ಮಂಗಳೂರು: ನಾಳೆ ರಾತ್ರಿ ಮೂರನೇ ರಾಮ-ಲಕ್ಷ್ಮಣ ಕಂಬಳ

ರಾಮಲಕ್ಷ್ಮಣ ಕಂಬಳ ಎಂದೇ ಹೆಸರಾಗಿರುವ ಮೂರನೇ ವಾರ್ಷಿಕ ಮಂಗಳೂರು ಕಂಬಳ ನಗರದ ಬಂಗ್ರ ಕೊಳೊರು ಗೋಲ್ಡ್ ಪಿಂಚ್ ಮೈದಾನದಲ್ಲಿ ಜನವರಿ 25 ರ ರಾತ್ರಿ  ಆಯೋಜಿಸಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮಂಗಳೂರು: ರಾಮಲಕ್ಷ್ಮಣ ಕಂಬಳ ಎಂದೇ ಹೆಸರಾಗಿರುವ ಮೂರನೇ ವಾರ್ಷಿಕ ಮಂಗಳೂರು ಕಂಬಳ ನಗರದ ಬಂಗ್ರ ಕೊಳೊರು ಗೋಲ್ಡ್ ಪಿಂಚ್ ಮೈದಾನದಲ್ಲಿ ಜನವರಿ 25 ರ ರಾತ್ರಿ  ಆಯೋಜಿಸಲಾಗಿದೆ.

ಶನಿವಾರ ರಾತ್ರಿ ರಾಮ-ಲಕ್ಷ್ಮಣ ಕಂಬಳ ನಡೆಯಲಿದೆ ಎಂದು ಮಂಗಳೂರು ಕಂಬಳ ಸಮಿತಿ ಅಧ್ಯಕ್ಷ ಬ್ರಿಜೇಶ್  ಚೌಟಾ ಇಂದು ಪ್ರಕಟಿಸಿದ್ದಾರೆ.

ಆರು ವರ್ಗಗಳಲ್ಲಿ ರಾತ್ರಿ ಪೂರ್ತಿ ಕಂಬಳ ನಡೆಯಲಿದೆ. ಕಾರ್ಯಕ್ರಮವನ್ನು ಜನವರಿ 25ರಂದು ಬೆಳಗ್ಗೆ ಉದ್ಘಾಟಿಸಲಾಗುವುದು, ಮತ್ತೊಂದು ಕಾರ್ಯಕ್ರಮ ಸಂಜೆ 6 ಗಂಟೆಗೆ ನಡೆಯಲಿದೆ ಎಂದರು.

ಕಂಬಳ ಸ್ಪರ್ಧೆಯ ವಿಜೇತರಿಗೆ ಪ್ರಶಸ್ತಿ ಪ್ರಧಾನ ಸಮಾರಂಭ 26 ರಂದು ಬೆಳಗ್ಗೆ 8 ಗಂಟೆಗೆ ಆಯೋಜಿಸಲಾಗಿದೆ.

ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರಗಳ ಖಾತೆ ಸಚಿವ ಡಿ.ವಿ.ಸದಾನಂದಗೌಡ, ಸಂಸದ ನಳಿನ್ ಕುಮಾರ್ ಕಟೀಲ್  ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ, ದಕ್ಷಿಣ ಕನ್ನಡ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಮತ್ತಿತರ ಗಣ್ಯರು  ಭಾಗವಹಿಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com