ಕಳೆದುಹೋಗಿದ್ದ ಮಗುವನ್ನು ತಾಯಿ ಜೊತೆ ಒಂದುಗೂಡಿಸಿದ ಕಬ್ಬನ್ ಪಾರ್ಕ್ ಸಂಚಾರಿ ಪೊಲೀಸರು

ನಗರದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಏಕದಿನ ಪಂದ್ಯ ನಡೆಯುತ್ತಿತ್ತು. ಸ್ವಾಭಾವಿಕವಾಗಿ ಸುತ್ತಮುತ್ತಲ ರಸ್ತೆಯಲ್ಲಿ ವಾಹನ ದಟ್ಟಣೆ ಇರುತ್ತದೆ. ಸಂಚಾರಿ ಪೊಲೀಸರು ಟ್ರಾಫಿಕ್ ನಿರ್ವಹಣೆಯ ಒತ್ತಡದಲ್ಲಿರುತ್ತಾರೆ.
ಕಳೆದುಹೋಗಿದ್ದ ಮಗುವನ್ನು ತಾಯಿ ಜೊತೆ ಒಂದುಗೂಡಿಸಿದ ಕಬ್ಬನ್ ಪಾರ್ಕ್ ಸಂಚಾರಿ ಪೊಲೀಸರು

ಬೆಂಗಳೂರು: ನಗರದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಏಕದಿನ ಪಂದ್ಯ ನಡೆಯುತ್ತಿತ್ತು. ಸ್ವಾಭಾವಿಕವಾಗಿ ಸುತ್ತಮುತ್ತಲ ರಸ್ತೆಯಲ್ಲಿ ವಾಹನ ದಟ್ಟಣೆ ಇರುತ್ತದೆ. ಸಂಚಾರಿ ಪೊಲೀಸರು ಟ್ರಾಫಿಕ್ ನಿರ್ವಹಣೆಯ ಒತ್ತಡದಲ್ಲಿರುತ್ತಾರೆ.


ಈ ಸಂದರ್ಭದಲ್ಲಿ ನಡೆದ ಘಟನೆಯೊಂದರಲ್ಲಿ ಕಬ್ಬನ್ ಪಾರ್ಕ್ ಸಂಚಾರಿ ವಿಭಾಗ ಪೊಲೀಸರು 6 ವರ್ಷದ ಬಾಲಕನನ್ನು ಆತನ ತಾಯಿ ಜೊತೆ ಸೇರಿಸಿ ಸ್ಮರಣೀಯ ಕೆಲಸ ಮಾಡಿದ್ದಾರೆ.


ಆಗಿದ್ದೇನು?: ಕಬ್ಬನ್ ಪಾರ್ಕ್ ಬಳಿಯಿರುವ ಡಾಗ್ ಪಾರ್ಕ್ ಗೆ 6 ವರ್ಷದ ಬಾಲಕ ರಾಹುಲ್ (ಹೆಸರು ಬದಲಿಸಲಾಗಿದೆ) ತನ್ನ ತಾಯಿ ಜೊತೆ ನಿನ್ನೆ ಬೆಳಗ್ಗೆ ಬಂದಿದ್ದ. ಆದರೆ ಮಧ್ಯಾಹ್ನವಾಗುವಷ್ಟು ಹೊತ್ತಿಗೆ ತನ್ನ ತಾಯಿಯಿಂದ ತಪ್ಪಿಸಿಕೊಂಡಿದ್ದ. ತಾಯಿ ಕಾಣದಿರುವಾಗ ಅಳಲು ಆರಂಭಿಸಿದ ರಾಹುಲ್ ಡಾಗ್ ಪಾರ್ಕ್ ಹತ್ತಿರ ತಾಯಿಯನ್ನು ಹುಡುಕಿಕೊಂಡು ಹೊರಟ. ಎಲ್ಲಿಯೂ ತಾಯಿ ಕಾಣಸದಿದ್ದಾಗ ಜೋರು ಅಳಲು ಆರಂಭಿಸಿದ.


ಅದಿತಿ ಭಟ್ ಎನ್ನುವವರು ಡಾಗ್ ಪಾರ್ಕ್ ಗೆ ಬಂದಿದ್ದರು. ಮಗು ಅಳುತ್ತಿರುವುದನ್ನು ಕಂಡು ಬಳಿ ಹೋಗಿ ಕರೆದು ಆತನ ತಾಯಿ ಸಿಗುತ್ತಾರಾ ಎಂದು ಹುಡುಕಲು ಆರಂಭಿಸಿದರು. ಆತನ ಪೋಷಕರ ಬಗ್ಗೆ ಕೇಳಿದಾಗ ಬಾಲಕನಿಗೆ ಹೆಚ್ಚು ಉತ್ತರಿಸಲು ಸಾಧ್ಯವಾಗಲಿಲ್ಲ. ಆದರೆ ತಂದೆ-ತಾಯಿ, ತನ್ನ ಅಣ್ಣ ಮತ್ತು ಓದುತ್ತಿರುವ ಶಾಲೆಯ ಹೆಸರು ಹೇಳಿದ.


ಈ ಮಧ್ಯೆ ಪಾರ್ಕ್ ಗೆ ದಿನನಿತ್ಯವೆಂಬಂತೆ ಬರುವ ಪ್ರಿಯಾ ಚೆಟ್ಟಿ ರಾಜಗೋಪಾಲ್ ಇವರನ್ನು ಕಂಡು ವಿಚಾರಿಸಿ ಕಬ್ಬನ್ ಪಾರ್ಕ್ ಸಂಚಾರಿ ಪೊಲೀಸ್ ಇನ್ಸ್ ಪೆಕ್ಟರ್ ಕಿಶೋರ್ ಭರನಿಗೆ ಕರೆ ಮಾಡಿದರು. ಮಗುವಿನ ಪೋಷಕರನ್ನು ಹುಡುಕಿಕೊಡಿ ಎಂದು ಕೇಳಿಕೊಂಡರು. ಇಂದು ಸಾಧ್ಯವಾಗುವುದಿಲ್ಲ, ತುಂಬಾ ಕೆಲಸವಿದೆ ಎಂದು ಭರನಿಯವರು ಹೇಳಿ ಹೆಡ್ ಕಾನ್ಸ್ಟೇಬಲ್ ನಂದೀಶ್ ಮತ್ತು ಉಮೇಶ್ ಗೆ ಕಬ್ಬನ್ ಪಾರ್ಕ್ ಬಳಿ ಹೋಗುವಂತೆ ಸೂಚಿಸಿದರು.


ಹೆಡ್ ಕಾನ್ಸ್ಟೇಬಲ್ ಗಳಾದ ಉಮೇಶ್ ಮತ್ತು ನಂದೀಶ್ ಕಬ್ಬನ್ ಪಾರ್ಕ್ ಇಡೀ ಸುತ್ತಿ ಯಾರಾದರೂ ಮಗುವನ್ನು ಹುಡುಕುತ್ತಿದ್ದಾರಾ ಎಂದು ನೋಡಿದರು. ಸ್ವಲ್ಪ ಹೊತ್ತಿನ ನಂತರ ಮಹಿಳೆಯೊಬ್ಬರು ಕ್ವೀನ್ಸ್ ಸರ್ಕಲ್ ಹತ್ತಿರ ಅಳುತ್ತಿರುವುದು ಕಂಡು ಏನು ಎಂದು ವಿಚಾರಿಸಿದರು. ಆಗ ಮಗನನ್ನು ಕಳೆದುಕೊಂಡಿದ್ದೇನೆ ಎಂದು ಹೆಸರು ಹೇಳಲಿಚ್ಛಿಸದ ಮಹಿಳೆ ಹೇಳಿದರು. ಕೂಡಲೇ ಡಾಗ್ ಪಾರ್ಕ್ ಬಳಿ ಇದ್ದ ರಾಹುಲ್ ನನ್ನು ಕರೆದುಕೊಂಡು ಬಂದು ತಾಯಿ ಬಳಿ ಒಪ್ಪಿಸಿದರು. 


ಕೊನೆಗೂ ತಾಯಿ ಮಗುವನ್ನು ಒಂದು ಮಾಡಿದ ಪೊಲೀಸರು, ಅದಿತಿ ಭಟ್ ಅವರನ್ನು ಸಂಚಾರಿ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಬಿ ಆರ್ ರವಿಕಾಂತೇ ಗೌಡ ಶ್ಲಾಘಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com