ಗಣರಾಜ್ಯೋತ್ಸವದ ವೇಳೆ ರಕ್ತಪಾತಕ್ಕೆ ಸಂಚು: ದಾಳಿಯಲ್ಲಿ ಭಟ್ಕಳ ವ್ಯಕ್ತಿ ಭಾಗಿ?

ಜನವರಿ 26ರ ಗಣರಾಜ್ಯೋತ್ಸವದ ದಿನದಂದು ರಕ್ತಪಾತ ನಡೆಸಲು ಉಗ್ರರು ಭಾರೀ ಸಂಚು ನಡೆಸಿದ್ದು, ಈ ಸಂಚಿನಲ್ಲಿ ಭಟ್ಕಳದ ವ್ಯಕ್ತಿ ಕೂಡ ಭಾಗಿಯಾಗಿದ್ದಾನೆಂದು ವರದಿಗಳು ತಿಳಿಸಿವೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕಾರವಾರ: ಜನವರಿ 26ರ ಗಣರಾಜ್ಯೋತ್ಸವದ ದಿನದಂದು ರಕ್ತಪಾತ ನಡೆಸಲು ಉಗ್ರರು ಭಾರೀ ಸಂಚು ನಡೆಸಿದ್ದು, ಈ ಸಂಚಿನಲ್ಲಿ ಭಟ್ಕಳದ ವ್ಯಕ್ತಿ ಕೂಡ ಭಾಗಿಯಾಗಿದ್ದಾನೆಂದು ವರದಿಗಳು ತಿಳಿಸಿವೆ. 

ದಾಳಿಗೆ ಸಂಚು ರೂಪಿಸಿದ್ದ ಉಗ್ರರ ರೇಖಾ ಚಿತ್ರಗಳನ್ನು ಬಿಡುಗಡೆ ಮಾಡಲಾಗಿದ್ದು, 9 ಮಂದಿ ಉಗ್ರರು ಜನವರಿ 26ರಂದು ರಾಜಧಾನಿ ದೆಹಲಿ ಮೇಲೆ ದಾಳಿಗೆ ಸಂಚು ರೂಪಿಸಿದ್ದಾರೆಂದು ಮಾಧ್ಯಮಗಳು ವರದಿ ಮಾಡಿದವೆ. 

ಪ್ರಸ್ತುತ ದೆಹಲಿ ಪೊಲೀಸರು ಬಿಡುಗಡೆ ಮಾಡಿದ್ದಾರೆಂದು ಹೇಳಲಾಗುತ್ತಿರುವ ಈ 9ಮಂದಿ ಉಗ್ರ ರೇಖಾಚಿತ್ರಗಳಲ್ಲಿರುವ ಒಂದು ರೇಖಾಚಿತ್ರ ಭಟ್ಕಳದ ಆಫಿಫ್ ಜಿಲಾನಿ (41) ಇದ್ದಾನೆಂದು ಹೇಳಲಾಗುತ್ತಿದೆ. ಈತ ತನ್ನ ಕುಟುಂಬದೊಂದಿಗೆ ಸೌದಿ ಅರೇಬಿಯಾದಲ್ಲಿ ನೆಲೆಯೂರಿದ್ದಾನೆಂದು ತಿಳಿದುಬಂದಿದೆ. 

ಇನ್ನು ಈ ಬಗ್ಗೆ ಪೊಲೀಸರು ಯಾವುದೇ ರೀತಿಯ ಮಾಹಿತಿಗಳನ್ನು ದೃಢಪಡಿಸಿಲ್ಲ. ಸೌದಿ ಅರೇಬಿಯಾದ ಬಳಿಕ ಸಿರಿಯಾಗೆ ತೆರಳಿದ್ದ ಆಫಿಫ್ ಬಳಿಕ ಇಸಿಸ್ ಉಗ್ರ ಸಂಘಟನೆಗೆ ಸೇರ್ಪಡೆಗೊಂಡಿಲ್ಲ. ಇದೀಗ ಕರಾಚಿಯಲ್ಲಿರುವ ಆತ ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆಗೆ ಸೇರ್ಪಡೆಗೊಂಡಿದ್ದಾರೆಂದು ವರದಿಗಳು ತಿಳಿಸಿವೆ. 

ಸ್ಫೋಟಕ ಮಾಹಿತಿ ಬಹಿರಂಗಗೊಳ್ಳುತ್ತಿದ್ದಂತೆಯೇ ಮಂಗಳೂರು ಪೊಲೀಸರು ಇದೀಗ ಆಫೀಫ್ ಗಾಗಿ ತೀವ್ರ ಹುಡುಕಾಟ ಆರಂಭಿಸಿದ್ದಾರೆ. ಪ್ರಕರಣ 6 ಮಂದಿಯನ್ನು ಬಂಧನಕ್ಕೊಳಪಡಿಸಲಾಗಿದ್ದು, ಆಫೀಫ್ ತಲೆಮರೆಸಿಕೊಂಡಿದ್ದಾನೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com