ಇನ್ನು 20 ದಿನಗಳಲ್ಲಿ ಸಿಎಎ ದಾಖಲಾತಿ ಆರಂಭ: ಬಿ ಎಲ್ ಸಂತೋಷ್ 

ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ)ಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಬದ್ಧವಾಗಿದ್ದು ದಾಖಲಾತಿ ಪ್ರಕ್ರಿಯೆ ಮುಂದಿನ 20 ದಿನಗಳಲ್ಲಿ ಆರಂಭವಾಗಲಿದೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ ತಿಳಿಸಿದ್ದಾರೆ.
ಬಿ ಎಲ್ ಸಂತೋಷ್
ಬಿ ಎಲ್ ಸಂತೋಷ್

ಮೈಸೂರು: ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ)ಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಬದ್ಧವಾಗಿದ್ದು ದಾಖಲಾತಿ ಪ್ರಕ್ರಿಯೆ ಮುಂದಿನ 20 ದಿನಗಳಲ್ಲಿ ಆರಂಭವಾಗಲಿದೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ ತಿಳಿಸಿದ್ದಾರೆ.


ಕಾಯ್ದೆ ಬಗ್ಗೆ ದೇಶದ ನಾಗರಿಕರು ಯಾರೂ ಭಯಪಡುವ ಅಗತ್ಯವಿಲ್ಲ ಎಂದು ಹೇಳಿದ ಅವರು ಬಿಜೆಪಿ ಸೇರಿದಂತೆ ಯಾರೂ ಕೂಡ ಅಲ್ಪಸಂಖ್ಯಾತರ ಪೌರತ್ವವನ್ನು ಕಿತ್ತುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.


ಇದೇ ಸಂದರ್ಭದಲ್ಲಿ ಎಡಪಕ್ಷಗಳು ಮತ್ತು ವಿರೋಧ ಪಕ್ಷಗಳ ಮೇಲೆ ಹರಿಹಾಯ್ದ ಬಿ ಎಲ್ ಸಂತೋಷ್, ಸಮಾಜದ ಬುದ್ದಿಜೀವಿಗಳ ಒಂದು ಗುಂಪು ಮತ್ತು ಕೆಲವು ಮುಸ್ಲಿಮರು ದುರುದ್ದೇಶಪೂರಿತ ಮತ್ತು ಚೇಷ್ಠೆಯ ಪ್ರಚಾರ ಮಾಡುತ್ತಿದೆ ಎಂದು ಕಿಡಿಕಾರಿದರು.ದೇಶದ ಮುಸ್ಲಿಮ್ ನಾಗರಿಕರು ಯಾವುದೇ ಕಾರಣಕ್ಕೂ ಭಯಪಡಬೇಕಾದ ಅಗತ್ಯವಿಲ್ಲ ಎಂದು ಪುನರುಚ್ಛರಿಸಿದರು.


ಸಿಎಎ ಭಾರತೀಯ ಮುಸಲ್ಮಾನರಿಗೆ ಅನ್ವಯವಾಗುವುದಿಲ್ಲ ಎನ್ನುವಾಗ ನಾಸಿರುದ್ದೀನ್ ಶಾ, ಸಿಎಂ ಇಬ್ರಾಹಿಂ, ಜಮೀರ್ ಅಹ್ಮದ್ ಮೊದಲಾದವರಲ್ಲಿ ದಾಖಲೆ ಕೊಡಿ ಎಂದು ಯಾರು ಕೇಳಿದ್ದಾರೆ ಎಂದು ಸಂತೋಷ್ ಪ್ರಶ್ನೆ ಮಾಡಿದರು.


ನಮಗೆ ಪ್ರತಿಭಟನೆ ಬಗ್ಗೆ ಆತಂಕವಿಲ್ಲ. ಮುಸಲ್ಮಾನರು, ಬುದ್ಧಿಜೀವಿಗಳು, ಅಲ್ಟ್ರಾ ಎಡಪಂಥೀಯರು ಬೀದಿಗಿಳಿದು ಸುಳ್ಳು ಪ್ರಚಾರದಲ್ಲಿ ತೊಡಗಿದ್ದು ಜನರಿಂದ ಆಧಾರ್ ಕಾರ್ಡ್ ನಂತಹ ಸೌಲಭ್ಯಗಳನ್ನು ಹಿಂತೆಗೆದುಕೊಳ್ಳಲಾಗಿದೆ. ದೇಶಾದ್ಯಂತ ಇರುವ ಮುಸ್ಲಿಂ ಧರ್ಮಬೋಧಕರಲ್ಲಿ ಮಾತನಾಡಿ ಅವರಲ್ಲಿ ಅರಿವು ಮೂಡಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. ಸಿಎಎ ಅಡಿ ದಾಖಲಾತಿ ಆರಂಭಗೊಂಡರೆ ದೇಶದಲ್ಲಿರುವ ನಿರಾಶ್ರಿತರು ಯಾರು ಎಂದು ನಮಗೆ ಸರಿಯಾಗಿ ಗೊತ್ತಾಗಲಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com