ಇಂದಿರಾ ಕ್ಯಾಂಟೀನ್ ಗುತ್ತಿಗೆದಾರರ ವಿರುದ್ಧ ಬೆಂಗಳೂರಿನಲ್ಲಿ ಕೇಸು ದಾಖಲು 

ಹಣವನ್ನು ದುರುಪಯೋಗಪಡಿಸಿದ ಆರೋಪದ ಮೇಲೆ ಇಂದಿರಾ ಕ್ಯಾಂಟೀನ್ ಗುತ್ತಿಗೆದಾರರೊಬ್ಬರ ವಿರುದ್ಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ದೂರು ದಾಖಲಿಸಿದ್ದಾರೆ. 
ಇಂದಿರಾ ಕ್ಯಾಂಟೀನ್ ಗುತ್ತಿಗೆದಾರರ ವಿರುದ್ಧ ಬೆಂಗಳೂರಿನಲ್ಲಿ ಕೇಸು ದಾಖಲು 

ಬೆಂಗಳೂರು: ಹಣವನ್ನು ದುರುಪಯೋಗಪಡಿಸಿದ ಆರೋಪದ ಮೇಲೆ ಇಂದಿರಾ ಕ್ಯಾಂಟೀನ್ ಗುತ್ತಿಗೆದಾರರೊಬ್ಬರ ವಿರುದ್ಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ದೂರು ದಾಖಲಿಸಿದ್ದಾರೆ. 


ನಕಲಿ ದಾಖಲೆಗಳನ್ನು ಸೃಷ್ಟಿಸಿ ಗ್ರಾಹಕರು ಬಂದ ಬಗ್ಗೆ ಗುತ್ತಿಗೆದಾರರು ಸುಳ್ಳು ದಾಖಲೆಗಳನ್ನು ನೀಡಿದ್ದಾರೆ. ಒಟ್ಟು 62.72 ಲಕ್ಷ ಜನರು 174 ಇಂದಿರಾ ಕ್ಯಾಂಟಿನ್ ಗಳಲ್ಲಿ ಮತ್ತು 15 ಮೊಬೈಲ್ ಕ್ಯಾಂಟೀನ್ ಗಳಲ್ಲಿ ಆಹಾರ ಸೇವಿಸಿ ಹೋಗಿದ್ದಾರೆ ಎಂದು ಗುತ್ತಿಗೆದಾರರ ದಾಖಲೆಗಳು ಹೇಳುತ್ತದೆ. ಆದರೆ ಇದು ಸತ್ಯಕ್ಕೆ ದೂರವಾದ ಲೆಕ್ಕ. ಸಬ್ಸಿಡಿ ಯೋಜನೆಯಡಿ ಪ್ರತಿ ತಿಂಗಳು 6.88 ಕೋಟಿ ರೂಪಾಯಿ ಸಬ್ಸಿಡಿ ಪಡೆಯಲಾಗಿದೆ ಎಂದು ಸಹ ತಪ್ಪಾಗಿ ತೋರಿಸಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ದೂರಿನಲ್ಲಿ ಹೇಳಿದ್ದಾರೆ.


ಬಿಬಿಎಂಪಿ ಕೇಂದ್ರ ಕಚೇರಿ ಹತ್ತಿರವಿರುವ ಕ್ಯಾಂಟೀನ್ ನಲ್ಲಿ ಪ್ರತಿದಿನ 1,400 ಜನರು ಆಹಾರ ಸೇವಿಸುತ್ತಾರೆ ಎಂದು ಗುತ್ತಿಗೆದಾರರು ತೋರಿಸಿದ್ದಾರೆ. ಆದರೆ ತನಿಖೆ ವೇಳೆ 100 ಜನರು ಬಂದು ಹೋಗಿದ್ದಾರೆ ಎಂದು ಗೊತ್ತಾಗಿದೆ. ಮಂತ್ರಿ ಮಾಲ್ ಹತ್ತಿರವಿರುವ ಕ್ಯಾಂಟೀನ್ ನಲ್ಲಿ ಸಹ ಇದೇ ರೀತಿ ತೋರಿಸಲಾಗಿದೆ ಎಂದು ಹೇಳಲಾಗಿದೆ.


ಗುತ್ತಿಗೆದಾರರು 19 ಅಡುಗೆ ಮನೆಗಳು ನಿರ್ಮಾಣ ಮಾಡಲಾಗಿದೆ ಎಂದು ತೋರಿಸಲಾಗಿದೆ. ಆದರೆ 27 ಕ್ಯಾಂಟೀನ್ ನ ಬಿಲ್ ತೋರಿಸಲಾಗಿದೆ. 198 ಕ್ಯಾಂಟೀನ್ ಗಳಿವೆ ಎಂದು ಹೇಳಲಾಗುತ್ತಿದ್ದರೂ ಇರುವುದು 174 ಕ್ಯಾಂಟೀನ್ ಗಳು ಮಾತ್ರ ಇವೆ ಎಂದು ಪಾಲಿಕೆ ಅಧಿಕಾರಿಗಳು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com