'ಅಲ್ಲಾಡ್ಸು ಅಲ್ಲಾಡ್ಸು' ಹಾಡಿಗೆ ಹೆಜ್ಜೆ ಹಾಕಿದ  ಶಿಕ್ಷಕಿಯರು, ಶಿಕ್ಷಣ ಸಚಿವರಿಂದ ಕ್ರಮದ ಭರವಸೆ

ಕಾಶಿನಾಥ್ ಅಭಿನಯದ ಚೌಕ ಚಿತ್ರದ "ಅಲ್ಲಾಡ್ಸು ಅಲ್ಲಾಡ್ಸು " ಇತ್ತೀಚೆಗೆ ಭಾರಿ ಸದ್ದು ಮಾಡಿ ಎಲ್ಲರ ಬಾಯಲ್ಲೂ ಗುನುಗುನಿಸುವಂತೆ ಮಾಡಿತ್ತು. ಮದ್ಯಪ್ರಿಯರಿಗಿಂತೂ ಈ ಹಾಡು ಕಿಕ್ ಕೊಟ್ಟಿತ್ತು‌. ಇಂತಹ ಈ ಹಾಡು ಇಂದೂ ಕೂಡ ಅಷ್ಟೇ ಪ್ರಸಿದ್ಧಿಯೂ ಹೌದು.
'ಅಲ್ಲಾಡ್ಸು ಅಲ್ಲಾಡ್ಸು' ಹಾಡಿಗೆ ಹೆಜ್ಜೆ ಹಾಕಿದ  ಶಿಕ್ಷಕಿಯರು
'ಅಲ್ಲಾಡ್ಸು ಅಲ್ಲಾಡ್ಸು' ಹಾಡಿಗೆ ಹೆಜ್ಜೆ ಹಾಕಿದ ಶಿಕ್ಷಕಿಯರು

ಬೆಂಗಳೂರು: ಕಾಶಿನಾಥ್ ಅಭಿನಯದ ಚೌಕ ಚಿತ್ರದ "ಅಲ್ಲಾಡ್ಸು ಅಲ್ಲಾಡ್ಸು " ಇತ್ತೀಚೆಗೆ ಭಾರಿ ಸದ್ದು ಮಾಡಿ ಎಲ್ಲರ ಬಾಯಲ್ಲೂ ಗುನುಗುನಿಸುವಂತೆ ಮಾಡಿತ್ತು. ಮದ್ಯಪ್ರಿಯರಿಗಿಂತೂ ಈ ಹಾಡು ಕಿಕ್ ಕೊಟ್ಟಿತ್ತು‌. ಇಂತಹ ಈ ಹಾಡು ಇಂದೂ ಕೂಡ ಅಷ್ಟೇ ಪ್ರಸಿದ್ಧಿಯೂ ಹೌದು.

ಈ ಹಾಡು ಸಂಗೀತ ಬಹುತೇಕ ಜನಸಾಮಾನ್ಯರಿಗೂ ಇಷ್ಟ. ಇತ್ತೀಚೆಗೆ ಈ ಅಲ್ಲಾಡ್ಸು ಅಲ್ಲಾಡ್ಸು ಮತ್ತೆ ಸದ್ದು ಮಾಡುತ್ತಿದೆ‌. ಅರೆ ಚಿತ್ರ ಬಿಡುಗಡೆಯಾಗಿ 3ವರ್ಷ ಆದ ನಂತರ ಈಗ ಮತ್ತೆ ಈ ಹಾಡು ಮುನ್ನಲೆಗೆ ಬಂದಿದೆ ಎಂದು ಆಶ್ಚರ್ಯ ಅಲ್ಲವೆ?. ಹೌದು, ಅಲ್ಲಾಡ್ಸು ಅಲ್ಲಾಡ್ಸು ಎಂದು ಯಾವುದೇ ಸಿನಿಪ್ರಿಯರು ಗುನುಗುತ್ತಿಲ್ಲ. ಮದ್ಯ ಪ್ರಿಯರು ಹೇಳಿಕೊಂಡು ಕುಣಿದಾಡುತ್ತಿಲ್ಲ. ಬದಲಿಗೆ ಶಾಲಾ ಶಿಕ್ಷಕಿಯರು ಅಲ್ಲಾಡ್ಸು ಅಲ್ಲಾಡ್ಸು ಎಂದು ಬಹಿರಂಗವಾಗಿ ಸೊಂಟ ಬಳುಕಿಸಿ ನೃತ್ಯ ಮಾಡಿರುವ ವಿಡಿಯೋ ವೈರಲ್ ಆಗಿದೆ.

ಶಾಲಾ ಶಿಕ್ಷಕಿಯರೇ ಮದ್ಯಪಾನ ಪ್ರಚೋದಿಸುವಂತೆ ನೃತ್ಯಮಾಡಿದ್ದಕ್ಕೆ ಈಗ ದಂಡ ತೆತ್ತಬೇಕಾಗಿದೆ. ಕಳೆದೆರಡು ದಿನಗಳಿಂದ ಬೆಂಗಳೂರು ದಕ್ಷಿಣ ವಲಯದ ಹನುಮಂತನಗರದ ರಾಮಾಂಜನೇಯ ರಸ್ತೆಯಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಶಿಕ್ಷಕಿಯರು ಶಾಲಾ ಆವರಣದ ವೇದಿಕೆಯಲ್ಲಿ ಹಸಿರು ಸೀರೆಯುಟ್ಟು ಸಾಮೂಹಿಕವಾಗಿ ಕೈಯಲ್ಲಿ ನೀರಿನ ಬಾಟಲಿಗಳನ್ನು ಮದ್ಯದ ಬಾಟಲಿ ಮಾದರಿಯಲ್ಲಿ "ಅಲ್ಲಾಡ್ಸು ಅಲ್ಲಾಡ್ಸು" ಎಂದು ಹೆಜ್ಜೆಹಾಕಿ ರಂಗೇರಿಸಿದ್ದರು. 

ಇದೀಗ ಈ ವಿಡಿಯೋ ನೋಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಶಾಲೆಗೆ ನೋಟೀಸ್ ಕೊಟ್ಟು ಸೂಕ್ತ ಕ್ರಮ ಜರುಗಿಸುವ ಭರವಸೆ ನೀಡಿದ್ದಾರೆ.

"ಸಭ್ಯತೆಯಲ್ಲದ ಹಾಡಿಗೆ ಶಿಕ್ಷಕರು ಡ್ಯಾನ್ಸ್ ಮಾಡಿದ್ದು ಸರಿಯಲ್ಲ ಅಂತಾ ಶಾಲೆಗೆ ನೋಟಿಸ್ ಜಾರಿ ಮಾಡುತ್ತಿದ್ದೇನೆ" ಎಂದಿದ್ದಾರೆ.ಇನ್ನು ಸಚಿವರ ನೋಟೀಸ್ ಗೆ ಶಾಲೆಯಿಂದ ಯಾವ ಬಗೆಯ ಪ್ರತಿಕ್ರಿಯೆ ಬಂದಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com