ವಸತಿ ಇಲಾಖೆಯಲ್ಲಿ ಗೋಲ್ಮಾಲ್ ಆಗಲು ಬಿಡುವುದಿಲ್ಲ: ಸಚಿವ ವಿ.ಸೋಮಣ್ಣ  

ಇನ್ಮುಂದೆ ವಸತಿ ಇಲಾಖೆಯಲ್ಲಿ ಗೋಲ್ಮಾಲ್ ನಡೆಯಲು ಬಿಡುವುದಿಲ್ಲ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದರು.

Published: 14th January 2020 09:00 AM  |   Last Updated: 14th January 2020 09:00 AM   |  A+A-


V.somanna

ವಿ.ಸೋಮಣ್ಣ

Posted By : Shilpa D
Source : UNI

ಬೆಂಗಳೂರು: ಇನ್ಮುಂದೆ ವಸತಿ ಇಲಾಖೆಯಲ್ಲಿ ಗೋಲ್ಮಾಲ್ ನಡೆಯಲು ಬಿಡುವುದಿಲ್ಲ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದರು.

ವಿಧಾನ ಸೌಧದಲ್ಲಿ ವಸತಿ ಇಲಾಖೆ ಕುರಿತ ಸಂಪುಟ ಉಪ ಸಮಿತಿ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ವಸತಿ ಇಲಾಖೆಯಲ್ಲಿ ಅರ್ಹರಿಗೆ ಮನೆ ಸಿಗಲಿ ಅನ್ನೋ ಕಾರಣಕ್ಕೆ ಸಮಿತಿ ರಚನೆ ಆಗಿದೆ.

ವಿವಿಧ ಸಚಿವರನ್ನು ಒಳಗೊಂಡಂತೆ ಸಮಿತಿಯ ಮೊದಲ ಸಭೆ ನಡೆಸಿದ್ದೇವೆ. ಸೂರಿಲ್ಲದ ಬಡವರಿಗೆ ಮನೆ ಸಿಗಬೇಕು ಅನ್ನೊದೆ ನಮ್ಮ ಆಶಯ ಎಂದ ತಿಳಿಸಿದರು

ವಿವಿಧ ಹೆಸರಿನಲ್ಲಿರುವ ವಸತಿ ಯೋಜನೆಗಳನ್ನು ಒಂದೇ ಸೂರಿನಡಿ ತರಲು ಸರ್ಕಾರ ಪ್ರಯತ್ನ ನಡೆಸಿದೆ , ವಸತಿ ಇಲಾಖೆಯಲ್ಲಿ ಅರ್ಹರಿಗೆ ಮನೆ ದೊರಕಿಸಿಕೊಡುವ ಉದ್ದೇಶದಿಂದ ಸಂಪುಟ ಉಪ ಸಮಿತಿ ರಚನೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ಸೂರಿಲ್ಲದ ಬಡವರಿಗೆ ಮನೆ ಸಿಗಬೇಕು ಎನ್ನುವುದು ಸರ್ಕಾರದ ಗುರಿಯಾಗಿದ್ದು, ಈ ಬಗ್ಗೆ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಲಾಗಿದೆ ಎಂದರು. ಈಗಾಗಲೇ ಅಕ್ರಮವಾಗಿ ಮನೆ ನಿರ್ಮಿಸಿಕೊಂಡಿರುವ ಬಗ್ಗೆ ತನಿಖೆ ನಡೆಯುತ್ತಿದೆ. ಐದಾರು ತಿಂಗಳಲ್ಲಿ ವಸತಿ ಇಲಾಖೆಗೆ ಕಾಯಕಲ್ಪ ಕಲ್ಪಿಸಲಾಗುವುದು. ಅದಕ್ಕಾಗಿ ಸಂಪುಟ ಉಪ ಸಮಿತಿಯಲ್ಲಿ ಸುದೀರ್ಘ‌ ಚರ್ಚೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ. 

ಪ್ರತಿ ಫ‌ಲಾನುಭವಿಗೆ ಆಧಾರ ಮತ್ತು ರೇಷನ್‌ ಕಾರ್ಡ್‌ ಲಿಂಕ್‌ ಮಾಡುವ ಮೂಲಕ ಅಕ್ರಮಕ್ಕೆ ತಡೆಯೊಡ್ಡಲು ಪ್ರಯತ್ನ ನಡೆಸಲಾಗುತ್ತಿದೆ ಎಂದು ಹೇಳಿದರು. 

Stay up to date on all the latest ರಾಜ್ಯ news with The Kannadaprabha App. Download now
facebook twitter whatsapp