ಕೊಪ್ಪಳ: ಸ್ವಚ್ಛತೆಯಲ್ಲಿ ನಿರತರಾಗಿದ್ದ ಪೌರ ಕಾರ್ಮಿಕರಿಗೆ ಉಪಹಾರ ಬಡಿಸಿದ ಶ್ರೀಗಳು

ದಕ್ಷಿಣ ಭಾರತದ ಕುಂಭಮೇಳ ಎಂದೇ ಖ್ಯಾತಿ ಪಡೆದಿರುವ ಕೊಪ್ಪಳದ ಗವಿಸಿದ್ದೇಶ್ವರ ಜಾತ್ರಾ ಮಹೋತ್ವ ಬಹಳ ವಿಜೃಂಭಣೆಯಿಂದ ನಡೆಯುತ್ತಿದ್ದು, ಜಾತ್ರೆಗೆ ಬರುವ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. 
ಉಪಹಾರ ಬಡಿಸುತ್ತಿರುವ ಶ್ರೀಗಳು
ಉಪಹಾರ ಬಡಿಸುತ್ತಿರುವ ಶ್ರೀಗಳು

ಕೊಪ್ಪಳ: ದಕ್ಷಿಣ ಭಾರತದ ಕುಂಭಮೇಳ ಎಂದೇ ಖ್ಯಾತಿ ಪಡೆದಿರುವ ಕೊಪ್ಪಳದ ಗವಿಸಿದ್ದೇಶ್ವರ ಜಾತ್ರಾ ಮಹೋತ್ವ ಬಹಳ ವಿಜೃಂಭಣೆಯಿಂದ ನಡೆಯುತ್ತಿದ್ದು, ಜಾತ್ರೆಗೆ ಬರುವ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. 

ಈ ಮಧ್ಯೆ, ಜಾತ್ರೆಯಲ್ಲಿ ಸ್ವಚ್ಛತೆಯಲ್ಲಿ ನಿರತರಾಗಿದ್ದ ಪೌರ ಕಾರ್ಮಿಕರಿಗೆ ಗವಿಸಿದ್ದೇಶ್ವರ ಮಠದ ಅಭಿನವ ಗವಿಶ್ರೀಗಳು ಸ್ವತಃ ತಾವೇ ಉಪಹಾರ ಬಡಿಸುವ ಮೂಲಕ ಇತರರಿಗೆ ಆದರ್ಶರಾಗಿದ್ದಾರೆ.

ಮಠದ ಆವರಣದಲ್ಲಿ ನೂರಾರು ಕಾರ್ಮಿಕರಿಗೆ ಉಪಹಾರ ವ್ಯವಸ್ಥೆ ಮಾಡಿದ್ದ ಶ್ರೀಗಳು, ಉಪಹಾರವನ್ನು ತಾವೇ ಬಡಿಸಿದರು. ಶ್ರೀಗಳಿಗೆ ಪೊಲೀಸ್ ಅಧಿಕಾರಿ ಮೌನೇಶ್ವರ ಅವರು ಸಾಥ್ ನೀಡಿದರು.

ಕಳೆದ ಒಂದು ವಾರದಿಂದ ಜಾತ್ರೆಯಲ್ಲಿ ಸ್ವಚ್ಛತೆ ಕಾಪಾಡಿದ ಪೌರ ಕಾರ್ಮಿಕರಿಗೆ ಶ್ರೀಗಳು ಉಪಹಾರ ಬಡಿಸುವ ಮೂಲಕ ಅಭಿನಂದನೆ ಸಲ್ಲಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com