರದ ಹಲವು ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳಿಗೆ ಒಂದೊಂದು ಶಾಲೆಯನ್ನು ದತ್ತುಪಡೆದುಕೊಂಡು ವಿದ್ಯಾರ್ಥಿಗಳಿಗೆ ತರಬೇತಿ ನೀಡುವಂತೆ ಸೂಚಿಸಿದ್ದಾರೆ. 

ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಶರೀಫ್ ಅವರು, ನಮ್ಮಲ್ಲಿರುವ ಎಲ್ಲಾ ಅಧಿಕಾರಿಗಳು ಹೆಚ್ಚಿನ ವಿದ್ಯಾರ್ಹತೆ ಹೊಂದಿರುವವರಾಗಿದ್ದಾರೆ. ಹಲವರು ಜೀವನದಲ್ಲಿ ಸಾಕಷ್ಟು ಹೋರಾಟ, ನೋವಿನಿಂದ ಬಂದಿರುವವರಾಗಿದ್ದಾರೆ. ಹೀಗಾಗಿ ಕೆಲ ಅಧಿಕಾರಿಗಳಿಗೆ ಶಾಲೆಗಳ ಜವಾಬ್ದಾರಿಯನ್ನು ನೀಡಲಾಗಿದೆ. ಕಚೇರಿಗೆ ಹತ್ತಿರವಿರುವ ಶಾಲೆಗಳ ಜವಾಬ್ದಾರಿಗಳನ್ನು ಅಧಿಕಾರಿಗಳಿಗೆ ನೀಡಲಾಗಿದೆ ಎಂದು ಹೇಳಿದ್ದಾರೆ. 

2018ರ ಎಸ್ಎಸ್ಎಲ್'ಸಿ ಪರೀಕ್ಷೆಯಲ್ಲಿ ರಾಮನಗರ ನಂ.1 ಸ್ಥಾನ ಪಡೆದುಕೊಂಡಿದೆ. 2019ರಲ್ಲಿ ಎರಡನೇ ಸ್ಥಾನ ಪಡೆದುಕೊಂಡಿತ್ತು. ಹೀಗಾಗಿ ಅಧಿಕಾರಿಗಳು ಶಾಲೆಗಳಿಗೆ ವಾರಕ್ಕೆ ಒಂದು ಅಥವಾ 2 ಬಾರಿ ಭೇಟಿ ನೀಡುವಂತೆ ತಿಳಿಸಲಾಗಿದೆ. ವಿದ್ಯಾರ್ಥಿಗಳೊಂದಿಗೆ ಹಾಗೂ ಅವರ ಶಿಕ್ಷಕರು, ಪೋಷಕರೊಂದಿಗೆ ಮಾತುಕತೆ ನಡೆಸುವಂತೆ ತಿಳಿಸಲಾಗಿದೆ. 

ಪೋಷಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸುವ ಅಧಿಕಾರಿಗಳನ್ನು ಸಲಹೆಗಳನ್ನು ನೀಡುತ್ತಾರೆ. ಈ ಕುರಿತು ನಮಗೆ ಅಧಿಕಾರಿಗಳು ವರದಿಗಳನ್ನೂ ಕೂಡ ಸಲ್ಲಿಸಲಿದ್ದಾರೆ. ಅಗತ್ಯಬಿದ್ದರೆ, ಅಧಿಕಾರಿಗಳಿಗೆ ಬೋಧನೆ ಜವಾಬ್ದಾರಿಯನ್ನೂ ನೀಡಲಾಗುತ್ತದೆ ಎಂದಿದ್ದಾರೆ. 

ಇನ್ನೂ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು, ಕೊಡಗು, ಮಂಡ್ಯ, ಚಿಕ್ಕಬಳ್ಳಾಪುರ ಹಾಗೂ ರಾಯಚೂರಿನಲ್ಲಿ ಸಾಕಷ್ಟು ಸಿಇಒಗಳಿದ್ದಾರೆ. ಈ ಎಲ್ಲಾ ಸಿಇಒಗಳು ಸ್ಥಳೀಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಶಿಕ್ಷಣ ಇಲಾಖೆಯ ಅಭಿವೃದ್ಧಿಗೆ ನೆರವಾಗುತ್ತಿದ್ದಾರೆ. ಪ್ರತೀಯೊಬ್ಬ ಅಧಿಕಾರಿ ನಡುವೆ ಆರೋಗ್ಯಕರ ಪೈಪೋಟಿಗಳು ಮೂಡಿವೆ. ಕೊಡಗು ಸಿಇಒ ವಿದ್ಯಾರ್ಥಿಗಳಿಗ ಪತ್ರ ಬರೆಯುತ್ತಿದ್ದಾರೆ. ಪತ್ರದಲ್ಲಿ ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ತುಂಬುತ್ತಿದ್ದಾರೆ. ಮಂಡ್ಯ, ಚಿಕ್ಕಬಳ್ಳಾಪುರ ಹಾಗೂ ರಾಯಚೂರಿನಲ್ಲಿ ವಿದ್ಯಾರ್ಥಿಗಳು ಉತ್ತಮ ಅಂಕಗಳಿಸಲು ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಎಸ್ಎಸ್ಎಲ್'ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಬರುವ ವಿಶ್ವಾಸ ನನಗಿದೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com