ತಲೆಮರೆಸಿಕೊಂಡಿದ್ದ ಬೆಂಗಳೂರು ಜಿಹಾದಿ ಗ್ಯಾಂಗ್ ಲೀಡರ್ ಮೊಹಮ್ಮದ್ ಪಾಷ ಬಂಧಿಸಿದ ಸಿಸಿಬಿ

ಇಸಿಸ್ ಉಗ್ರ ಸಂಘಟನೆ ನಂಟು ಹೊಂದಿದ್ದ ಶಂಕಿತ ಉಗ್ರನೋರ್ವನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಭಯೋತ್ಪಾದಕ
ಭಯೋತ್ಪಾದಕ

ಬೆಂಗಳೂರು: ಇಸಿಸ್ ಉಗ್ರ ಸಂಘಟನೆ ನಂಟು ಹೊಂದಿದ್ದ ಶಂಕಿತ ಉಗ್ರನೋರ್ವನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. 

ಬೆಂಗಳೂರಿನ ಜಿಹಾದಿ ತಂಡದ ನಾಯಕ ಮೆಹಬೂಬ್ ಪಾಷ ನನ್ನು ರಾಜ್ಯದ ಇಂಟೆಲಿಜೆನ್ಸ್ ಬ್ಯೂರೋ(ಐಬಿ) ಮತ್ತು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜನವರಿ 7ರಂದು ಮೂವರು ಶಂಕಿತ ಉಗ್ರನನ್ನು ಪೊಲೀಸರು ಬಂಧಿಸಿದ್ದರು. ಈ ವೇಳೆ ಮೊಹಬೂಬ್ ಪಾಷ ತಪ್ಪಿಸಿಕೊಂಡು ಪರಾರಿಯಾಗಿದ್ದನು.

ಮೊಹಬೂಬ್ ಪಾಷ ಬನ್ನೇರುಘಟ್ಟ ರಸ್ತೆಯಲ್ಲಿ ಅಲ್ ಹಿಂದ್ ಟ್ರಸ್ಟ್ ಸ್ಥಾಪಿಸಿ ಜಿಹಾದಿ ಸಂಘಟನೆಗೆ ಮುಂದಾಗಿದ್ದ. ಅಲ್ ಹಿಂದ್ ಹೆಸರಿನ ಟ್ರಸ್ಟ್ ಸ್ಥಾಪಿಸಿ ಗುಂಡ್ಲುಪೇಟೆ ತಾಲೂಕಿನಲ್ಲಿ ಜಮೀನು ಖರೀದಿಗೆ ಸಂಚು ರೂಪಿಸಿದ್ದ. ಅಲ್ಲದೇ ಐಸಿಸ್ ನಂಟು ಹೊಂದಿದ್ದ ಪಾಷನಿಗಾಗಿ ಸಿಸಿಬಿ ಪೊಲೀಸರು ತೀವ್ರ ಶೋಧ ನಡೆಸಿದ್ದರು. 

ಮೊಹಬೂಬ್ ಪಾಷ ಸದ್ದುಗುಂಟೆಪಾಳ್ಯದಲ್ಲಿ ವಾಸವಾಗಿದ್ದು ತಮಿಳುನಾಡಿನ ಕ್ಯೂ ಬ್ರಾಂಚ್ ಪೊಲೀಸರು ಮತ್ತು ಸಿಸಿಬಿ ಕಾರ್ಯಾಚರಣೆ ವೇಳೆ ಪರಾರಿಯಾಗಿದ್ದ. ಬುಧವಾರ ರಾತ್ರಿ ಆರೋಪಿಯನ್ನು ವಶಕ್ಕೆ ಪಡೆದು ರಹಸ್ಯ ಸ್ಥಳದಲ್ಲಿ ವಿಚಾರಣೆ ನಡೆಸುತ್ತಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com