ಯಾದಗಿರಿ: ಬಸ್ ನಿಲ್ದಾಣದಲ್ಲಿ ಅನುಮಾನಸ್ಪದ ಬ್ಯಾಗ್ ಪತ್ತೆ, ಜನರ ಆತಂಕ

ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇದ್ದ ಬ್ಯಾಗ್ ಪತ್ತೆಯಾದ ಬೆನ್ನಲ್ಲೇ ಯಾದಗಿರಿ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಅನುಮಾನಸ್ಪದ ಬ್ಯಾಗ್ ಪತ್ತೆಯಾಗಿದ್ದು, ಕೆಲ ಕಾಲ ಸಾರ್ವಜನಿಕರು ಆತಂಕಕ್ಕೆ ಒಳಗಾಗಿದ್ದರು. 

Published: 21st January 2020 04:41 PM  |   Last Updated: 21st January 2020 04:41 PM   |  A+A-


yadagir1

ಯಾದಗಿರಿ ಬಸ್ ನಿಲ್ದಾಣ

Posted By : Lingaraj Badiger
Source : UNI

ಯಾದಗಿರಿ: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇದ್ದ ಬ್ಯಾಗ್ ಪತ್ತೆಯಾದ ಬೆನ್ನಲ್ಲೇ ಯಾದಗಿರಿ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಅನುಮಾನಸ್ಪದ ಬ್ಯಾಗ್ ಪತ್ತೆಯಾಗಿದ್ದು, ಕೆಲ ಕಾಲ ಸಾರ್ವಜನಿಕರು ಆತಂಕಕ್ಕೆ ಒಳಗಾಗಿದ್ದರು. 

ಅಪರಿಚಿತ ವ್ಯಕ್ತಿಯೋರ್ವ ಬ್ಯಾಗ್ ಬಿಟ್ಟು ಹೋಗಿರುವ ಮಾಹಿತಿ ತಿಳಿದು ಸ್ಥಳಕ್ಕೆ ಬಾಂಬ್ ನಿಷ್ಕ್ರಿಯದಳ ಹಾಗೂ ಶ್ವಾನದಳದಿಂದ ಬ್ಯಾಗ್ ತಪಾಸಣೆ ನಡೆಸಿದರು. ಬ್ಯಾಗ್ ನಲ್ಲಿ ಬಟ್ಟೆ, ಹಣ ಪತ್ತೆಯಾಗಿದ್ದು, ಯಾವುದೇ ಸ್ಫೋಟಕ ವಸ್ತುಗಳು ಕಂಡುಬಂದಿಲ್ಲ. ಪ್ರಯಾಣಿಕರೊಬ್ಬರು ಬ್ಯಾಗ್ ಬಿಟ್ಟು ಹೋಗಿದ್ದರು ಎಂದು ನಂತರ ಮಾಹಿತಿ ದೊರೆತಿದೆ. 

ಇದಾದ ಕೆಲ ಹೊತ್ತಿನಲ್ಲಿ ನಗರದ ಅಜೀಜ್ ಕಾಲೋನಿಯ ಸನಾ ಮಸೀದಿ ಪಕ್ಕದಲ್ಲಿ ಮತ್ತೊಂದು ಅನುಮಾನಸ್ಪದ ಬ್ಯಾಗ್ ಪತ್ತೆಯಾಗಿತ್ತು. ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳ ಭೇಟಿ ನೀಡಿ ಅಲ್ಲಿಯೂ ಬ್ಯಾಗ್ ಪರಿಶೀಲನೆ ನಡೆಸಲಾಯಿತು. ಬ್ಯಾಗ್ ನಲ್ಲಿ ನೆಹರು ಶಾಲೆಯ ವಿದ್ಯಾರ್ಥಿ ಶೇಕ್ ಇಮ್ರಾನ್ ಹೆಸರಿನ ಐಡಿ ಕಾರ್ಡ್, ಪುಸ್ತಕ ಪತ್ತೆಯಾಗಿತ್ತು. 

ಈ ಕುರಿತು ಮಾಹಿತಿ ನೀಡಿರುವ ಪೊಲೀಸರು, ಯಾರೂ ಆತಂಕಪಡುವ ಅಗತ್ಯವಿಲ್ಲ. ಶಂಕಾಸ್ಪದ ವ್ಯಕ್ತಿ ಅಥವಾ ವಸ್ತು ಕಂಡು ಬಂದರೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ ಎಂದು ಮನವಿ ಮಾಡಿದ್ದಾರೆ.

Stay up to date on all the latest ರಾಜ್ಯ news
Poll
Parliament

ಸಂಸತ್ತಿನ ಈ ಮುಂಗಾರು ಅಧಿವೇಶನವು ಪ್ರಜಾಪ್ರಭುತ್ವದ ಕಗ್ಗೊಲೆಗೆ ಸಾಕ್ಷಿಯಾಯಿತೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp