ಚಿಕ್ಕ ಮಗಳೂರು: ಅಪರೂಪದ ಸಿದ್ದರಾಮೇಶ್ವರ ಶಿಲಾ ಪ್ರತಿಮೆ ಪತ್ತೆ

ಜಿಲ್ಲೆಯ ಸೊಲ್ಲಾಪುರ ಶಿವಯೋಗಿ ಸಿದ್ದರಾಮೇಶ್ವರ ಆವಾಸ ಸ್ಥಾನ, ಸೊನ್ನಲಿಗೆಯಲಲಲಿ ಸಿದ್ದರಾಮೇಶ್ವರ ದೇವಾಲಯ ಕೂಡ ಇದೆ ಷ ಈ ದೇವಾಲಯದಲ್ಲಿರುವ ರಥ ಮಂಟಪ ಮತ್ತು ಕಂಗಳು ವಿಜಯ ನಗರ ಆಡಳಿತ ಕಾಲದಲ್ಲಿ ನಿರ್ಮಿಸಲ್ಪಟ್ಟಿದೆ. ಈ ಐತಿಹಾಸಿಕ ಸ್ಮಾರಕವನ್ನು ಗ್ರಾನೈಟ್ ನಲ್ಲಿ ನಿರ್ಮಿಸಲಾಗಿದೆ.
ಸಿದ್ದರಾಮೇಶ್ವರ ಶಿಲಾ ಪ್ರತಿಮೆ ಪತ್ತೆ
ಸಿದ್ದರಾಮೇಶ್ವರ ಶಿಲಾ ಪ್ರತಿಮೆ ಪತ್ತೆ

ಚಿಕ್ಕಮಗಳೂರು:  ಜಿಲ್ಲೆಯ ಸೊಲ್ಲಾಪುರ ಶಿವಯೋಗಿ ಸಿದ್ದರಾಮೇಶ್ವರ ಆವಾಸ ಸ್ಥಾನ, ಸೊನ್ನಲಿಗೆಯಲಲಲಿ ಸಿದ್ದರಾಮೇಶ್ವರ ದೇವಾಲಯ ಕೂಡ ಇದೆ ಷ ಈ ದೇವಾಲಯದಲ್ಲಿರುವ ರಥ ಮಂಟಪ ಮತ್ತು ಕಂಗಳು ವಿಜಯ ನಗರ ಆಡಳಿತ ಕಾಲದಲ್ಲಿ ನಿರ್ಮಿಸಲ್ಪಟ್ಟಿದೆ. ಈ ಐತಿಹಾಸಿಕ ಸ್ಮಾರಕವನ್ನು ಗ್ರಾನೈಟ್ ನಲ್ಲಿ ನಿರ್ಮಿಸಲಾಗಿದೆ.

ಇತಿಹಾಸ  ತಜ್ಞ ಪಾಂಡುರಂಗ ಅವರು, ಸಿದ್ದರಾಮೇಶ್ವರ ಮತ್ತು ಶಿವಭಕ್ತ ವೀರಮುಷ್ಟಿ ಭಟ ಅವರ ಚಿತ್ರವಿರುವ ಶಿಲ್ಪಕಲಾಕೃತಿಯನ್ನು ಪತ್ತೆ ಹಚ್ಚಿದ್ದಾರೆ. ಕಂಬಜದ ಎಡಭಾಗದಲ್ಲಿ ಜೋಡಿಯೊಂದು ಕೈ ಮುಗಿದು ನಿಂತಿದೆ. ಇತಿಹಾಸಕಾರರ ಪ್ರಕಾರ, ಅದು  ತರಿಕೆರೆಯ ಪಾಳೇಗಾರ್ ದಂಪತಿ ಸರ್ಜಾ ಸೀತಾರಾಮಪ್ಪ ಮತ್ತು ಅವರ ಪತ್ನಿ ನಾಗತಿ ಎಂದು ಹೇಳಲಾಗುತ್ತಿದೆ.  1648 ರಿಂದ 1679ರ ವರೆಗೆ ಈ ಪಾಳೇಗಾರರ ಆಡಳಿತವಿದ್ದು ಆ ಸಮಯದಲ್ಲಿ ಇದ್ನು ರಚಿಸಲಾಗಿದೆ ಎಂದು ಹೇಳಲಾಗುತ್ತಿದೆ.

ರಥ ಮಂಟಪ  ನೈರುತ್ಯ ದಿಕ್ಕಿಗಿದ್ದು,  ಲಕುಲ ಪಶುಪತಿ, ಯತಿ ತನ್ನ ಎಡಗೈಯಲ್ಲಿ ಲಿಂಗ ಹಿಡಿದು ಬಲಗೈಯಲ್ಲಿ ಹೂವಿಂದ ಪೂಜಿಸುತ್ತಿದ್ದಾರೆ  ಎಂದು ಹೇಳಲಾಗಿದೆ. ಇಂತಹ ಅಪರೂಪಕ ಶಿಲ್ಪಕಲೆಯನ್ನು ಇತಿಹಾಸಕಾರ ಪಾಂಡುರಂಗ ಆವಿಷ್ಕರಿಸಿದ್ದಾರೆ,  ಇದು ನಿಜವಾಗಿಯೂ ಸಿದ್ದರಾಮೇಶ್ವರ ಅವರ ಚಿತ್ರವಾಗಿದೆ. ಲಿಂಗ ಪೂಜೆ  ಮಾಡುವ ಚಿತ್ರವಾಗಿದೆ. ದೇವಾಲಯದ ನವರಂಗದಲ್ಲಿ ಬ್ರಹ್ಮಚಾರಿ ಸಿದ್ದರಾಮ ಮತ್ತು ವೀರಮುಸ್ಟಿ ಭಠ ಅವರ ಕೆತ್ತಿದ  ಚಿತ್ರಗಳಿವೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com