ಅದಮಾರು ಕಿರಿಯ ಶ್ರೀ ಈಶ ಪ್ರಿಯ ತೀರ್ಥರ ಪರ್ಯಾಯ ಸರ್ವಜ್ಞ ಪೀಠಾರೋಹಣಕ್ಕೆ ಉಡುಪಿ ಸಕಲ ಸಜ್ಜು

ನಾಳೆ ಹಾಗೂ ನಾಡಿದ್ದು ನಡೆಯಲಿರುವ 250ನೇ ಪರ್ಯಾಯೋತ್ಸವ ಸಂದರ್ಭದಲ್ಲಿ ಅದಮಾರು ಮಠದ ಕಿರಿಯ ಶ್ರೀ ಈಶ ಪ್ರಿಯ ತೀರ್ಥ ಸ್ವಾಮಿ ಅವರು ಕೃಷ್ಣ ಮಠದಲ್ಲಿ ಪರ್ಯಾಯ ಸರ್ವಜ್ಞ ಪೀಠಾರೋಹಣಕ್ಕೆ ವೇದಿಕೆ ಸಜ್ಜುಗೊಂಡಿದೆ.
ಅದಮಾರು ಕಿರಿಯ ಶ್ರೀ ಈಶ ಪ್ರಿಯ ತೀರ್ಥರ ಪರ್ಯಾಯ ಸರ್ವಜ್ಞ ಪೀಠಾರೋಹಣಕ್ಕೆ ಉಡುಪಿ ಸಕಲ ಸಜ್ಜು
ಅದಮಾರು ಕಿರಿಯ ಶ್ರೀ ಈಶ ಪ್ರಿಯ ತೀರ್ಥರ ಪರ್ಯಾಯ ಸರ್ವಜ್ಞ ಪೀಠಾರೋಹಣಕ್ಕೆ ಉಡುಪಿ ಸಕಲ ಸಜ್ಜು

ಉಡುಪಿ: ನಾಳೆ ಹಾಗೂ ನಾಡಿದ್ದು ನಡೆಯಲಿರುವ 250ನೇ ಪರ್ಯಾಯೋತ್ಸವ ಸಂದರ್ಭದಲ್ಲಿ ಅದಮಾರು ಮಠದ ಕಿರಿಯ ಶ್ರೀ ಈಶ ಪ್ರಿಯ ತೀರ್ಥ ಸ್ವಾಮಿ ಅವರು ಕೃಷ್ಣ ಮಠದಲ್ಲಿ ಪರ್ಯಾಯ ಸರ್ವಜ್ಞ ಪೀಠಾರೋಹಣಕ್ಕೆ ವೇದಿಕೆ ಸಜ್ಜುಗೊಂಡಿದೆ.

ಉಡುಪಿ ನಗರ ಸಂಪೂರ್ಣ ಅಲಂಕೃತಗೊಂಡು ಸಿದ್ದಗೊಂಡಿದ್ದು ಕೊನೆಯ ಹಂತದ ತಯಾರಿಗಳು ನಡೆಯುತ್ತಿವೆ ಎಂದು ಸ್ಥಳೀಯ ಶಾಸಕ ರಘುಪತಿ ಭಟ್ ಗುರುವಾರ ತಿಳಿಸಿದ್ದಾರೆ.

ಪರ್ಯಾಯ ಸರ್ವಜ್ಞ ಪೀಠಾರೋಹಣ ಆಯೋಜನೆಯ ಪೂರ್ಣ ಹೊಣೆಯನ್ನು ವಹಿಸಿಕೊಂಡಿರುವ ಶ್ರೀಕೃಷ್ಣಾ ಸೇವಾ ಬಳಗ ಸಾಕಷ್ಟು  ವ್ಯವಸ್ಥೆಗಳನ್ನು ಮಾಡಿಕೊಂಡಿದೆ. ಲಕ್ಷಾಂತರ ಭಕ್ತಾದಿಗಳು ಉಡುಪಿಗೆ ಆಗಮಿಸುವ ನಿರೀಕ್ಷೆಯಿದ್ದು ಅವರಿಗೆ ಒದಗಿಸಲಾಗುವ ಮೂಲಭೂತ ಸೌಕರ್ಯಗಳ ಬಗ್ಗೆ ಸರಕಾರ ಮತ್ತು ಜಿಲ್ಲಾಡಳಿತದ ಮಟ್ಟದಲ್ಲಿ ಸಭೆಗಳಾಗಿವೆ ಎಂದು ವಿವರಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಹದಿನೈದು ಜಾನಪದ ತಂಡಗಳು ಉಡುಪಿಗೆ ಬರಲಿದೆ. ವಿವಿಧ ಸರಕಾರಿ ಇಲಾಖೆಯಿಂದ ಸಾಮಾಜಿಕ, ಪೌರಾಣಿಕ ಹಾಗೂ ಐತಿಹಾಸಿ ಸಂದೇಶಗಳನ್ನು ಸಾರುವ ಆರು  ಸ್ತಬ್ಧ ಚಿತ್ರ ಗಳು ಪರ್ಯಾಯ ಮೆರವಣಿಗೆಯಲ್ಲಿ  ಪಾಲ್ಗೊಳ್ಳಲಿವೆ ಎಂದರು.

ಪರ್ಯಾಯ ಮಹೋತ್ಸವ ವೀಕ್ಷಿಸಲು ಬರುವ  ಸಾರ್ವಜನಿಕರಿಗೆ ಶ್ರೀ ಕೃಷ್ಣ ಸೇವಾ ಬಳಗದಿಂದ  ಪರಿಸರ ಸ್ನೇಹಿ ಪ್ಲಾಸ್ಟಿಕ್ ಮುಕ್ತ ದರ್ಬಾರ್ ಪಾಸುಗಳನ್ನು ವಿತರಿಸಲಾಗುತ್ತಿದೆ. ಸ್ವಚ್ಛತೆ, ಕುಡಿಯುವ ನೀರಿನ ಪೂರೈಕೆಗೆ ವ್ಯವಸ್ಥೆ, ಪ್ರವಾಸಿಗಳು, ಕಲಾವಿದರಿಗೆ ವಸತಿ ವ್ಯವಸ್ಥೆಯನ್ನು ಸಮರ್ಪಕ ರೀತಿಯಲ್ಲಿ ಪೂರ್ಣಗೊಂಡಿದೆ ಎಂದು ಶಾಸಕ ರಘುಪತಿ ಭಟ್  ವಿವರಿಸಿದ್ದಾರೆ. ಉಡುಪಿಯ ಸೇರಿಗಾರ ಕುಟುಂಬಸ್ಥರು ಪ್ರಸಾದ ತಯಾರಿಕೆ ಮತ್ತು ವಿತರಣೆಗಾಗಿ ರಾಜಾಂಗಣದ ಬಳಿ ಸುಮಾರು ಒಂದುವರೆ ಎಕರೆ ಸ್ಥಳದಲ್ಲಿ ಅವಕಾಶವನ್ನು ಕಲ್ಪಿಸಿದ್ದಾರೆ ಎಂದು ಶಾಸಕರು ತಿಳಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com