ಗಡಿ ವಿವಾದದ ಬಗ್ಗೆಯಲ್ಲ, ಸಂಸ್ಕೃತಿ ಬಗ್ಗೆ ಗಮನಹರಿಸಿ: ಮರಾಠಿ ಪರ ಜನತೆಗೆ ಶಿವಸೇನೆ ನಾಯಕ ರಾವತ್

ಗಡಿ ವಿವಾದ ಹೊರತುಪಡಿಸಿ ಬೆಳಗಾವಿಯಲ್ಲಿರುವ ಮರಾಠಿ ಪರ ಜನರು ಮರಾಠಿ ಭಾಷೆ, ಸಂಸ್ಕೃತಿ ಮತ್ತು ಅದರ ಇತಿಹಾಸದ ಸಂರಕ್ಷಣೆಯತ್ತ ಗಮನಹರಿಸಬೇಕೆಂದು ಶಿವಸೇನೆ ನಾಯಕ ಸಂಜಯ್ ರಾವತ್ ಹೇಳಿದ್ದಾರೆ. 
ಶಿವಸೇನೆ ನಾಯಕ ಸಂಜಯ್ ರಾವತ್
ಶಿವಸೇನೆ ನಾಯಕ ಸಂಜಯ್ ರಾವತ್

ಬೆಳಗಾವಿ: ಗಡಿ  ವಿವಾದ ಹೊರತುಪಡಿಸಿ ಬೆಳಗಾವಿಯಲ್ಲಿರುವ ಮರಾಠಿ ಪರ ಜನರು ಮರಾಠಿ ಭಾಷೆ, ಸಂಸ್ಕೃತಿ ಮತ್ತು ಅದರ ಇತಿಹಾಸದ ಸಂರಕ್ಷಣೆಯತ್ತ ಗಮನಹರಿಸಬೇಕೆಂದು ಶಿವಸೇನೆ ನಾಯಕ ಸಂಜಯ್ ರಾವತ್ ಹೇಳಿದ್ದಾರೆ. 

ಗಡಿ ವಿವಾದ ಸಂಬಂಧ ಸುಪ್ರೀಂಕೋರ್ಟ್ ನೀಡುವ ತೀರ್ಪನ್ನು ಮಹಾರಾಷ್ಟ್ರ ಸರ್ಕಾರ ಗಂಭೀರವಾಗಿ ಪರಿಗಣಿಸುತ್ತದೆ. ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಸುಪ್ರೀಂಕೋರ್ಟ್ ನಲ್ಲಿ ಬಾಕಿ ಉಳಿದಿದೆ. ಗಡಿ ವಿವಾದ ಸುಪ್ರೀಂಕೋರ್ಟ್ನಲ್ಲೇ ಇತ್ಯರ್ಥವಾಗಲಿದೆ. ಸುಪ್ರೀಂಕೋರ್ಟ್ ಉಭಯ ರಾಜ್ಯಗಳ ವಾದ ಆಲಿಸಬೇಕು. ಬಳಿಕ ಸುಪ್ರೀಂಕೋರ್ಟ್ ನೀಡುವ ತೀರ್ಪಿಗೆ ಕರ್ನಾಟಕ ಮತ್ತು ಮಹಾರಾಷ್ಟ್ರ ಎರಡೂ ರಾಜ್ಯಗಳು ಬದ್ಧರಾಗಬೇಕು ಎಂದು ಹೇಳಿದ್ದಾರೆ. 

ಎರಡು ಕಡೆ ಪಾಂಡವರಿದ್ದಾರೆ ಇದು ಮರಾಠಿ ಸಂಸ್ಕೃತಿ ಉಳಿಸುವ ಹೋರಾಟವಾಗಿದೆ. ದಶಗಳಿಂದ ವಿವಾದವಾಗಿದ್ದ ಅಯೋಧ್ಯೆ ರಾಮಮಂದಿರ ವಿವಾದ ಇತ್ಯರ್ಥವಾಗಿದೆ. ದೇಶದ ಸಂವಿಧಾನ, ಸುಪ್ರೀಂಕೋರ್ಟ್ ಎಲ್ಲಕ್ಕಿಂತ, ಎಲ್ಲರಿಂತ ದೊಡ್ಡದು. ಗಡಿ ವಿವಾದದ ಕುರಿತು ಹೇಳಿಕೆ ನೀಡದಂತೆ ನಾಯಕರಿಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರು ಪಕ್ಷದ ನಯಾಕರಿದೆ ನಿರ್ದೇಸನ ನೀಡಿದ್ದಾರೆ. ಹಾಗಾಗಿ ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com