ಕೆಲಸವಿಲ್ಲದಿದ್ದರೆ ಸಂಬಳವೂ ಇಲ್ಲ! ಕಾಲೇಜು ಶಿಕ್ಷಣ ಇಲಾಖೆಯಿಂದ ಹೊಸ ಕಾನೂನು ಜಾರಿಗೆ ಚಿಂತನೆ

ಬೆಂಗಳೂರು ನಗರ ಜಿಲ್ಲೆಯ ಸರ್ಕಾರಿ ಕಾಲೇಜುಗಳಲ್ಲಿ ಕಾಲೇಜು ಶಿಕ್ಷಣ ಇಲಾಖೆ ನಡೆಸಿದ ಕೆಲಸದ ಹೊರೆ ವಿಶ್ಲೇಷಣೆಯ ಆಂತರಿಕ ಸಮೀಕ್ಷೆ ವರದಿ ಆಘಾತಕಾರಿ ಅಂಶಗಳನ್ನು ಬಿಚ್ಚಿಟ್ಟಿದೆ. 24 ಪ್ರಾಧ್ಯಾಪಕರು ಕೆಲಸವನ್ನೇ ಮಡದೆ ಸಂಬಳ ಪಡೆದುಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಲಭಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಬೆಂಗಳೂರು ನಗರ ಜಿಲ್ಲೆಯ ಸರ್ಕಾರಿ ಕಾಲೇಜುಗಳಲ್ಲಿ ಕಾಲೇಜು ಶಿಕ್ಷಣ ಇಲಾಖೆ ನಡೆಸಿದ ಕೆಲಸದ ಹೊರೆ ವಿಶ್ಲೇಷಣೆಯ ಆಂತರಿಕ ಸಮೀಕ್ಷೆ ವರದಿ ಆಘಾತಕಾರಿ ಅಂಶಗಳನ್ನು ಬಿಚ್ಚಿಟ್ಟಿದೆ. 24 ಪ್ರಾಧ್ಯಾಪಕರು ಕೆಲಸವನ್ನೇ ಮಡದೆ ಸಂಬಳ ಪಡೆದುಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಲಭಿಸಿದೆ. 45 ಪ್ರಾಧ್ಯಾಪಕರು ನಿಗದಿತ ಕೆಲಸದ ಸಮಯಕ್ಕಿಂತ ಕಡಿಮೆ ಸಮಯ ಕೆಲಸ ಮಾಡಿದ್ದಾಗಿಯೂ ವರದಿ ಉಲ್ಲೇಖಿಸಿದೆ. ಇದೀಗ ಇಲಾಖೆಯು ಕೆಲಸ ಮಾಡದೆಯೆ ಉಪಾನ್ಯಾಸಕರು ಸಂಬಳ ಪಡೆಯುವಂತಿಲ್ಲ ಎಂಬ ಆದೇಶ ಹೊರಡಿಸಲು ಚಿಂತನೆ ನಡೆಸಿದೆ.

ಕಾಲೇಜುಗಳಲ್ಲಿ ಅಗತ್ಯವೇ ಇಲ್ಲದೆ ಆರು ಹೆಚ್ಚುವರಿ ಅತಿಥಿ ಅಧ್ಯಾಪಕರು ಇದ್ದಾರೆ ಎಂದು ವಿಶ್ಲೇಷಣೆಯು ಕಂಡುಹಿಡಿದಿದೆ. ನಗರದಲ್ಲಿ ಶೂನ್ಯ ಕೆಲಸದ ಹೊರೆ ಹೊಂದಿರುವ ಪ್ರಾಧ್ಯಾಪಕರು ಭೌತಶಾಸ್ತ್ರ, ರಾಜಕೀಯ ವಿಜ್ಞಾನ, ಸಮಾಜಶಾಸ್ತ್ರ, ಅರ್ಥಶಾಸ್ತ್ರ, ಸೋಷಿಯಲ್ ವರ್ಕ್  ಮನೋವಿಜ್ಞಾನ, ಇತಿಹಾಸ, ಇಂಗ್ಲಿಷ್, ಭೌಗೋಳಿಕತೆ, ಹಿಂದಿ ಮತ್ತು ವಾಣಿಜ್ಯ ವಿಷಯಗಳ ಬೋಧನೆ ಮಾಡುತ್ತಿದ್ದಾರೆ.

ಪ್ರಾಧ್ಯಾಪಕರಿಗೆ ವಾರಕ್ಕೆ ನಿಗದಿತ ಕೆಲಸದ ಸಮಯ ಲ್ಯಾಬ್ ಕೆಲಸ ಹೊಂದಿರುವ ವಿಷಯಗಳಿಗೆ 20 ಮತ್ತು ಲ್ಯಾಬ್ ಕೆಲಸವಿಲ್ಲದ ವಿಷಯಗಳಿಗೆ 16 ಗಂಟೆಗಳಾಗಿದೆ.

"ಕಡಿಮೆ ವಿದ್ಯಾರ್ಥಿಗಳು ಸಮಾಜಶಾಸ್ತ್ರ ಮತ್ತು ಇತಿಹಾಸದಂತಹ ವಿಷಯಗಳನ್ನು ಆರಿಸಿಕೊಳ್ಳುತ್ತಿರುವುದರಿಂದ, ಅವರಿಗೆ ಕಲಿಸುವ ಪ್ರಾಧ್ಯಾಪಕರಿಗೆ ಕೆಲಸದ ಹೊರೆ ಇರುವುದಿಲ್ಲ. ಕಂಪ್ಯೂಟರ್ ಬೇಸಿಕ್ಸ್ ಮತ್ತು ಭಾರತೀಯ ಸಂವಿಧಾನದಂತಹ ನಾನ್ ಕೋರ್  ವಿಷಯಗಳ ಬಗೆಗೆ ಸಹ ಇದೇ ರೀತಿಯಲ್ಲಿ ಹೇಳಬಹುದುಪ್ರಾಧ್ಯಾಪಕರು ಕಡಿಮೆ ಕೆಲಸ ಮಾಡಲು ಇವುಗಳನ್ನು ಆರಿಸಿಕೊಳ್ಳುತ್ತಾರೆ ”ಎಂದು ಇಲಾಖೆಯ ಅಧಿಕಾರಿಯೊಬ್ಬರು ಹೇಳಿದರು.

"ಅವರು ಉತ್ತರ ಕರ್ನಾಟಕದಂತಹಾ ಕೆಲಸದ ಹೊರೆ ಹೆಚ್ಚಿರುವ ಪ್ರದೇಶಕ್ಕೆ ತೆರಳಲು ಹಿಂಜರಿಯುತ್ತಾರೆಏಕೆಂದರೆ ಅಲ್ಲಿ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚು. ಕಡಿಮೆ ಕೆಲಸದ ಹೊರೆ ಹೊಂದಿರುವ ಬೆಂಗಳೂರು, ಮೈಸೂರು ಮತ್ತು ತುಮಕೂರಿನಂತಹ ಸ್ಥಳಗಳಿಗೆ ವರ್ಗಾವಣೆಯನ್ನು ಪಡೆಯಲು ಅವರು ರಾಜಕೀಯ ಪ್ರಭಾವವನ್ನು ಬಳಸುತ್ತಾರೆ, ”ಎಂದು ಅಧಿಕಾರಿ ಹೇಳಿದರು,” ಒಂದು ಸರ್ಕಾರಿ ಕಾಲೇಜಿನಲ್ಲಿ, ವಿದ್ಯಾರ್ಥಿಗಳ ನಕಲಿ ದಾಖಲಾತಿಯನ್ನು ನಾವು ಕಂಡುಕೊಂಡಿದ್ದೇವೆ. ಕಾಗದದಲ್ಲಿ 120 ವಿದ್ಯಾರ್ಥಿಗಳು ಇದ್ದರೆ, ಕೇವಲ 26 ಮಂದಿ ಮಾತ್ರ ಕಾಲೇಜಿಗೆ ಹಾಜರಾಗಿದ್ದರು ”ಎಂದು ಅಧಿಕಾರಿ ಹೇಳಿದರು.

ಕೆಲಸದ ಹೊರೆ ಇಲ್ಲದಿದ್ದರೆ ಯಾವುದೇ ಸಂಬಳವನ್ನು ಪಡೆಯಲು ಸಾಧ್ಯವಾಗದಂತೆ ಇಲಾಖೆ ಕ್ರಮವನ್ನು ತರಲು ಯೋಜಿಸಿದೆ. ಕಡಿಮೆ ಅಥವಾ ಕಡಿಮೆ ಕೆಲಸದ ಹೊರೆ ಇರುವ ಅಧ್ಯಾಪಕರನ್ನು ಸ್ಥಳಾಂತರಿಸಲಾಗುತ್ತದೆ ಮತ್ತು ಖಾಲಿ ಇರುವ ಸ್ಥಳದಲ್ಲಿ ಇಡಲಾಗುತ್ತದೆ, ”ಎಂದು ಅಧಿಕಾರಿ ಹೇಳಿದರು.

ಹೆಸರು ಬಹಿರಂಗಕ್ಕೆ ಇಚ್ಚಿಸದ ಪ್ರಾಧ್ಯಾಪಕರೊಬ್ಬರು, “ ಬೆಂಗಳೂರು ಕಾಲೇಜಿನಲ್ಲಿ 22 ಮಂಜೂರಾದ ಹುದ್ದೆಗಳನ್ನು ಹೊಂದಿದ್ದರೆ, ರಾಜಕೀಯ ಪ್ರಭಾವ ಹೊಂದಿರುವ ಗ್ರಾಮೀಣ ಪ್ರದೇಶದ ವ್ಯಕ್ತಿಯು ತನ್ನನ್ನು 23 ನೇ ಪ್ರಾಧ್ಯಾಪಕನಾಗಿ ನೇಮಿಸಿಕೊಳ್ಳುತ್ತಾನೆ, ಇದರಿಂದಾಗಿ ಇತರರ ಕೆಲಸದ ಹೊರೆ ಕಡಿಮೆಯಾಗುತ್ತದೆ. ಅವರಿಗೆ ಪರಿಸರ ವಿಜ್ಞಾನ, ಕಂಪ್ಯೂಟರ್ ಸಾಕ್ಷರತೆ ಅಥವಾ ಭಾರತೀಯ ಸಂವಿಧಾನದಂತಹ ವಿಷಯಗಳನ್ನು ನೀಡಲಾಗುವುದು, ಅದನ್ನು ಯಾವುದೇ ಅರ್ಹತೆಯ ಪ್ರಾಧ್ಯಾಪಕರು ಕಲಿಸಬಹುದು. ಈ ವಿಷಯಗಳಿಗೆ ಪರೀಕ್ಷೆಗಳಿಲ್ಲ, ಈ ಕಾರಣದಿಂದಾಗಿ ವಿದ್ಯಾರ್ಥಿಗಳು ತಲೆಕೆಡಿಸಿಕೊಳ್ಳುವುದಿಲ್ಲ. ಆದ್ದರಿಂದ ಪ್ರಾಧ್ಯಾಪಕರು ಯಾವುದೇ ಕೆಲಸದ ಹೊರೆಯನ್ನು ಅನುಭವಿಸುವುದಿಲ್ಲ, ಆದರೆ ಸಂಬಳವನ್ನು ಮಾತ್ರ ಪಡೆದುಕೊಳ್ಳುತ್ತಾರೆ

"ಈ ಪ್ರಾಧ್ಯಾಪಕರಿಂದ ಗ್ರಾಮೀಣ ಪ್ರದೇಶದಲ್ಲಿ ಖಾಲಿ ಇರುವ ಹುದ್ದೆಗಳನ್ನು  ಅತಿಥಿ ಅಧ್ಯಾಪಕರು ಭರ್ತಿ ಮಾಡುತ್ತಾರೆ ... ಹಲವಾರು ಕಾಲೇಜುಗಳಲ್ಲಿನ ಅತಿಥಿ ಅಧ್ಯಾಪಕರ ಸಂಖ್ಯೆ ಶಾಶ್ವತ ಅಧ್ಯಾಪಕರ ಸಂಖ್ಯೆಗಿಂತ ಹೆಚ್ಚಾಗಿದೆ" ಎಂದು ಪ್ರಾಧ್ಯಾಪಕರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com