'ಕಂಬಿ ಏಣಿಸಬೇಕಾಗುತ್ತದೆ ಹುಷಾರ್', ಸ್ವಿಗ್ಗಿ ಸಂಸ್ಧೆಗೆ ಬೆಂಗಳೂರು ಕಮೀಷನರ್ ಖಡಕ್ ಎಚ್ಚರಿಕೆ!

ಆರ್ಡರ್ ಮಾಡಿದ 30 ನಿಮಿಷದಲ್ಲಿ ಪಿಜ್ಜಾ ಡೆಲಿವಿರಿ ಮಾಡ್ತೀವಿ, ಇಲ್ಲದಿದ್ದರೆ ಪಿಜ್ಜಾ ಫ್ರೀ ಎಂಬ ಆಫರ್ ಗಳನ್ನು ಕೆಲ ಆನ್ ಲೈನ್ ಫುಡ್ ಕಂಪನಿಗಳು ಕೊಡುತ್ತಿದ್ದು ಇದರಿಂದ ಡೆಲಿವರಿ ಬಾಯ್ ಗಳು ತಮ್ಮ ಜೀವವನ್ನು ಪಣಕ್ಕಿಟ್ಟು ಟ್ರಾಫಿಕ್ ಸಂಚಾರವನ್ನು ಉಲ್ಲಂಘಿಸಿ ಬೈಕ್ ರೈಡ್ ಮಾಡುತ್ತಿದ್ದಾರೆ ಎಂದು ಬೆಂಗಳೂರು ಕಮೀಷನರ್ ಭಾಸ್ಕರ್ ರಾವ್ ಹೇಳಿದ್ದಾರೆ.
ಡೆಲಿವಿರಿ ಬಾಯ್-ಭಾಸ್ಕರ್ ರಾವ್
ಡೆಲಿವಿರಿ ಬಾಯ್-ಭಾಸ್ಕರ್ ರಾವ್

ಬೆಂಗಳೂರು: ಆರ್ಡರ್ ಮಾಡಿದ 30 ನಿಮಿಷದಲ್ಲಿ ಪಿಜ್ಜಾ ಡೆಲಿವಿರಿ ಮಾಡ್ತೀವಿ, ಇಲ್ಲದಿದ್ದರೆ ಪಿಜ್ಜಾ ಫ್ರೀ ಎಂಬ ಆಫರ್ ಗಳನ್ನು ಕೆಲ ಆನ್ ಲೈನ್ ಫುಡ್ ಕಂಪನಿಗಳು ಕೊಡುತ್ತಿದ್ದು ಇದರಿಂದ ಡೆಲಿವರಿ ಬಾಯ್ ಗಳು ತಮ್ಮ ಜೀವವನ್ನು ಪಣಕ್ಕಿಟ್ಟು ಟ್ರಾಫಿಕ್ ಸಂಚಾರವನ್ನು ಉಲ್ಲಂಘಿಸಿ ಬೈಕ್ ರೈಡ್ ಮಾಡುತ್ತಿದ್ದಾರೆ ಎಂದು ಬೆಂಗಳೂರು ಕಮೀಷನರ್ ಭಾಸ್ಕರ್ ರಾವ್ ಹೇಳಿದ್ದಾರೆ.

ನಿಮ್ಮ ಸಂಸ್ಧೆಗಳ ನಿಮಯವನ್ನು ಸ್ವಲ್ಪ ಬದಲಾಯಿಸಿ 30 ನಿಮಿಷ ಬದಲಿಗೆ 40 ನಿಮಿಷಕ್ಕೆ ಏರಿಸಿ ಎಂದು ಟ್ವೀಟ್ ಮೂಲಕ ಸಲಹೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಸ್ವಿಗ್ಗಿ ಹಾಗೇನು ಇಲ್ಲ ಸರ್, ನಾವು ಸಂಚಾರಿ ನಿಮಯವನ್ನು ಪಾಲಿಸುತ್ತೇವೆ. ಯಾರೂ ಡೆಲಿವರಿ ಬಾಯ್ ಗಳು ಪಾಲನೆ ಮಾಡದಿದ್ದರೆ ನಮ್ಮ ಸಹಾಯವಾಣಿಗೆ ದೂರು ಕೊಡಿ ಎಂದು ರೀಟ್ವೀಟ್ ಮಾಡಿದ್ದಾರೆ. 

ಇದರಿಂದ ಕೊಪಗೊಂಡ ಭಾಸ್ಕರ್ ರಾವ್ ಅವರು, ನಿಮ್ಮ ಡೆಲಿವಿರಿ ಬಾಯ್ ಗಳು ಟ್ರಾಫಿಕ್ ರೂಲ್ಸ್ ಗಳನ್ನು ಬ್ರೇಕ್ ಮಾಡಿ ಪೊಲೀಸರ ಕೈ-ಕಾಲು ಹಿಡಿದುಕೊಂಡು ಬಿಟ್ಟುಬಿಡಿ ಸರ್, ಇಲ್ಲದಿದ್ದರೆ ನಮಗೆ ತೊಂದರೆಯಾಗುತ್ತದೆ. ಹೇಳಿದ ಸಮಯಕ್ಕೆ ಡೆಲಿವರಿ ಮಾಡಬೇಕು ಎಂದು ಬೇಡಿಕೊಳ್ತಾರೆ. ನಿಮ್ಮ ಡೆಲಿವರಿ ಬಾಯ್ ಗಳೇ ಸಿಕ್ಕಾಪಟ್ಟೆ ರೂಲ್ಸ್ ಬ್ರೇಕ್ ಮಾಡುತ್ತಿದ್ದಾರೆ. ಯಾರಾದರೂ ಡೆಲಿವರಿ ಬಾಯ್ ಗೆ ಆಕ್ಸಿಡೆಂಟ್ ಆಗಿ ತೊಂದರೆಯಾಗಬೇಕು. ಆಗ ನಿಮ್ಮ ಸ್ವಿಗ್ಗಿ ಮ್ಯಾನೇಜ್ ಮೆಂಟ್ ನವರು ಕಂಬಿ ಹಿಂದೆ ಇರಬೇಕಾಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com