ಉದ್ಯಮಿ ಕೊಲೆ ಪ್ರಕರಣ: ಚೆನ್ನರಾಯಪಟ್ಟಣದಲ್ಲಿ ಇಬ್ಬರ ಬಂಧನ

ವ್ಯಕ್ತಿಯನ್ನು ಕೊಲೆ ಮಾಡಿ ಅಕ್ರಮ ಶಸ್ತ್ರಾಸ್ತ್ರಗಳನ್ನು ಹೊಂದಿದ್ದಕ್ಕಾಗಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಇಬ್ಬರು ಜನರನ್ನು ಚನ್ನರಾಯಪಟ್ಟಣ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಹಾಸನ: ವ್ಯಕ್ತಿಯನ್ನು ಕೊಲೆ ಮಾಡಿ ಅಕ್ರಮ ಶಸ್ತ್ರಾಸ್ತ್ರಗಳನ್ನು ಹೊಂದಿದ್ದಕ್ಕಾಗಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಇಬ್ಬರು ಜನರನ್ನು ಚನ್ನರಾಯಪಟ್ಟಣ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ರಾಜಸ್ಥಾನದ ಮನೀಶ್ (32) ಮತ್ತು ಕಿಶನ್ (31) ಎನ್ನುವವರನ್ನು ಪೊಲೀಸರು ಬಂಧಿಸಿ ಅವರಿಂದ ರಿವಾಲ್ವರ್ ಮತ್ತು ಡ್ರ್ಯಾಗನ್ ಚಾಕುವನ್ನು ವಶಪಡಿಸಿಕೊಂಡಿದ್ದಾರೆ.

ಕುತೂಹಲಕಾರಿ ಸಂಗತಿಯೆಂದರೆ, ಸೋಮವಾರ ತಡರಾತ್ರಿ ಮಂಡ್ಯದಲ್ಲಿ ಉದ್ಯಮಿ ಬುಂಡಾರಾಮ್ ಎಂಬ ಉದ್ಯಮಿ ಯನ್ನು ಕ್ರೂರವಾಗಿ ಹತ್ಯೆಗೈದ ನಂತರ ಈ ಜೋಡಿಯು ಮಂಡ್ಯದಿಂದ ಮಂಗಳೂರಿಗೆ ಪ್ರಯಾಣಿಸುತ್ತಿದ್ದಾಗ ಪೋಲೀಸರ ಕೈಗೆ ಸಿಕ್ಕು ಬಿದ್ದಿದ್ದಾರೆ. ಕೊಲೆಗಾರರು ವ್ಯಕ್ತಿಯನ್ನು ಕೊಂದ ನಂತರ ಕೆಎಸ್‌ಆರ್‌ಟಿಸಿ ಬಸ್ ಮೂಲಕ ಮಂಗಳೂರಿಗೆ ತೆರಳುತ್ತಿದ್ದರೆಂದು ಪೋಲೀಸರು ವಿವರಿಸಿದ್ದಾರೆ. ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಸ್ವಲ್ಪ ಸಮಯ ಕಳೆದ ನಂತರ ದುಷ್ಕರ್ಮಿಗಳು ಮಂಗಳೂರಿಗೆ ಬಸ್ ಹತ್ತಿದರು. ಅವರು ರೆಸ್ಟ್ ರೂಂ ಬಳಸಲು ಹೊರಟಾಗ ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಕುಣಿಗಲ್ ಸಮೀಪ ಬಸ್ ಅನ್ನು ತಪ್ಪಿಸಿಕೊಂಡಿದ್ದರು.ಆಗ ಅವರಲ್ಲಿ ಒಬ್ಬ ಚನ್ನರಾಯಪಟ್ಟಣದಲ್ಲಿ ಟ್ರಾಫಿಕ್ ಕಂಟ್ರೋಲರ್‌ಗೆ ಕರೆ ಮಾಡಿ ತಮ್ಮ ಸಾಮಾನುಗಳನ್ನು ಚನ್ನರಾಯಪಟ್ಟಣ ಬಸ್ ನಿಲ್ದಾಣದಲ್ಲಿ ಸಂಗ್ರಹಿಸಲು ಹೇಳಿದ್ದ. ಚೀಲವನ್ನು ಸಂಗ್ರಹಿಸಿದ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಅದರಲ್ಲಿ ರಿವಾಲ್ವರ್ ಮತ್ತು ಚಾಕುವನ್ನು ಕಂಡು ಪೋಲೀಸರಿಗೆ ತಿಳಿಸಿದ್ದಾರೆ.

ಸ್ಥಳಕ್ಕೆ ಬಂದ ಪೋಲೀಸರು ಬ್ಯಾಗನ್ನು ವಶಪಡಿಸಿಕೊಂಡಿದ್ದರು.ಆಗ ತಮ್ಮ ಚೀಲವನ್ನು  ಸಂಗ್ರಹಿಸಲು ಚನ್ನರಾಯಪಟ್ಟಣ ಬಸ್ ನಿಲ್ದಾಣಕ್ಕೆ ಬಂದ ಆರೋಪಿಗಳನ್ನು ಪೋಲೀಸರು ಬಂಧಿಸಿದ್ದಾರೆ. ಚನ್ನರಾಯಪಟ್ಟಣ ಪಟ್ಟಣ ಪೊಲೀಸರು ಇವರಿಬ್ಬರನ್ನು ಪ್ರಶ್ನಿಸುತ್ತಿದ್ದು, ತನಿಖೆ ಮುಂದುವರೆದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com