ಬೆಂಗಳೂರು: ಸತತ 43 ಗಂಟೆಗಳ ನಂತರ ಶಾಹೀನ್ ಬಾಗ್ ರೀತಿಯ ಪ್ರತಿಭಟನೆ ರದ್ದುಪಡಿಸಿದ ಮಹಿಳೆಯರು

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನವದೆಹಲಿಯ ಶಾಹೀನ್ ಬಾಗ್ ರೀತಿಯಲ್ಲಿ ನಗರದ ಪ್ರೆಜರ್ ಟೌನ್ ಮಸೀದಿ ಬಳಿ ಸುಮಾರು 300ಕ್ಕೂ ಹೆಚ್ಚು  ಮಹಿಳೆಯರು  ನಡೆಸುತ್ತಿದ್ದ ಪ್ರತಿಭಟನೆಯನ್ನು 43 ಗಂಟೆಗಳ ಬಳಿಕ ಇಂದು ರದ್ದುಗೊಳಿಸಲಾಗಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನವದೆಹಲಿಯ ಶಾಹೀನ್ ಬಾಗ್ ರೀತಿಯಲ್ಲಿ ನಗರದ ಪ್ರೆಜರ್ ಟೌನ್ ಮಸೀದಿ ಬಳಿ ಸುಮಾರು 300ಕ್ಕೂ ಹೆಚ್ಚು  ಮಹಿಳೆಯರು  ನಡೆಸುತ್ತಿದ್ದ ಪ್ರತಿಭಟನೆಯನ್ನು 43 ಗಂಟೆಗಳ ಬಳಿಕ ಇಂದು ರದ್ದುಗೊಳಿಸಲಾಗಿದೆ. 

ಪುಲಿಕೇಶಿನಗರದ ಸ್ಥಳೀಯರು ಹಾಗೂ ವಿವಿಧ ಸಂಘಟನೆಗಳ ಮಹಿಳೆಯರು 24 ಗಂಟೆಗಳ ಪ್ರತಿಭಟನೆಯನ್ನು ಆರಂಭಿಸಿದಾದರೂ ಅದನ್ನು 43 ಗಂಟೆಗಳ ಕಾಲ ಮುಂದುವರೆಸಲಾಗಿತ್ತು. 

24 ಗಂಟೆಗಿಂತಲೂ ಹೆಚ್ಚು ಕಾಲ ಪ್ರತಿಭಟನೆ ಮುಂದುವರೆಸಲು ನಿರ್ಧರಿಸಲಾಗಿತ್ತು. ಆದರೆ, ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ 43 ಗಂಟೆಗಳ ಬಳಿಕ ಪ್ರತಿಭಟನೆಯನ್ನು ರದ್ದುಗೊಳಿಸಲಾಗಿದೆ. ಇದೊಂದು ಮಹತ್ವದ ಯಶಸ್ಸು ಆಗಿದೆ. ಇನ್ನಿತರ ಪ್ರತಿಭಟನೆಗಳಿಗೆ ಇತರ ಸಂಘಟನೆಗಳನ್ನು ಬೆಂಬಲಿಸುವುದಾಗಿ ಸಂಘಟಕಿ ಡಾ. ಅಸಿಫಾ ನಿಸಾರ್ ಹೇಳಿದರು.
 
ಪೌರತ್ವ ತಿದ್ದುಪಡಿ ಕಾಯ್ದೆ ಮುಸ್ಲಿಂ ವಿರೋಧಿ ಮಾತ್ರವಲ್ಲ, ದಲಿತರು, ಅಲ್ಪಸಂಖ್ಯಾತರು ಹಾಗೂ ಎಲ್ಲಾ ಮಹಿಳೆಯರ ವಿರೋಧಿಯಾಗಿದೆ. ಇದು ಕೇವಲ ಒಂದು ಪಕ್ಷ ಅಥವಾ ಸಂವಿಧಾನದ ವಿಚಾರವಲ್ಲ, ದೇಶದ ಪ್ರತಿಯೊಬ್ಬರಿಗೂ ಸಂಬಂಧಿಸಿದ್ದಾಗಿದೆ. ಪೌರತ್ವವನ್ನು ನಮ್ಮಿಂದ ಯಾರೂ ಕಸಿದುಕೊಳ್ಳಲು ನಾವು ಬಿಡುವುದಿಲ್ಲ ಎಂದರು. 

ಸಿಎಎ, ಎನ್ ಆರ್ ಸಿ ಹಾಗೂ ಎನ್ ಸಿಆರ್ ಸಂವಿಧಾನ ವಿರೋಧಿಯಾಗಿವೆ ಎಂದು ಮತ್ತೋರ್ವ ಮಹಿಳಾ ಹಕ್ಕುಗಳ ಪರ ಹೋರಾಟಗಾರ್ತಿ ಮಧು ಭೂಷಣ್ ತಿಳಿಸಿದರು. 

24 ಗಂಟೆಗಳ ಪ್ರತಿಭಟನೆಗೆ ಅನುಮತಿ ನೀಡಲಾಗಿತ್ತು. ಆದಾಗ್ಯೂ, ಇದಕ್ಕಿಂತಲೂ ಹೆಚ್ಚಿನ ಅವಧಿಯನ್ನು ಪ್ರತಿಭಟನೆಯನ್ನು ಮುಂದುವರೆಸಿದ್ದು, ಅವರಿಗೆ ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸಿರುವುದಾಗಿ ಪುಲಿಕೇಶಿನಗರ ಪೊಲೀಸ್ ಅಧಿಕಾರಿಗಳು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com