'ಜೊತೆಯಾಗಿ' ಇದು ಬೆಂಗಳೂರಿನ ಸ್ವಚ್ಛತೆಗೆ ಬಿಬಿಎಂಪಿಯ ಧ್ಯೇಯಗೀತೆ 

ನಗರದ ಸ್ವಚ್ಛತೆ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸ್ವಚ್ಛತೆಯ ಧ್ಯೇಯ ಗೀತೆಯನ್ನು ಆರಂಭಿಸಿದ್ದು ಖ್ಯಾತ ಗಾಯಕ ಲಕ್ಕಿ ಅಲಿ ಕಂಠದಲ್ಲಿ ಮೂಡಿಬಂದಿದೆ.
'ಜೊತೆಯಾಗಿ' ಇದು ಬೆಂಗಳೂರಿನ ಸ್ವಚ್ಛತೆಗೆ ಬಿಬಿಎಂಪಿಯ ಧ್ಯೇಯಗೀತೆ 

ಬೆಂಗಳೂರು:ನಗರದ ಸ್ವಚ್ಛತೆ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸ್ವಚ್ಛತೆಯ ಧ್ಯೇಯ ಗೀತೆಯನ್ನು ಆರಂಭಿಸಿದ್ದು ಖ್ಯಾತ ಗಾಯಕ ಲಕ್ಕಿ ಅಲಿ ಕಂಠದಲ್ಲಿ ಮೂಡಿಬಂದಿದೆ.


3 ನಿಮಿಷ 17 ಸೆಕೆಂಡ್ ಗಳ ವಿಡಿಯೊವನ್ನು ನಗರದ ವಿವಿಧ ಕಡೆಗಳಲ್ಲಿ ಚಿತ್ರೀಕರಿಸಲಾಗಿದ್ದು ಪ್ರಮುಖ ಗಾಯಕರು, ನಟರು ಮತ್ತು ಸಾಮಾನ್ಯ ನಾಗರಿಕರು ಇದರಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಮಿಶ್ರವಾಗಿ ಹಾಡು ಹಾಡಲಾಗಿದ್ದು ಹೈಕೋರ್ಟ್, ಕೆ ಆರ್ ಮಾರ್ಕೆಟ್, ಹೆಬ್ಬಾಳ ಫ್ಲೈಓವರ್, ಮೆಜೆಸ್ಟಿಕ್ ಬಸ್ ನಿಲ್ದಾಣ ಮತ್ತು ಟೌನ್ ಹಾಲ್ ಗಳಲ್ಲಿ ಚಿತ್ರೀಕರಿಸಲಾಗಿದೆ. ಬಿಬಿಎಂಪಿ ಕೇಂದ್ರ ಕಚೇರಿ ಮಾತ್ರ ವಿಡಿಯೊದಲ್ಲಿ ಇಲ್ಲ.


ನಾನು 50 ವರ್ಷಗಳಿಂದ ಬೆಂಗಳೂರಿನಲ್ಲಿದ್ದೇನೆ. ಇಷ್ಟು ವರ್ಷಗಳಲ್ಲಿ ನಗರದಲ್ಲಿ ಹಲವು ಬದಲಾವಣೆಗಳಾಗಿವೆ. ಬೆಳೆಯುತ್ತಿರುವ ಬೆಂಗಳೂರು ನಗರವನ್ನು ಸ್ವಚ್ಛವಾಗಿ, ಆರೋಗ್ಯವಾಗಿಡುವುದು ಇಲ್ಲಿನ ನಾಗರಿಕರಾಗಿ ನಮ್ಮ ಕರ್ತವ್ಯ. ಜೈವಿಕ ಗೊಬ್ಬರ ಮತ್ತು ತ್ಯಾಜ್ಯಗಳ ಸರಿಯಾದ ಬೇರ್ಪಡಿಸುವಿಕೆಯನ್ನು ಮಾಡಬೇಕು ಎನ್ನುತ್ತಾರೆ ಲಕ್ಕಿ ಅಲಿ.


ಬಿಬಿಎಂಪಿಯ ಧ್ಯೇಯ ಗೀತೆ ಬಗ್ಗೆ ಆಯುಕ್ತ ಬಿ ಎಚ್ ಅನಿಲ್ ಕುಮಾರ್ ಮಾತನಾಡಿ, ನಗರದ ಸ್ವಚ್ಛ ಸರ್ವೇಕ್ಷಣ ರ್ಯಾಂಕಿಂಗ್ ನಲ್ಲಿ ಸುಧಾರಣೆ ತರುವ ಅಗತ್ಯವಿದೆ. ಕಳೆದ ಎರಡು ತಿಂಗಳಲ್ಲಿ ನಾವು ಸುಮಾರು 250 ಕಪ್ಪು ಗುರುತುಗಳನ್ನು ಸ್ವಚ್ಛಗೊಳಿಸಿದ್ದೇವೆ. ವಿಶೇಷ ಹಾಕಿಂಗ್ಸ್ ಮತ್ತು ವೆಂಡಿಂಗ್ ವಲಯಗಳನ್ನು ಸೃಷ್ಟಿಸಿ ಅನಧಿಕೃತ ವ್ಯಾಪಾರಿಗಳನ್ನು ಪಾದಚಾರಿ ಮಾರ್ಗದಿಂದ ತೆರವುಗೊಳಿಸಿದ್ದೇವೆ. ಮಾರುಕಟ್ಟೆ ಮತ್ತು ಬಸ್ ನಿಲ್ದಾಣಗಳಲ್ಲಿ ವಲಯಗಳನ್ನು ಸೃಷ್ಟಿಸಲಾಗಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com