ರಾಜಕೀಯ ಒತ್ತಡ, ಇಂಜಿನಿಯರ್ ಗಳ ವರ್ಗಾವಣೆಗೆ ತಡೆ

ರಾಜಕೀಯ ಒತ್ತಡದಿಂದಾಗಿ ಕೆಲವು ಇಂಜಿನಿಯರ್ ಗಳು ಸೇವಾ ನಿಯಮಗಳನ್ನು ಉಲ್ಲಂಘಸಿ ರಾಜ್ಯ ಜಲ ಸಂಪನ್ಮೂಲ ಇಲಾಖೆಯಲ್ಲೇ ಮುಂದುವರೆದಿದ್ದು, ಇದರಿಂದ ಇಲಾಖೆಯ ಆಂತರಿಕ ಉದ್ಯೋಗಿಗಳಿಗೆ ತೊಂದರೆಯಾಗಿದೆ ಎಂದು ಎಂಬ ಆರೋಪಿಗಳು ಕೇಳಿಬಂದಿವೆ.
ವಿಧಾನಸೌಧ
ವಿಧಾನಸೌಧ

ಬೆಂಗಳೂರು: ರಾಜಕೀಯ ಒತ್ತಡದಿಂದಾಗಿ ಕೆಲವು ಇಂಜಿನಿಯರ್ ಗಳು ಸೇವಾ ನಿಯಮಗಳನ್ನು ಉಲ್ಲಂಘಸಿ ರಾಜ್ಯ ಜಲ ಸಂಪನ್ಮೂಲ ಇಲಾಖೆಯಲ್ಲೇ ಮುಂದುವರೆದಿದ್ದು, ಇದರಿಂದ ಇಲಾಖೆಯ ಆಂತರಿಕ ಉದ್ಯೋಗಿಗಳಿಗೆ ತೊಂದರೆಯಾಗಿದೆ ಎಂದು ಎಂಬ ಆರೋಪಿಗಳು ಕೇಳಿಬಂದಿವೆ.

ಕರ್ನಾಟಕ ನಾಗರಿಕ ಸೇವಾ ನಿಯಮಗಳ ಪ್ರಕಾರ, ಸರ್ಕಾರಿ ಉದ್ಯೋಗಿಯೊಬ್ಬರನ್ನು ಮಾತೃ ಇಲಾಖೆಯಿಂದ ಬೆರೆ ಇಲಾಖೆಗೆ ಕನಿಷ್ಠ ಮೂರು ವರ್ಷ ಮತ್ತು ಗರಿಷ್ಠ ಐದು ವರ್ಷಗಳ ವರೆಗೆ ನಿಯೋಜಿಸಬಹುದಾಗಿದೆ. 

ಈ ಸಂಬಂಧ ಕಳೆದ ಆಗಸ್ಟ್ 2019ರಲ್ಲಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರು ಜಲ ಸಂಪನ್ಮೂಲ ಇಲಾಖೆ ಸೇರಿದಂತೆ ಸರ್ಕಾರದ ಎಲ್ಲಾ ಇಲಾಖೆಗಳಿಗೂ ಪತ್ರ ಬರೆದಿದ್ದು, ಐದು ವರ್ಷ ಪೂರೈಸಿದ ನಂತರವೂ ಮಾತೃ ಇಲಾಖೆಗೆ ಮರಳದ ಸಿಬ್ಬಂದಿಯನ್ನು ಗುರುತಿಸುವಂತೆ ಸೂಚಿಸಿದೆ. ಅದರಂತೆ ಜಲ ಸಂಪನ್ಮೂಲ ಇಲಾಖೆ ಸಹ ಡೆಪ್ಯುಟೇಷನ್ ಮೇಲೆ ತನ್ನ ಇಲಾಖೆಗೆ ಬಂದು ಕಳೆದ 10-20 ವರ್ಷಗಳಿಂದ ಅಲ್ಲಿಯೇ ಕಾರ್ಯನಿರ್ವಹಿಸುತ್ತಿರುವ 9 ಇಂಜಿನಿಯರ್ ಗಳನ್ನು ಗುರುತಿಸಿದೆ. ಅಲ್ಲದೆ ಅವರನ್ನು ಮಾತೃ ಇಲಾಖೆಗೆ ವರ್ಗಾಯಿಸುವಂತೆ ಮುಖ್ಯಮಂತ್ರಿಗಳ ಕಚೇರಿಗೆ ಪಟ್ಟಿ ರವಾನಿಸಲಾಗಿದೆ. ಆದರೆ ಮುಖ್ಯಮಂತ್ರಿಗಳ ಕಚೇರಿ ಕೇವಲ ಐದು ಇಂಜಿನಿಯರ್ ಗಳ ವರ್ಗಾವಣೆಗೆ ಮಾತ್ರ ಅನುಮತಿ ನೀಡಿದೆ.

ಮೂಲಗಳ ಪ್ರಕಾರ, ಉಳಿದ ನಾಲ್ವರು ಇಂಜಿನಿಯರ್ ಗಳು ರಾಜಕೀಯ ಪ್ರಭಾವ ಬಳಸಿಕೊಂಡು, ನಿಯಮಗಳಿಗೆ ವಿರುದ್ಧವಾಗಿ ಜಲ ಸಂಪನ್ಮೂಲಕ ಇಲಾಖೆಯಲ್ಲೇ ಮುಂದುವರೆದಿದ್ದಾರೆ. ಇದರಿಂದ ಇತ್ತೀಚಿಗೆ ಬಡ್ತಿ ಹೊಂದಿದೆ ಇಂಜಿನಿಯರ್ ಗಳಿಗೆ ಸಮಸ್ಯೆಯಾಗಿದೆ. ಕೆಲವು ವಾರಗಳ ಹಿಂದಷ್ಟೇ ಒಟ್ಟು 117 ಇಂಜಿನಿಯರ್ ಗಳಿಗೆ ಬಡ್ತಿ ನೀಡಲಾಗಿದೆ. ಈ ಪೈಕಿ ಸುಮಾರು 30 ಇಂಜಿನಿಯರ್ ಗಳಿಗೆ ಇದುವರೆಗೂ ಪೋಸ್ಟಿಂಗ್ ನೀಡಿಲ್ಲ. ಏಕೆಂದರೆ ಅಲ್ಲಿ ಬೆರೆ ಇಲಾಖೆಯವರು ತುಂಬಿರುವುದರಿಂದ ಯಾವುದೇ ಹುದ್ದೆ ಖಾಲಿ ಇಲ್ಲ ಎನ್ನಲಾಗಿದೆ.

ನಮ್ಮ ಇಲಾಖೆಯ ಹುದ್ದೆಗಳನ್ನು ಹೊರಗಿನವರಿಗೆ ನೀಡಲಾಗಿದೆ. ಆದರೆ ಅವಧಿ ಮುಗಿದರೂ ಹುದ್ದೆ ಖಾಲಿ ಮಾಡುವಂತೆ ಅವರಿಗೆ ಏಕೆ ಸೂಚಿಸುತ್ತಿಲ್ಲ? ಎಂದು ಕರ್ನಾಟಕ ಇಂಜಿನಿಯರ್ ಗಳ ಸಂಘದ ಅಧ್ಯಕ್ಷ ಡಿಎಸ್ ದೇವರಾಜ್ ಅವರು ಪ್ರಶ್ನಿಸಿದ್ದಾರೆ.

ದೇವರಾಜ್ ಅವರು ಸಹ ಕಾರ್ಯನಿರ್ವಾಹಕ ಇಂಜಿನಿಯರ್ ಆಗಿ ಬಡ್ತಿ ಪಡೆದಿದ್ದಾರೆ. ಆದರೆ ಅವರು ಹುದ್ದೆ ನೀಡಿಲ್ಲ. 

ಡೆಪ್ಯುಟೇಷನ್ ಮೇಲೆ ನಮ್ಮ ಇಲಾಖೆಯಲ್ಲಿರುವ ಇಂಜಿನಿಯರ್ ಗಳನ್ನು ವಾಪಸ್ ಕರೆಯಿಸಿಕೊಳ್ಳುವಂತೆ ಒತ್ತಾಯಿಸಿ ನಾವು ಮುಖ್ಯಮಂತ್ರಿಗಳಿಗೆ ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆಯುತ್ತಿದ್ದೇವೆ ಎಂದು ದೇವರಾಜ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com