ಫ್ರೀ ಕಾಶ್ಮೀರ್: ನಳಿನಿ ಪರ ವಕಾಲತ್ತು ವಹಿಸಲು ಬದ್ಧ ಎಂದ ವಕೀಲರು

ಮೈಸೂರು ವಿವಿ ಮಾನಸ ಗಂಗೋತ್ರಿಯಲ್ಲಿ ಜ.8 ರಂದು ಪ್ರತಿಭಟನೆ ವೇಳೆ ಫ್ರೀ ಕಾಶ್ಮೀರ್ ಫಲಕ ಪ್ರದರ್ಶಿಸಿದ್ದ ನಳಿನಿ ಬಾಲಕುಮಾರ್ ಪರವಾಗಿ ಪ್ರದರ್ಶಿಸಿದ್ದ ನಳಿನಿ ಬಾಲಕುಮಾರ್ ಪರವಾಗಿ ವಕಾಲತ್ತು ವಹಿಸಲು ಬದ್ಧರಾಗಿರುವುದಾಗಿ ಹಿರಿಯ ವಕೀಲರು ಹೇಳಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮೈಸೂರು: ಮೈಸೂರು ವಿವಿ ಮಾನಸ ಗಂಗೋತ್ರಿಯಲ್ಲಿ ಜ.8 ರಂದು ಪ್ರತಿಭಟನೆ ವೇಳೆ ಫ್ರೀ ಕಾಶ್ಮೀರ್ ಫಲಕ ಪ್ರದರ್ಶಿಸಿದ್ದ ನಳಿನಿ ಬಾಲಕುಮಾರ್ ಪರವಾಗಿ ಪ್ರದರ್ಶಿಸಿದ್ದ ನಳಿನಿ ಬಾಲಕುಮಾರ್ ಪರವಾಗಿ ವಕಾಲತ್ತು ವಹಿಸಲು ಬದ್ಧರಾಗಿರುವುದಾಗಿ ಹಿರಿಯ ವಕೀಲರು ಹೇಳಿದ್ದಾರೆ. 

ಹಿರಿಯ ವಕೀಲರಾದ ಸಿ.ಎಸ್.ದ್ವಾರಕನಾಥ್, ಎಸ್. ಶಂಕರಪ್ಪ, ಕೆ.ಎನ್,ಜಗದೀಶ್ ಮಹದೇವ್ರು, ಬಿ.ಟಿ.ವೆಂಕಟೇಶ್, ಜೆಡಿ ಕಾಶಿನಾಥ್, ಶ್ರೀನಿವಾಸಕುಮಾರ್, ಆರ್ ಜಗನ್ನಾಥ್ ಅಭಯ ನೀಡಿದ್ದಾರೆ. 

ಫ್ರೀ ಕಾಶ್ಮೀರ್ ಫಲಕ ಪ್ರದರ್ಶಿಸಿದ್ದ ಆರೋಪ ಮೇಲೆ ಜಯಲಕ್ಷ್ಮೀಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಪ್ರಕರಣದ ಆರೋಪಿಯಾದ ನಳಿನಿ ಸೇರಿದಂತೆ ಉಳಿದ ವಿದ್ಯಾರ್ಥಿಗಳು ನ್ಯಾಯಾಲಯಗಳ ಮುಂದೆ ತಮ್ಮ ನಿರ್ದೇಶಷಿತವನ್ನು ಸಾಬೀತು ಮಾಡಿಕೊಳ್ಳುವ ಸಂಪೂರ್ಣ ಸಾಂವಿಧಾನಿಕ ಹಕ್ಕನ್ನು ಹೊಂದಿದ್ದಾರೆ. 

ಆರೋಪಿಗಳನ್ನು ನ್ಯಾಯಾಲಯದಲ್ಲಿ ಪ್ರತಿನಿಧಿಸಲು, ಅವರು ಸೂಕ್ತ ಕಾನೂನು ನೆರವು ನೀಡಲು ಹಿರಿಯ ವಕೀಲರಾದ ನಾವು ಬದ್ಧರಾಗಿದ್ದು, ಯಾವುದೇ ವಿದ್ಯಾರ್ಥಿಗಳು ಆತಂಕಕ್ಕೊಳಗಾದೇ ತಮ್ಮ ಶೈಕ್ಷಣಿಕ ಅಧ್ಯಯನವನ್ನು ಮುಂದುವರೆಸುವಂತೆ ಕೋರಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com