ಮೈಸೂರು ಮಹಾನಗರ ಪಾಲಿಕೆ ಮೇಯರ್ ಆಗಿ ಜೆಡಿಎಸ್ ನ ತಸ್ನೀಂ ಆಯ್ಕೆ

ಮೈಸೂರು ಮಹಾನಗರ ಪಾಲಿಕೆ 22ನೇ ಮೇಯರ್ ಆಗಿ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಅಭ್ಯರ್ಥಿತಸ್ನೀಮ್ ಅವರು ಹಾಗೂ ಉಪ ಮೇಯರ್ ಆಗಿ ಸಿ.ಶ್ರೀಧರ್ ಆಯ್ಕೆಯಾಗಿದ್ದಾರೆ.
ಮೈಸೂರು ಮಹಾನಗರ ಪಾಲಿಕೆ
ಮೈಸೂರು ಮಹಾನಗರ ಪಾಲಿಕೆ

ಮೈಸೂರು: ಮೈಸೂರು ಮಹಾನಗರ ಪಾಲಿಕೆ 22ನೇ ಮೇಯರ್ ಆಗಿ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಅಭ್ಯರ್ಥಿ ತಸ್ನೀಮ್ ಅವರು ಹಾಗೂ ಉಪ ಮೇಯರ್ ಆಗಿ ಸಿ.ಶ್ರೀಧರ್ ಆಯ್ಕೆಯಾಗಿದ್ದಾರೆ.

ಶನಿವಾರ ಪಾಲಿಕೆ ಕೌನ್ಸಿಲ್ ಸಭಾಂಗಣದಲ್ಲಿ ನಡೆದ ಮೇಯರ್, ಉಪ ಮೇಯರ್ ಚುನಾವಣೆಯಲ್ಲಿ ಜೆಡಿಎಸ್, ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ತಸ್ನೀಮ್ 47 ಮತ ಪಡೆದು ಮೇಯರ್ ಆಗಿ ಆಯ್ಕೆಯಾದರು.

ಮೇಯರ್ ಸ್ಥಾನಕ್ಕೆ ಇಬ್ಬರು ಅಭ್ಯರ್ಥಿಗಳಿಂದ 3 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಜೆಡಿಎಸ್, ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ತಸ್ನೀಂ, ಬಿಜೆಪಿ ಅಭ್ಯರ್ಥಿಯಾಗಿ ಗೀತಾಶ್ರೀ ಕಣದಲ್ಲಿದ್ದರು. ಚುನಾವಣೆಯಲ್ಲಿ 47 ಮತ ಪಡೆದ ತಸ್ನೀಮ್ ಮೇಯರ್ ಆಗಿ ಆಯ್ಕೆಯಾದರು. ಗೀತಾಶ್ರೀ 23 ಮತ ಪಡೆಯುವ ಮೂಲಕ ಸೋಲೊಪ್ಪಿಕೊಂಡರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com