ಮೈಸೂರು: ಡ್ರಾಪ್ ಕೊಡುವ ನೆಪದಲ್ಲಿ ಟೆಕ್ಕಿಯ ಸುಲಿಗೆ

ಮೈಸೂರು ಗ್ರಾಮಾಂತರ ಬಸ್ಸು ನಿಲ್ದಾಣದಲ್ಲಿ ಡ್ರಾಪ್‌ ಕೊಡುವ ನೆಪದಲ್ಲಿ ಟೆಕ್ಕಿಗೆ ಚಾಕುವಿನಿಂದ ಹಲ್ಲೆ ನಡೆಸಿ ನಗದು-ಚಿನ್ನಾಭರಣ ದೋಚಿ ದರೋಡೆಕೋರರು ಪರಾರಿಯಾಗಿದ್ದಾರೆ.
ಮೈಸೂರು: ಡ್ರಾಪ್ ಕೊಡುವ ನೆಪದಲ್ಲಿ ಟೆಕ್ಕಿಯ ಸುಲಿಗೆ
ಮೈಸೂರು: ಡ್ರಾಪ್ ಕೊಡುವ ನೆಪದಲ್ಲಿ ಟೆಕ್ಕಿಯ ಸುಲಿಗೆ

ಮೈಸೂರು: ಮೈಸೂರು ಗ್ರಾಮಾಂತರ ಬಸ್ಸು ನಿಲ್ದಾಣದಲ್ಲಿ ಡ್ರಾಪ್‌ ಕೊಡುವ ನೆಪದಲ್ಲಿ ಟೆಕ್ಕಿಗೆ ಚಾಕುವಿನಿಂದ ಹಲ್ಲೆ ನಡೆಸಿ ನಗದು-ಚಿನ್ನಾಭರಣ ದೋಚಿ ದರೋಡೆಕೋರರು ಪರಾರಿಯಾಗಿದ್ದಾರೆ.

ಮೈಸೂರಿನ ಗೌರಿಶಂಕರ ನಗರದ ನಿವಾಸಿ ಮಧುವಿಕಾಸ್ ಎಂಬುವವರು ಚಿನ್ನ, ಹಣ ಕಳೆದುಕೊಂಡ ಟೆಕ್ಕಿ. ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ಮಧುವಿಕಾಸ್ ಅವರು ಸೋಮವಾರ ಮುಂಜಾನೆ ಬೆಂಗಳೂರಿಗೆ ತೆರಳಲು ಗ್ರಾಮಾಂತರ ಬಸ್ಸು ನಿಲ್ದಾಣಕ್ಕೆ ಬಂದಿದ್ದರು. ಈ ವೇಳೆ ಕಾರಿನಲ್ಲಿದ್ದ ಮೂವರು ಡ್ರಾಪ್ ನೀಡುವುದಾಗಿ ಹೇಳಿದ್ದರು. ತುರ್ತಾಗಿ ಬೆಂಗಳೂರಿಗೆ ತೆರಳಬೇಕಾಗಿರುವುದರಿಂದ  ಮಧುವಿಕಾಸ್ ಕಾರು ಹತ್ತಿದ್ದರು.

ಕಾರು, ಕೊಲಂಬಿಯಾ ಏಷಿಯಾ ಬಳಿ ರಿಂಗ್ ರಸ್ತೆ ಮೂಲಕ ಕೆ.ಆರ್.ಎಸ್ ರಸ್ತೆ ಕಡೆಗೆ ಹೊರಟಿತ್ತು. ಆಗ ಕಾರು ನಿಲ್ಲಿಸಿ ಚಾಕು ತೋರಿಸಿದ ದುಷ್ಕರ್ಮಿಗಳು, ಮಧುವಿಕಾಸ್ ಬಳಿ ಇದ್ದ  5 ಗ್ರಾಂ ಉಂಗುರ, 10 ಗ್ರಾಂ ತೂಕದ ಚಿನ್ನದ ಸರ ಹಾಗೂ ಒಂಟಿಕೊಪ್ಪಲಿನ ಎಟಿಎಂನಲ್ಲಿ 20 ಸಾವಿರ ರೂ. ಮತ್ತು ಅಶೋಕ ರಸ್ತೆಯ ಎಟಿಎಂನಲ್ಲಿ 23 ಸಾವಿರ ರೂ. ಡ್ರಾ ಮಾಡಿ ಒಟ್ಟು 44 ಸಾವಿರ ರೂ ಹಣ ದೋಚಿ ಪರಾರಿಯಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮಧುವಿಕಾಸ್ ಮೈಸೂರಿನ ಲಷ್ಕರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಮೂವರು ದರೋಡೆಕೋರರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com