ಮುಂದಿನ ಶೈಕ್ಷಣಿಕ ವರ್ಷದಲ್ಲೂ ಟಿಪ್ಪು ಪಠ್ಯ ಕೈಬಿಡುವುದಿಲ್ಲ; ಸುರೇಶ್ ಕುಮಾರ್

ಶಾಲಾ ಪಠ್ಯದಿಂದ ಟಿಪ್ಪು ಸುಲ್ತಾನ್ ಕುರಿತ ಅಧ್ಯಾಯಗಳನ್ನು ತೆಗೆಯಬೇಕು ಎಂಬ ಒತ್ತಾಯದ ನಡುವೆಯೇ ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ತರಾತುರಿಯ ಹೆಜ್ಜೆ ಇಡದಿರಲು ನಿರ್ಧರಿಸಿದೆ. 
ಟಿಪ್ಪು ಸುಲ್ತಾನ್
ಟಿಪ್ಪು ಸುಲ್ತಾನ್

ಟಿಪ್ಪು ಜಯಂತಿ ರದ್ದತಿ ಆದೇಶ ಮರುಪರಿಶೀಲಿಸಲು ಕಾಲಾವಕಾಶ ಬೇಕು; ಸರ್ಕಾರ

ಬೆಂಗಳೂರು: ಶಾಲಾ ಪಠ್ಯದಿಂದ ಟಿಪ್ಪು ಸುಲ್ತಾನ್ ಕುರಿತ ಅಧ್ಯಾಯಗಳನ್ನು ತೆಗೆಯಬೇಕು ಎಂಬ ಒತ್ತಾಯದ ನಡುವೆಯೇ ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ತರಾತುರಿಯ ಹೆಜ್ಜೆ ಇಡದಿರಲು ನಿರ್ಧರಿಸಿದೆ.

ಈ ಸಂಬಂಧ ಸ್ಪಷ್ಟನೆ ನೀಡಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್, ಮುಂದಿನ ಶೈಕ್ಷಣಿಕ ವರ್ಷದಲ್ಲಿ ಕೂಡ ಪಠ್ಯಗಳಿಂದ ಟಿಪ್ಪು ಕುರಿತು ಅಧ್ಯಾಯ ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ ಎಂದಿದ್ದಾರೆ.

ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು "ಪಠ್ಯದಿಂದ ಟಿಪ್ಪು ವಿಚಾರ ಕೈಬಿಡಬೇಕೆಂದು ಶಾಸಕ ಅಪ್ಪಚ್ಚು ರಂಜನ್ ಮನವಿ ಮಾಡಿದ್ದರು.ಈ ಸಂಬಂಧ ಸಿಎಂ ಜತೆ ಚರ್ಚಿಸಿ ಸಮಿತಿ ರಚನೆ ಮಾಡಲಾಗಿತ್ತು, ಆ ಸಮಿತಿಯು ಇತಿಹಾಸದಲ್ಲಿರುವ ಅಂಶಗಳಷ್ಟೇ ಪಠ್ಯಪೌಸ್ತಕದಲ್ಲಿದೆ ಎಂದು ವರದಿ ನೀಡಿದೆ.ಅಲ್ಲದೆ ಇದಾಗಲೇ ಪಠ್ಯ ಪುಸ್ತಕದ ಟೆಂಡರ್ ಅವಧಿ ಮುಗಿದಿರುವ ಕಾರಣ ಈ ವರ್ಷ ಟಿಪ್ಪುಇತಿಹಾಸವು ಯಥಾವತ್ತಾಗಿ ಮುಂದುವರಿಯಲಿದೆ." ಎಂದರು.

ಮುಂದಿನ ವರ್ಷ ಪಠ್ಯದಲ್ಲಿ ಬದಲಾವಣೆ ಆಗಲಿದೆಯೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಸುರೇಶ್ ಕುಮಾರ್ ಮುಂದಿನ ವರ್ಷ ಪಠ್ಯದಲ್ಲಿ ಟಿಪ್ಪುವಿನಇತಿಹಾಸ ಬದಲಾವಣೆ ಮಾಡಬೇಕೋ? ಬೇಡವೋ? ಎಂಬುದು ಸಮಿತಿಗೆ ಬಿಟ್ಟ ವಿಚಾರ" ಏಂದಿದ್ದಾರೆ.

ಟಿಪ್ಪು ಜಯಂತಿ ರದ್ದತಿ ಆದೇಶ ಮರುಪರಿಶೀಲಿಸಲು ಕಾಲಾವಕಾಶ ಬೇಕು; ಸರ್ಕಾರ

ಟಿಪ್ಪು ಜಯಂತಿಯನ್ನು ರದ್ದುಗೊಳಿಸಿ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶವನ್ನು ಮರು ಪರಿಶೀಲಿಸಲು ಇನ್ನಷ್ಟು ಕಾಲಾವಕಾಶ ಕೋರಿದ ಸರ್ಕಾಋದ ಮನವಿಯನ್ನು ಹೈಕೋರ್ಟ್ ಪುರಸ್ಕರಿಸಿದೆ.

ಸರ್ಕಾರದ ಕ್ರಮ ಪ್ರಶ್ನಿಸಿ ಉತ್ತರ ಪ್ರದೇಶದ ಲಖನೌನ ಬಿಲಾಲ್ ಆಲಿ ಷಾ, ‘ಟಿಪ್ಪು ಸುಲ್ತಾನ್ ಯುನೈಟೆಡ್ ಫ್ರಂಟ್’ ಅಧ್ಯಕ್ಷ ಸರ್ದಾರ್ ಅಹಮದ್‌ ಖುರೇಷಿ ಮತ್ತು ‘ಟಿಪ್ಪು ರಾಷ್ಟ್ರೀಯ ಸೇವಾ ಸಂಘ’ದ ಅಧ್ಯಕ್ಷ ಎಂ.ಎಸ್.ಮುಕ್ರಮ್‌ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ. ಎಸ್.ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠ ವಿಚಾರಣೆಯನ್ನು ಮುಂದೂಡಿತು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com