ಬಸ್‌ಗಳ ನಡುವೆ ಸಿಲುಕಿ ಕಾರ್ಮಿಕ ಸಾವು: ನಿರ್ಲಕ್ಷ್ಯದ ಕೆಲಸಕ್ಕೆ ಮೆಕ್ಯಾನಿಕ್ ಅರೆಸ್ಟ್

ಸಾರಿಗೆ ಸಂಸ್ಥೆ ಬಸ್ ಸ್ವಚ್ಚಗೊಳಿಸುತ್ತಿದ್ದ ವೇಳೆ ಮತ್ತೊಂದು ಬಸ್ ಡಿಕ್ಕಿಯಾಗಿ ದಿನಗೂಲಿ ಕಾರ್ಮಿಕ ಮೃತಪಟ್ಟಿರುವ ಘಟನೆ ಕೊಳ್ಳೇಗಾಲದ ಕೆಎಸ್ಆರ್​ಸಿ ಡಿಪೋದಲ್ಲಿ ನಡೆದಿದೆ.

Published: 19th January 2020 09:47 AM  |   Last Updated: 19th January 2020 09:47 AM   |  A+A-


Chamarajnagar: one killed in Bus Accident

ಬಸ್‌ಗಳ ನಡುವೆ ಸಿಲುಕಿ ಕಾರ್ಮಿಕ ಸಾವು

Posted By : Srinivasamurthy VN
Source : RC Network

ಚಾಮರಾಜನಗರ: ಸಾರಿಗೆ ಸಂಸ್ಥೆ ಬಸ್ ಸ್ವಚ್ಚಗೊಳಿಸುತ್ತಿದ್ದ ವೇಳೆ ಮತ್ತೊಂದು ಬಸ್ ಡಿಕ್ಕಿಯಾಗಿ ದಿನಗೂಲಿ ಕಾರ್ಮಿಕ ಮೃತಪಟ್ಟಿರುವ ಘಟನೆ ಕೊಳ್ಳೇಗಾಲದ ಕೆಎಸ್ಆರ್​ಸಿ ಡಿಪೋದಲ್ಲಿ ನಡೆದಿದೆ.

ಸಾರಿಗೆ ಸಂಸ್ಥೆ ಬಸ್ ಸ್ವಚ್ಚಗೊಳಿಸುತ್ತಿದ್ದ ವೇಳೆ ಮತ್ತೊಂದು ಬಸ್ ಡಿಕ್ಕಿಯಾಗಿ ದಿನಗೂಲಿ ಕಾರ್ಮಿಕ ಮೃತಪಟ್ಟಿರುವ ಘಟನೆ ಕೊಳ್ಳೇಗಾಲದ ಕೆಎಸ್ಆರ್​ಸಿ ಡಿಪೋದಲ್ಲಿ ನಡೆದಿದೆ.ಕೊಳ್ಳೇಗಾಲ ತಾಲ್ಲೂಕಿನ ಸರಗೂರು ಗ್ರಾಮದ ಚಿಕ್ಕಮಾರಯ್ಯರವರ ಮಗ ಶಿವಣ್ಣ (35) ಮೃತ ದುರ್ದೈವಿ. 

ಈತ ಬಸ್‍ನ ಸ್ವಚ್ಚತೆಯಲ್ಲಿ ತೊಡಗಿದ್ದಾಗ ಮೆಕ್ಯಾನಿಕ್ ರಾಜಶೇಖರ ಮೂರ್ತಿ ಎಂಬಾತ ಬ್ರೇಕ್‌ಫೇಲ್ ಆಗಿದ್ದ ಬಸ್ ಚಲಾಯಿಸಿ ಶಿವಣ್ಣ ಸ್ವಚ್ಛ ಮಾಡುತ್ತಿದ್ದ ಬಸ್ ಗೆ ಡಿಕ್ಕಿ ಹೊಡೆದಿದ್ದಾನೆ ಎನ್ನಲಾಗಿದೆ.ಎರಡು ಬಸ್ ಗಳ ನಡುವೆ ಸಿಲುಕಿ ಗಂಭೀರವಾಗಿ ಗಾಯಗೊಂಡ ಶಿವಣ್ಣನ್ನು ಆಸ್ಪತ್ರೆಗೆ ಸೇರಿಸಿದರಾದರು ಚಿಕಿತ್ಸೆಗೂ ಮುನ್ನವೇ ಆತ ಅಸುನೀಗಿದ್ದಾನೆ. 

ಇನ್ನು, ಬಸ್ ಚಲಾಯಿಸಿದ ರಾಜಶೇಖರ ಮೂರ್ತಿಯನ್ನು ಕೊಳ್ಳೇಗಾಲ ಸಿಪಿಐ ಶ್ರೀಕಾಂತ್ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.ಆಸ್ಪತ್ರೆಗೆ ಹನೂರು ಶಾಸಕ ಆರ್. ನರೇಂದ್ರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಜೊತೆಗೆ ಖಾಯಂ ನೌಕರರಿಗೆ ಸಿಗಬೇಕಾದ ಸವಲತ್ತನ್ನು ಮೃತ ಶಿವಣ್ಣನಿಗೂ ದೊರಕಿಸಿಕೊಡುವ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ.

Stay up to date on all the latest ರಾಜ್ಯ news
Poll
Covid-19_vaccine1

ಕೋವಿಡ್-19 ಲಸಿಕೆ ಅಂತಿಮವಾಗಿ ನಮಗೆ ಸಹಜ ಸ್ಥಿತಿಗೆ ಬರಲು ಸಹಾಯ ಮಾಡುತ್ತದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp