ಬೆಂಗಳೂರು ವೈದ್ಯರ ಸಾಧನೆ! ಬಾಲಕನಿಗೆ ರಕ್ತರಹಿತ ಬೋನ್ ಮ್ಯಾರೋ ಕಸಿ ಚಿಕಿತ್ಸೆ ಯಶಸ್ವಿ

ನಾಲ್ಕನೇ ಹಂತದ  ನ್ಯೂರೋಬ್ಲಾಸ್ಟೊಮಾ ಕ್ಯಾನ್ಸರ್ ನಿಂದ ಬಳಲುತ್ತಿದ್ದ4 ವರ್ಷದ ಟಾಂಜಾನಿಯನ್ ಬಾಲಕನನ್ನು ನಾರಾಯಣ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಬಾಲಕನ ಕುಟುಂಬವು  ಯೆಹೋವನ (ಯಹೂದಿ ಧರ್ಮ) ಅನುಯಾಯಿಗಳಾದ ಕಾರಣ ಅವರು ರಕ್ತ ವರ್ಗಾವಣೆಗೆ ಅನುಮತಿಸುವುದಿಲ್ಲ
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ನಾಲ್ಕನೇ ಹಂತದ  ನ್ಯೂರೋಬ್ಲಾಸ್ಟೊಮಾ ಕ್ಯಾನ್ಸರ್ ನಿಂದ ಬಳಲುತ್ತಿದ್ದ4 ವರ್ಷದ ಟಾಂಜಾನಿಯನ್ ಬಾಲಕನನ್ನು ನಾರಾಯಣ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಬಾಲಕನ ಕುಟುಂಬವು  ಯೆಹೋವನ (ಯಹೂದಿ ಧರ್ಮ) ಅನುಯಾಯಿಗಳಾದ ಕಾರಣ ಅವರು ರಕ್ತ ವರ್ಗಾವಣೆಗೆ ಅನುಮತಿಸುವುದಿಲ್ಲ ಇದರಿಂದ ಬಾಲಕನ ಕುಟುಂಬ ಹಾಗೂ ಅವರ ನಂಬಿಕೆಗಳನ್ನು ಗೌರವಿಸಿ ವೈದ್ಯರು ಆಟೋಲೋಗಸ್ ಮೂಳೆ ಮಜ್ಜೆಯ ಕಸಿ (ಬೋನ್ ಮ್ಯಾರೋ ಟ್ರ್ಯಾನ್ಸ್ ಪ್ಲ್ಯಾಂಟ್) ನಡೆಸಲು ನಿರ್ಧರಿಸಿದರು ಅದರಂತೆ ಒಬ್ಬರ  ದೇಹದಿಂದ ಆರೋಗ್ಯಕರ ರಕ್ತದ ಕಾಂಡಕೋಶಗಳನ್ನು ಹೊರತೆಗೆದುಮತ್ತೆ ಮರುಪೂರಣ ಂಆಡಲಾಗುವುದು. ಇದನ್ನು ಹೆಚ್ಚಿನ ಪ್ರಮಾಣದ ಕೀಮೋಥೆರಪಿಯ ಬಳಿಕ ನಡೆಸಲಾಗುತ್ತದೆ.

"ನಾಲ್ಕನೇ ಹಂತದ ಕ್ಯಾನ್ಸರ್ ನಿಂದ ಬಳಲುತ್ತಿರುವವರು ಬದುಕುವ ಸಾಧ್ಯತೆ ಕಡಿಮೆ.ಇದಲ್ಲದೆ, ಅವರ ನಂಬಿಕೆಗಳು ಕೆಲ ವೈದ್ಯಕೀಯ ಪದ್ದತಿಗಳ ವಿರುದ್ಧವಿದ್ದರೆ ಚೇತರಿಕೆಯ ಸಾಧ್ಯತೆಗಳು ಇನ್ನಷ್ಟು ಕಷ್ಟಕರವಾಗುತ್ತವೆ ”ಎಂದು ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆ ಹೊರಡಿಸಿದ ಹೇಳಿಕೆ ತಿಳಿಸಿದೆ.

ಈ ಕ್ಯಾನ್ಸರ್ ಹೊಟ್ಟೆ ಮೂತ್ರಜನಕಾಂಗದ ಗ್ರಂಥಿಗಳಿಂದ ಪ್ರಾರಂಭವಾಗುತ್ತದೆ. ಮೂಳೆ ಮಜ್ಜೆಯ ಕಸಿಗೆ ರೋಗಿಯು ಕನಿಷ್ಟ 5-6 ಬಾರಿ ರಕ್ತ ವರ್ಗಾವಣೆ ಮತ್ತು ಪ್ಲೇಟ್‌ಲೆಟ್ ವರ್ಗಾವಣೆಗೆ ಒಳಗಾಗಬೇಕಾಗುತ್ತದೆ, ಆದರೆ  ಬಾಲಕನ ಸಂದರ್ಭದಲ್ಲಿ ಇಂತಹಾ ಯಾವುದೇ ರಕ್ತ ವರ್ಗಾವಣೆ ನಡೆಸಲಾಗಿಲ್ಲ. "ವೈದ್ಯರು ಮೂರು ವಾರಗಳ ಮುಂಚಿತವಾಗಿ ಬಾಲಕನ ಚಿಕಿತ್ಸೆಗೆ ನಿರ್ಧರಿಸಿದರು ಮತ್ತು ಅವನ ರಕ್ತದ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುವಔಷಧಿಗಳನ್ನು ನೀಡಿದ್ದರು. ಇದು ಸಂಭವಿಸಿದ ನಂತರ, ಅವರು ಕ್ಯಾನ್ಸರ್ ಗೆಡ್ಡೆಯನ್ನು ಶಸ್ತ್ರಚಿಕಿತ್ಸೆಯಿಂದ ತೆಗೆದುಹಾಕಿದರು, ನಂತರ ಮೂಳೆ ಮಜ್ಜೆಯ ಕಸಿಯನ್ನು ನಡೆಸಲಾಯಿತು, ”ಎಂದು ಪ್ರಕಟಣೆ ತಿಳಿಸಿದೆ.

“ವಾಸ್ತವವಾಗಿ,ಔಷಧಿಗಳಹೊರತಾಗಿಯೂ, ಅನೇಕ ಬಾರಿ ರಕ್ತದ ಉತ್ಪತ್ತಿ ಸೂಕ್ತಕ್ರಮದಲ್ಲಿ ಆಗುವುದಿಲ್ಲಇದಲ್ಲದೆ, ಪ್ಲೇಟ್‌ಲೆಟ್‌ಗಳ ಉತ್ಪಾದನೆ ಕಡಿಮೆ ಇರುವುದರಿಂದ, ರಕ್ತಸ್ರಾವಕ್ಕೆ ಹೆಚ್ಚಿನ ಅವಕಾಶವಿದ್ದು ಅದು ಬಾಲಕನ ಅಳಿವು ಉಳಿವಿನ ಮೇಲೆ ಪರಿಣಾಮ ಬೀರಲಿದೆ. ರಕ್ತ ವರ್ಗಾವಣೆ ಇಲ್ಲದೆ  ಮೂಳೆ ಮಜ್ಜೆಯ ಕಸಿ ಮಾಡುವಿಕೆಯ ಯಶಸ್ಸಿನ ಪ್ರಮಾಣ ತುಂಬಾ ಕಡಿಮೆ.  ಅನೇಕರು ಇಂತಹಾ ರಿಸ್ಕ್ ತೆಗೆದುಕೊಳ್ಳಲು ಬಯಸುವುದಿಲ್ಲಆದಾಗ್ಯೂ, ನಾವು ಅದನ್ನು ಯಶಸ್ವಿಯಾಗಿ ನಿರ್ವಹಿಸಿದ್ದೇವೆ"ಮಜುಂದಾರ್ ಶಾ ಕ್ಯಾನ್ಸರ್ ಕೇಂದ್ರದ ಪೀಡಿಯಾಟ್ರಿಕ್ ಆಂಕೊಲಾಜಿ, ಹೆಮಟಾಲಜಿ ಮತ್ತು ಮೂಳೆ ಮಜ್ಜೆಯ ಕಸಿ ನಿರ್ದೇಶಕ ಮತ್ತು ಕ್ಲಿನಿಕಲ್ ಲೀಡ್ ಡಾ.ಸುನೀಲ್ ಭಟ್ ಹೇಳಿದ್ದಾರೆ.

ಈ ಶಸ್ತ್ರಚಿಕಿತ್ಸೆ ಆಗಿ 4-6 ವಾರಗಳಲ್ಲಿ ಬಾಲಕ ಚೇತರಿಸಿಕೊಂಡಿದ್ದು ಆತನನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com