ಶಿವಮೊಗ್ಗ ಅರಣ್ಯ ಇಲಾಖೆಯಿಂದ ಮೊಟ್ಟ ಮೊದಲ ಬಾರಿಗೆ ಡ್ರೋಣ ಸರ್ವೆ

ಇದೇ ಮೊದಲ ಬಾರಿಗೆ ಶಿವಮೊಗ್ಗ ಅರಣ್ಯ ಇಲಾಖೆ ಡ್ರೋಣ್ ಕ್ಯಾಮೆರಾ ಬಳಸಿ ಜಿಲ್ಲೆಯ ಶೆಟ್ಟಿಹಳ್ಳಿ ಮತ್ತು ಚಿತ್ರ ಶೆಟ್ಟಿಹಳ್ಳಿ ಗ್ರಾಮಗಳ ವನ್ಯ ಜೀವಿ ಧಾಮದಲ್ಲಿ ಭೂಮಿ ಒತ್ತುವರಿ ಪತ್ತೆ ಹಚ್ಚಲು ಮುಂದಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಶಿವಮೊಗ್ಗ:  ಇದೇ ಮೊದಲ ಬಾರಿಗೆ ಶಿವಮೊಗ್ಗ ಅರಣ್ಯ ಇಲಾಖೆ ಡ್ರೋಣ್ ಕ್ಯಾಮೆರಾ ಬಳಸಿ ಜಿಲ್ಲೆಯ ಶೆಟ್ಟಿಹಳ್ಳಿ ಮತ್ತು ಚಿತ್ರ ಶೆಟ್ಟಿಹಳ್ಳಿ ಗ್ರಾಮಗಳ ವನ್ಯ ಜೀವಿ ಧಾಮದಲ್ಲಿ ಭೂಮಿ ಒತ್ತುವರಿ ಪತ್ತೆ ಹಚ್ಚಲು ಮುಂದಾಗಿದೆ.


ಡಿನೋಟಿಫಿಕೇಷನ್ ನಲ್ಲಿ ಶಿವಮೊಗ್ಗ ಜಿಲ್ಲೆಯೇ ರಾಜ್ಯಾದ್ಯಂತ ಅತಿ ಹೆಚ್ಚು ಅರಣ್ಯ ಡಿನೋಟಿಫೈಡ್ ಆಗಿರುವಂತಹ ಜಿಲ್ಲೆ. ಅದರಲ್ಲಿ 2228.17 ಹೆಕ್ಟೇರ್ ಅರಣ್ಯ ಭೂಮಿಯನ್ನ ಶಿವಮೊಗ್ಗ ಜಿಲ್ಲೆಯಲ್ಲಿಯೇ ಮಾಡಲಾಗಿದೆ. ಅಂದರೆ ಶೇ.70 ರಷ್ಟು ಡಿನೋಟಿಫೈ ಮಾಡಲಾಗಿದೆ. ಇದು ರಾಜ್ಯದಲ್ಲಿಯೇ ಅತಿಹೆಚ್ಚು ಕಂದಾಯ ಭೂಮಿಗೆ ಪರಿವರ್ತಿಸಿರುವ ಜಿಲ್ಲೆ ಅಂತನೇ ಹೆಸರುಪಡೆದುಕೊಂಡಿದೆ.

ಇಂತಹ ಸಂದರ್ಭದಲ್ಲಿ ಅರಣ್ಯ ಇಲಾಖೆ ಈಗ ತನ್ನ ವ್ಯಾಪ್ತಿಯನ್ನ ಗುರುತಿಸಲು ಮತ್ತೊಂದು ರೀತಿಯ ಸರ್ವೆ ಮಾಡಲು ಮುಂದಾಗಿದೆ. 

184 ಎಕರೆ ಜಾಗ ಸರ್ವೆ ಮಾಡಲಾಗಿದೆ. 100 ರಿಂದ 120 ರ ಅಡಿ ಎತ್ತರದಲ್ಲಿ ಸರ್ವೆ ಮಾಡಲ್ಪಡುವ ಪ್ರದೇಶದಲ್ಲಿ ಡ್ರೋಣ್ ನಿಂದ ಸತತವಾಗಿ ಫೋಟೊ ತೆಗೆದುಕೊಳ್ಳಲಾಗುತ್ತದೆ.

ಈ ಫೋಟೊವನ್ನ ಹೆಣೆದು, ಗೂಗಲ್ ಮ್ಯಾಪ್ ಮೇಲೆ ಓವರ್ ಲ್ಯಾಪ್ ಮಾಡಲಾಗುತ್ತದೆ. ಇದನ್ನ ಜಿಯೋ ರೆಫರೆನ್ಸ್ ಡ್ ವಿಧಾನವೆಂದು ಕರೆಯಲಾಗುತ್ತದೆ. ಇನ್ನೊಂದು ಮುಂದು ಹೆಚ್ಚೆಹೋಗಿ ಹೇಳುವುದಾದರೆ ಇದನ್ನ ಜಿಯೋ ರೆಫರೆನ್ಸ್ ರಿಯಲಿಸ್ಟಿಕ್ ಟೋಪೋಗ್ರಾಫಿಕ್ ಮ್ಯಾಪ್ ಎಂದು ಕರೆಯಲಾಗುವುದು.  

ಈ ಮ್ಯಾಪ್ ನಲ್ಲಿ ಯಾವ ಸ್ಥಳದಲ್ಲಿ ಮನೆ, ಬೇಲಿ, ಕಾಡು, ಎಲ್ಲ ಗಡಿಪ್ರದೇಶವೂ ಸಹ ಪ್ರದರ್ಶನಗೊಳ್ಳುತ್ತದೆ. ಇದನ್ನ ಕಂಪ್ಯೂಟರ್ ನಲ್ಲಿ ಸರ್ವೆ ಮಾಡಿದಂತಹ ಏರಿಯಾವನ್ನ ಮಾರ್ಕ್ ಮಾಡುತ್ತಾ ಹೋಗುತ್ತೇವೆ. ಇಷ್ಟು ಕೆಲಸ ಡ್ರೋಣ್ ಸರ್ವೆಯಲ್ಲಿ ನಡೆಯಲಿದೆ. 

ಇದನ್ನ ಶಿವಮೊಗ್ಗ ಅರಣ್ಯ ಮುಖ್ಯ ಸಂರಕ್ಷಣಾ ಇಲಾಖೆಯ ಸಿಸಿಎಫ್ ಶ್ರೀನಿವಾಸಲು ಡ್ರೋಣ್ ಸರ್ವೆಗೆ ಚಾಲನೆ ನೀಡಿದ್ದಾರೆ. ತಾಲೂಕಿನ ಶೆಟ್ಟಿಹಳ್ಳಿ ಹಾಗೂ ಚಿತ್ರಶೆಟ್ಟಿಹಳ್ಳಿಯಲ್ಲಿ ಈ ಡ್ರೋನ್ ಸರ್ವೆ ನಡೆದಿದೆ. ಇದೊಂದು ಉತ್ತಮ ರೀತಿಯ ಸರ್ವೆ ಕಾರ್ಯವಾಗಿದ್ದು ಯಾವುದೇ ರೀತಿಯ ಗೊಂದಲ ಇರುವುದಿಲ್ಲ ಎಂದು ಸಿಸಿಎಫ್ ಶ್ರೀನಿವಾಸಲು ತಿಳಿಸಿದ್ದಾರೆ,

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com