ಫ್ರೀ ಕಾಶ್ಮೀರ ನಾಮಫಲಕ: ನಳಿನಿ ಪರ ವಕಾಲತ್ತಿಗೆ ವಕೀಲರ ಸಂಘ ನಿರಾಕರಣೆ

ಜೆಎನ್'ಯು ಹಿಂಸಾಚಾರ ಖಂಡಿಸಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗೆ ನಡೆದಿದ್ದ ಪ್ರತಿಭಟನೆ ವೇಳೆ ಫ್ರೀ ಕಾಶ್ಮೀರ್ ಫಲಕ ಪ್ರದರ್ಶಿಸುವ ಮೂಲಕ ವಿವಾದ ಸೃಷ್ಟಿಸಿರುವ ನಳಿನಿ ಬಾಲಕುಮಾರ್ ಪರ ವಕಾಲತ್ತು ವಹಿಸದಿರಲು ಮೈಸೂರು ಜಿಲ್ಲ ವಕೀಲರ ಸಂಘ ನಿರ್ಧರಿಸಿದೆ. 
ನಳಿನಿ ಬಾಲಕುಮಾರ್
ನಳಿನಿ ಬಾಲಕುಮಾರ್

ಮೈಸೂರು: ಜೆಎನ್'ಯು ಹಿಂಸಾಚಾರ ಖಂಡಿಸಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗೆ ನಡೆದಿದ್ದ ಪ್ರತಿಭಟನೆ ವೇಳೆ ಫ್ರೀ ಕಾಶ್ಮೀರ್ ಫಲಕ ಪ್ರದರ್ಶಿಸುವ ಮೂಲಕ ವಿವಾದ ಸೃಷ್ಟಿಸಿರುವ ನಳಿನಿ ಬಾಲಕುಮಾರ್ ಪರ ವಕಾಲತ್ತು ವಹಿಸದಿರಲು ಮೈಸೂರು ಜಿಲ್ಲ ವಕೀಲರ ಸಂಘ ನಿರ್ಧರಿಸಿದೆ. 

ನಳಿನಿ ವಿರುದ್ಧ ದೇಶದ್ರೋಹದ ಆರೋಪ ಇರುವ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ವಕೀಲರ ಸಂಘ ತಿಳಿಸಿದೆ. 

ಮಾನಸಗಂಗೋತ್ರಿಯಲ್ಲಿ ಜ.8 ರಂದು ನಡೆದ ಪ್ರತಿಭಟನೆಯಲ್ಲಿ ಫ್ರೀ ಕಾಶ್ಮೀರ ಫಲಕ ಪ್ರದರ್ಶಿಸಿದ ಸಂಬಂಧ ಜಯಲಕ್ಷ್ಮೀಪುರಂ ಠಾಣೆಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಾಲಯದಿಂದ ಮಧ್ಯಂತರ ಜಾಮೀನು ಪಡೆದಿದ್ದ ಮೈಸೂರು ವಿವಿಯ ಹಳೇ ವಿದ್ಯಾರ್ಥಿನಿಯೂ ಆಗಿರುವ ನಳಿನಿ, ಪೊಲೀಸರ ಎದುರು ಹಾಜರಾಗಿ ತಮ್ಮ ಹೇಳಿಕೆಯನ್ನೂ ದಾಖಲಿಸಿದ್ದಳು. ಆದರೆ ನಳಿನಿ ವಿರುದ್ಧ ದೇಶದ್ರೋಹದ ಆರೋಪ ಇರುವ ಹಿನ್ನೆಲೆಯಲ್ಲಿ ನಳಿನಿ ಪರ ವಕಾಲತ್ತು ವಹಿಸದಂತೆ ಮೈಸೂರು ವಕೀಲರ ಸಂಘ, ಮೈಸೂರು ನಗರ ವಕೀಲರ ವಿವಧೋದ್ದೇಶ ಸಹಕಾರ ಸಂಘ ಸಭೆ ನಡೆಸಿ ತೀರ್ಮಾನ ತೆಗೆದುಕೊಂಡಿದೆ ಎಂದು ಮೈಸೂರು ನಗರ ವಕೀಲರ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಆನಂದ್ ತಿಳಿಸಿದ್ದಾರೆ. 

ಈ ನಡುವೆ ನಳಿನಿಗೆ ಮಧ್ಯಂತರ ಜಾಮೀನು ಕೊಡಿಸಿದ್ದ ವಕೀಲ ಪೃಥ್ವಿ ಕಿರಣ ಶೆಟ್ಟಿ ಕೂಡ ಮುಂದೆ ಆಕೆ ಪರ ವಕಾಲತ್ತಿನಿಂದ ಹಿಂದೆ ಸರಿಯಲು ನಿರ್ಧರಿಸಿರುವುದಾಗಿ ಮೈಸೂರು ವಕೀಲರ ಸಂಘದ ಅಧ್ಯಕ್ಷರಿಗೆ ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com