71ನೇ ಗಣರಾಜ್ಯೋತ್ಸವ: ಸಂವಿಧಾನ ರಚನೆಯಲ್ಲಿ ಕೈ ಜೋಡಿಸಿದ್ದ ಕರ್ನಾಟಕದ ಹೆಮ್ಮೆಯ ಪುತ್ರರಿವರು!

ದೇಶ 71ನೇ ಗಣರಾಜ್ಯೋತ್ಸವವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಪ್ರಜಾಪ್ರಭುತ್ವದ ಪವಿತ್ರ ಗ್ರಂಥ ಸಂವಿಧಾನದ ಬಗ್ಗೆ ತಿಳಿದುಕೊಳ್ಳುವ ಹಂಬಲ, ಕುತೂಹಲ ದೇಶದ ನಾಗರಿಕರಿಗೆ ಇರುತ್ತದೆ.
71ನೇ ಗಣರಾಜ್ಯೋತ್ಸವ: ಸಂವಿಧಾನ ರಚನೆಯಲ್ಲಿ ಕೈ ಜೋಡಿಸಿದ್ದ ಕರ್ನಾಟಕದ ಹೆಮ್ಮೆಯ ಪುತ್ರರಿವರು!

ಬೆಂಗಳೂರು: ದೇಶ 71ನೇ ಗಣರಾಜ್ಯೋತ್ಸವವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಪ್ರಜಾಪ್ರಭುತ್ವದ ಪವಿತ್ರ ಗ್ರಂಥ ಸಂವಿಧಾನದ ಬಗ್ಗೆ ತಿಳಿದುಕೊಳ್ಳುವ ಹಂಬಲ, ಕುತೂಹಲ ದೇಶದ ನಾಗರಿಕರಿಗೆ ಇರುತ್ತದೆ.


ಸಂವಿಧಾನದ ಮೂಲ ಕರ್ತೃ ಡಾ ಬಿ ಆರ್ ಅಂಬೇಡ್ಕರ್ ಆಗಿದ್ದರೆ ಅದಕ್ಕೆ ಸ್ಪಷ್ಟ ರೂಪ ನೀಡುವಲ್ಲಿ ಕರ್ನಾಟಕದ ಹಲವು ಗಣ್ಯರು ಕೈಜೋಡಿಸಿದ್ದರು ಎಂಬ ವಿಷಯ ನಿಮಗೆ ಗೊತ್ತಿದೆಯೇ?


ಬೆನೆಗಲ್ ನರಸಿಂಗ್ ರಾವ್: ವಿಧಾನದ ಸಲಹೆಗಾರರಾಗಿ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆನೆಗಲ್ ನರಸಿಂಗ್ ರಾವ್(ಬಿ ಎನ್ ರಾವ್) ಅವರ ಕೊಡುಗೆಯಿದೆ ಎಂಬುದು ಬಹುತೇಕ ಮಂದಿಗೆ ಗೊತ್ತಿರಲಿಕ್ಕಿಲ್ಲ. ಸಂವಿಧಾನವನ್ನು ರಚಿಸಲು ಸಂವಿಧಾನ ಸಭೆ ಸಚಿವಾಲಯ(ಸಿಎಎಸ್) ತಂಡದ ನೇತೃತ್ವವನ್ನು ನರಸಿಂಗ್ ರೌ ವಹಿಸಿಕೊಂಡಿದ್ದರು. ಇನ್ನು ಇತಿಹಾಸನ ನಿವೃತ್ತ ಪ್ರೊಫೆಸರ್ ರಾಮಚಂದ್ರ ಎನ್ ಆರ್ ಅವರು ಹೇಳುವಂತೆ ಹಲವು ವಿದ್ಯಾರ್ಥಿಗಳ ನರಸಿಂಗ್ ರಾವ್ ಅವರು ಸಂವಿಧಾನ ರಚನೆಯಲ್ಲಿ ವಹಿಸಿದ ಪಾತ್ರದ ಬಗ್ಗೆ ಗೊತ್ತೇ ಇಲ್ಲವಂತೆ! ಸ್ವತಃ ಡಾ ಅಂಬೇಡ್ಕರ್ ಅವರೇ ನರಸಿಂಗ್ ರಾವ್ ಅವರನ್ನು ಹೊಗಳಿದ್ದರಂತೆ. ನಮ್ಮ ಯುವ ಜನತೆ ಈ ಬಗ್ಗೆ ತಿಳಿದುಕೊಳ್ಳಬೇಕು ಎನ್ನುತ್ತಾರೆ ರಾಮಚಂದ್ರ ಎನ್ ಆರ್.


ಸಂವಿಧಾನದ ರಚನೆಯಲ್ಲಿ ಪಾತ್ರ ವಹಿಸಿದ ಕರ್ನಾಟಕದ ಮತ್ತೊಬ್ಬ ವ್ಯಕ್ತಿ ಮಾಧವ್ ರಾವ್. ಮೈಸೂರಿನ ಮಹಾರಾಜ ಒಡೆಯರ್ ಗೆ ಕಾನೂನು ಸಲಹೆಗಾರರಾಗಿದ್ದವರು. ಬಿ ಎಲ್ ಮಿತ್ತರ್ ಸ್ಥಾನಕ್ಕೆ ಬಂದವರು ಮಾಧವ್ ರಾವ್ ಎನ್ನುತ್ತಾರೆ ಖ್ಯಾತ ಹೃದ್ರೋಗ ತಜ್ಞ ಮತ್ತು ಓದುಗ ಮೈಸೂರಿನ ಡಾ ಸಿ ಡಿ ಶ್ರೀನಿವಾಸ ಮೂರ್ತಿ.


ಕರ್ನಾಟಕ ಜನತೆ ಈ ಬಗ್ಗೆ ಸಾಕಷ್ಟು ವಿಷಯಗಳನ್ನು ಕೇಳಿರಬಹುದು, ಅಥವಾ ಓದಿರಬಹುದು. ನನಗೆ ಆಗ ಏಳು ವರ್ಷ ವಯಸ್ಸು. ಅಂದು ಮನೆಯಲ್ಲಿ ಕನ್ನಡ ಸುದ್ದಿಪತ್ರಿಕೆ ಓದುತ್ತಿದ್ದೆ. ಸಂವಿಧಾನದ ವಿಷಯ ಬಂದಿತ್ತು. ಅದನ್ನು ಹೇಗೆ ರಚಿಸಿದರು, ಅದರ ಹಿಂದೆ ಯಾರ್ಯಾರು ಕೆಲಸ ಮಾಡಿದ್ದಾರೆ ಎಂದು ಬರೆಯಲಾಗಿತ್ತು. ಅಂಬೇಡ್ಕರ್ ಬಗ್ಗೆ ಸಾಕಷ್ಟು ಬರುತ್ತಿತ್ತು,ನನಗೆ ಓದಿ ತಿಳಿದುಕೊಳ್ಳುವ ಕುತೂಹಲವಿತ್ತು ಎನ್ನುತ್ತಾರೆ 76 ವರ್ಷದ ಶ್ರೀನಿವಾಸ ಮೂರ್ತಿ.


ಕೆಂಗಲ್ ಹನುಮಂತಯ್ಯ: ಸಂವಿಧಾನ ಸಭೆ ಸಚಿವಾಲಯದ ಮೊದಲ ಸದಸ್ಯ ಕೆಂಗಲ್ ಹನುಮಂತಯ್ಯ ಆಗಿದ್ದರು. ಇವರು 1908ರ ಫೆಬ್ರವರಿ 10ರಂದು ಬೆಂಗಳೂರಿನಲ್ಲಿ ಜನಿಸಿ ಮೈಸೂರು ಮಹಾರಾಜ ಕಾಲೇಜಿನಲ್ಲಿ  ಬಿ ಎ ಪದವಿ ಪಡೆದು ಪೂನ ಲಾ ಕಾಲೇಜಿನಲ್ಲಿ ಓದಿದರು. 


ಸಂವಿಧಾನ ರಚನೆ ಸಮಿತಿಯೊಳಗೆ ಕೆಂಗಲ್ ಹನುಮಂತಯ್ಯ ಅವರು ಫೆಡರಲಿಸಂ ಮತ್ತು ರಾಜ್ಯಗಳಿಗೆ ಹೆಚ್ಚಿನ ಸ್ವಾಯತ್ತತೆಗಾಗಿ ಪ್ರತಿಪಾದಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com