ಬೈಕ್ ನಿಂದ ಬಿದ್ದ ಮಹಿಳೆ ಬಸ್ಸಿನ ಚಕ್ರಕ್ಕೆ ಸಿಲುಕಿ ಸಾವು

ಬೈಕ್ ನಿಂದ ಬಿದ್ದ ಮಹಿಳೆಯೊಬ್ಬರು ಬಸ್ ಚಕ್ರಕ್ಕೆ ಸಿಲುಕಿ ಮೃತಪಟ್ಟಿರುವ ಘಟನೆ ನಗರದ ರಾಷ್ಟ್ರಪತಿ ಚೌಕ್ ಬಳಿ ಸಂಭವಿಸಿದೆ.
ಬೈಕ್ ನಿಂದ ಬಿದ್ದ ಮಹಿಳೆ ಬಸ್ಸಿನ ಚಕ್ರಕ್ಕೆ ಸಿಲುಕಿ ಸಾವು
ಬೈಕ್ ನಿಂದ ಬಿದ್ದ ಮಹಿಳೆ ಬಸ್ಸಿನ ಚಕ್ರಕ್ಕೆ ಸಿಲುಕಿ ಸಾವು

ಕಲಬುರಗಿ: ಬೈಕ್ ನಿಂದ ಬಿದ್ದ ಮಹಿಳೆಯೊಬ್ಬರು ಬಸ್ ಚಕ್ರಕ್ಕೆ ಸಿಲುಕಿ ಮೃತಪಟ್ಟಿರುವ ಘಟನೆ ನಗರದ ರಾಷ್ಟ್ರಪತಿ ಚೌಕ್ ಬಳಿ ಸಂಭವಿಸಿದೆ.

55 ವರ್ಷದ ನಸೀಮಾ ಬೇಗಂ ಮೃತ ದುರ್ದೈವಿ. ನಸೀಮಾ ಬೇಗಂ ತಮ್ಮ ಪತಿ ಮೆಹಬೂಬ್ ಸಾಹೇಬ್ ಜೊತೆ ಬೈಕ್ ಮೇಲೆ ತೆರಳುತ್ತಿದ್ದಾಗ ಬೈಕ್ ಸ್ಕಿಡ್ ಆಗಿ ದಂಪತಿ ನೆಲದ ಮೇಲೆ ಬಿದ್ದಿದ್ದಾರೆ.

ಪತಿ ಒಂದೆಡೆ ಬಿದ್ದರೆ, ಎದುರಿನಿಂದ ಬರುತ್ತಿದ್ದ ಬಸ್ಸಿನ ಚಕ್ರ ಹರಿದು ಪತ್ನಿ ನಸೀಮಾ ಬೇಗಂ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.  ಪತಿ ಮೆಹಬೂಬ್ ಸಾಬ್ ಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ನಗರ ಸಂಚಾರಿ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com