ನಿತ್ಯಾನಂದಗೆ ಜಾಮೀನು ಅರ್ಜಿ: ಸಿಐಡಿಗೆ ನೊಟೀಸ್

ಸ್ವಯಂ ಘೋಷಿತ ದೇವಮಾನವ ಸ್ವಾಮಿ ನಿತ್ಯಾನಂದನ ಜಾಮೀನು ಅರ್ಜಿ ರದ್ದುಪಡಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನ ಹೈಕೋರ್ಟ್​ ಎರಡು ವಾರಗಳ ಕಾಲ ಮುಂದೂಡಿದೆ.
ಕರ್ನಾಟಕ ಹೈಕೋರ್ಟ್
ಕರ್ನಾಟಕ ಹೈಕೋರ್ಟ್

ಬೆಂಗಳೂರು: ಸ್ವಯಂ ಘೋಷಿತ ದೇವಮಾನವ ಸ್ವಾಮಿ ನಿತ್ಯಾನಂದನ ಜಾಮೀನು ಅರ್ಜಿ ರದ್ದುಪಡಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನ ಹೈಕೋರ್ಟ್​ ಎರಡು ವಾರಗಳ ಕಾಲ ಮುಂದೂಡಿದೆ.

ದೂರುದಾರ ಲೇನಿನ್​ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯದ ಏಕಸದಸ್ಯ ಪೀಠ, ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಬಗ್ಗೆ ಉತ್ತರ ನೀಡುವಂತೆ ನಿತ್ಯಾನಂದ ಹಾಗೂ ಸಿಐಡಿ ಅಧಿಕಾರಿಗಳಿಗೆ ನೋಟಿಸ್​​ ನೀಡಿದೆ.

ಪ್ರಕರಣ ಕುರಿತು ಕೋರ್ಟ್​​ನಲ್ಲಿ ವಾದ ಮಾಡಿದ ಲೇನಿನ್ ಪರ ವಕೀಲರು, ನಿತ್ಯಾನಂದನ ಮೇಲೆ ಜಾಮೀನು ಷರತ್ತುಗಳನ್ನ ಉಲ್ಲಂಘಿಸಿರುವ ಆರೋಪವಿದ್ದು, ಕೋರ್ಟ್​ ವಿಚಾರಣೆಗೂ ಕೂಡ ಸರಿಯಾಗಿ ಹಾಜರಾಗುತ್ತಿಲ್ಲ. 

ಅಲ್ಲದೇ ಅವಧಿ ಮುಗಿದ ಪಾಸ್​​ಪೋರ್ಟ್​ ಹಿಡಿದುಕೊಂಡು, ದೇಶದಿಂದ ಪರಾರಿಯಾಗಿದ್ದಾನೆಂಬ ಆರೋಪವೂ ಇದೆ. ಹೀಗಿರುವಾಗ ಭಾರತದಲ್ಲಿರುವಂತೆ ವಿನಾಯಿತಿ ಅರ್ಜಿ ಬೇರೆ ಸಲ್ಲಿಸಿದ್ದಾನೆ. ನಿತ್ಯಾನಂದನ ನಡೆ ಕಾನೂನಿಗೆ ವಿರೋಧವಿದ್ದು, ಆತನ ಜಾಮೀನು ಅರ್ಜಿ ರದ್ದುಪಡಿಸಬೇಕೆಂದು, ಲೇನಿನ್​ ಪರ ವಕೀಲರು ವಾದ ಮಂಡಿಸಿದ್ರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com