ಕಾಶ್ಮೀರಿ ಪಂಡಿತರಿಗೆ ಪುನರ್ವಸತಿ ಕಲ್ಪಿಸುವಲ್ಲಿ ಕೇಂದ್ರ ಮಹತ್ವದ ಹೆಜ್ಜೆ ಇಟ್ಟಿದೆ: ತೇಜಸ್ವಿ ಸೂರ್ಯ

ಇಂದು ಭಾರತದ ಮುಕುಟ ಕಾಶ್ಮೀರದಿಂದ ಅಲ್ಲಿನ ಮೂಲನಿವಾಸಿಗಳಾದ  ಕಾಶ್ಮೀರಿ ಪಂಡಿತರನ್ನು ಹೊರತಳ್ಳಿದ ದಿನದ ಮೂವತ್ತನೇ ವರ್ಷಾಚರಣೆ. ಈ ಸಮಯದಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದರಾದ ತೇಜಸ್ವಿ ಸೂರ್ಯ ವಿಶೇಷ ಮಾತುಗಳ ಮೂಲಕ ಈ ಘಟನೆಯನ್ನು ಸ್ಮರಿಸಿಕೊಂಡಿದ್ದಾರೆ.
ತೇಜಸ್ವಿ ಸೂರ್ಯ
ತೇಜಸ್ವಿ ಸೂರ್ಯ

ಇಂದು ಭಾರತದ ಮುಕುಟ ಕಾಶ್ಮೀರದಿಂದ ಅಲ್ಲಿನ ಮೂಲನಿವಾಸಿಗಳಾದ  ಕಾಶ್ಮೀರಿ ಪಂಡಿತರನ್ನು ಹೊರತಳ್ಳಿದ ದಿನದ ಮೂವತ್ತನೇ ವರ್ಷಾಚರಣೆ. ಈ ಸಮಯದಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದರಾದ ತೇಜಸ್ವಿ ಸೂರ್ಯ ವಿಶೇಷ ಮಾತುಗಳ ಮೂಲಕ ಈ ಘಟನೆಯನ್ನು ಸ್ಮರಿಸಿಕೊಂಡಿದ್ದಾರೆ.

"ಇಂದು ಕಾಶ್ಮೀರಿ ಪಂಡಿತರು ತಮ್ಮ ಮನೆಗಳಿಂದ ದೂರ ಸರಿದ ನದ 30 ನೇ ವರ್ಷಾಚರಣೆ  ಜಿಹಾದಿಗಳು ಅವರನ್ನು ತಮ್ಮ ತಾಯ್ನಾಡಿನಿಂದ ಹೇಗೆ ಓಡಿಸಿದ್ದರು ತು ಎಂಬುದು ನಮಗೆಲ್ಲರಿಗೂ ತಿಳಿದಿದೆ. ಮುಗ್ಧ ಹಿಂದೂ ಕುಟುಂಬಗಳಿಗೆ ಈ ಇಸ್ಲಾಮಿಕ್ ಜಿಹಾದಿಗಳು ನೀಡಿದ ಆಯ್ಕೆಯೆಂದರೆ ಮುಸ್ಲಿಮರಾಗಿ ಬದಲಾಗುವುದು ಅಥವಾ ಸಾವು. ನೂರಾರು ಜನರು ಈ ಘಟನೆಯಿಂದ ಪ್ರಾಣಬಿಟ್ಟರುಮತ್ತು ಲಕ್ಷಾಂತರ ಜನರನ್ನು ಕಾಶ್ಮೀರದಿಂದ ಗಡಿಪಾರು ಮಾಡಲಾಗಿತ್ತು. ಅವರು ಮತ್ತು ಅವರ ಕುಟುಂಬ ಇಂದಿಗೂ ತಮ್ಮ ಮನೆಗಳಿಂದ ದೂರದಲ್ಲಿ ನಿರಾಶ್ರಿತರಂತೆ ವಾಸಿಸುತ್ತಿದ್ದಾರೆ.

"ಪ್ರಧಾನಿ ನರೇಂದ್ರ ಮೋದಿ ಯವರ ನೇತೃತ್ವದ ಎನ್‌ಡಿಎ ಸರ್ಕಾರವು ಕಾಶ್ಮೀರಿ ಹಿಂದೂಗಳಿಗೆ ಪುನರ್ವಸತಿ ಕಲ್ಪಿಸುವಲ್ಲಿ ಮತ್ತು ತಮ್ಮ ಮನೆಗಳಿಗೆ ಮರಳುವುದನ್ನು ಖಚಿತಪಡಿಸುವಲ್ಲಿ  ಪ್ರಮುಖ ಕ್ರಮಗಳನ್ನು ಕೈಗೊಂಡಿದೆ.

"ಗೃಹ ಸಚಿವ ಅಮಿತ್ ಶಾ ಕಾಶ್ಮೀರಕ್ಕೆ ವಿಶೇಷ ಸ್ಥಾನ ಮಾನ ನೀಡಿದ್ದ  370 ನೇ ವಿಧಿಯನ್ನು ರದ್ದುಪಡಿಸಿದ್ದು  ಈ ಪ್ರಕ್ರಿಯೆಯಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ. ಭಾರತವನ್ನು ಒಂದು ಒಕ್ಕೂಟವನ್ನಾಗಿ ಮಾಡುವುದು ಮತ್ತು ಯಾವುದೇ ಭಾರತೀಯರ  ಸಂಚಾರಕ್ಕೆ ಅನುಕೂಲ ಮಾಡಿಕೊಡುವುದು ಇದರ ಹಿಂದಿನ ಉದ್ದೇಶ. ಕಾಶ್ಮೀರಿ ಪಂಡಿತರು ಖಾಯಂ ಆಗಿ ಮ್ಮ ತಾಯ್ನಾಡಿಗೆ ಮರಳಲು ಅವರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಶಾ ಅವರ ಈ ಕಾರ್ಯ ಪ್ರಾಮುಖ್ಯತೆ ಪಡೆದಿದೆ.

"ಜಮ್ಮುವಿನಲ್ಲಿ ಪುನರ್ವಸತಿ ಹೊಂದಿದವರಿಗೆ ಸರ್ಕಾರಿ ಉದ್ಯೋಗ, ಆಸ್ತಿ ಖರೀದಿ ಇತ್ಯಾದಿಗಳಲ್ಲಿ ಸಮಾನ ಅವಕಾಶಗಳು, 370 ನೇ ವಿಧಿಯನ್ನು ರದ್ದುಗೊಳಿಸುವ ಮೂಲಕ, ಅವರು ಬಯಸಿದಲ್ಲಿ, ಮತ್ತೆ ಕಾಶ್ಮೀರಕ್ಕೆ ಸ್ಥಳಾಂತರಗೊಳ್ಳಲು ಸಹಾಯ ಮಾಡುತ್ತದೆ. 370 ನೇ ವಿಧಿಯನ್ನು ರದ್ದುಪಡಿಸಿದ ಪರಿಣಾಮವಾಗಿ ಕೇಂದ್ರ ಸರ್ಕಾರದ ವಿವಿಧ ಕಾಯಿದೆಗಳು, ಮುಖ್ಯವಾಗಿ ಆರ್‌ಟಿಐ ಕಾಯ್ದೆ ಮತ್ತು ತ್ರಿವಳಿ ತಲಾಕ್ ಕಾಯ್ದೆಗಳು ಕಾಶ್ಮೀರಕ್ಕೂ ಅನ್ವಯವಾಗಲಿದೆ.

"ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ನಾಗರಿಕರ ಸುರಕ್ಷತೆ ಮತ್ತು ರಕ್ಷಣೆಯ ಬಗ್ಗೆ ಕೇಂದ್ರ ಸರ್ಕಾರ ಹೆಚ್ಚು ಕಾಳಜಿ ವಹಿಸುತ್ತದೆ 370 ನೇ ವಿಧಿಯನ್ನು ರದ್ದುಪಡಿಸಿದ ನಂತರ ಕಣಿವೆ ಪ್ರದೇಶವನ್ನು  ಎಲ್ಲಾ ನಾಗರಿಕರಿಗೆ ಶಾಂತಿಯುತ ಮತ್ತು ಸುರಕ್ಷಿತ ಸ್ಥಳವನ್ನಾಗಿ ಮಾಡಲು ಇದು ಅತ್ಯಂತ ಅಗತ್ಯವಾದ ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಯಾವುದೇ ಸಮಯದಲ್ಲಿ ಕಣಿವೆ ಈ ಹಿಂದಿನಂತೆ ಉಗ್ರರ ಸ್ವರ್ಗವಾಗುವುದಿಲ್ಲ ಎಂದು ನಾನು ಖಾತ್ರಿಪಡಿಸುತ್ತೇನೆ, ಪ್ರಧಾನಿ ಮೋದಿಯವರ ಈ ಪ್ರಯತ್ನಕ್ಕೆ ನನ್ನ ಹೃತ್ಪೂರ್ವ ಧನ್ಯವಾದಗಳು" ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com