ಠೇವಣಿದಾರರು ಗೊಂದಲಕ್ಕೆ ಒಳಗಾಗಬೇಕಿಲ್ಲ: ಜನತಾ ಸೇವಾ ಕೋ-ಆಪರೇಟಿವ್‌ ಬ್ಯಾಂಕ್‌ ಆಡಳಿತ ಮಂಡಳಿ

ಬ್ಯಾಂಕಿನ ವಿರುದ್ದ ದ್ವೇಷ ಹಾಗೂ ತೇಜೋವಧೆ ಮಾಡುವ ಉದ್ದೇಶದಿಂದ ಸತ್ಯಕ್ಕೆ ದೂರವಾಗಿರುವ ಆರೋಪಗಳನ್ನು ಮಾಡಲಾಗುತ್ತಿದ್ದು, ಠೇವಣಿದಾರರು ಯಾವುದೇ ಗೊಂದಲಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ ಎಂದು ಜನತಾ ಸೇವಾ ಕೋ ಆಪರೇಟಿವ್‌ ಬ್ಯಾಂಕಿನ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.

Published: 26th January 2020 09:19 AM  |   Last Updated: 26th January 2020 09:19 AM   |  A+A-


Janata Seva Co-operative Bank

ಜನತಾ ಸೇವಾ ಕೋ-ಆಪರೇಟಿವ್‌ ಬ್ಯಾಂಕ್‌ ಸುದ್ದಿಗೋಷ್ಠಿ

Posted By : Srinivasamurthy VN
Source : UNI

ಬೆಂಗಳೂರು: ಬ್ಯಾಂಕಿನ ವಿರುದ್ದ ದ್ವೇಷ ಹಾಗೂ ತೇಜೋವಧೆ ಮಾಡುವ ಉದ್ದೇಶದಿಂದ ಸತ್ಯಕ್ಕೆ ದೂರವಾಗಿರುವ ಆರೋಪಗಳನ್ನು ಮಾಡಲಾಗುತ್ತಿದ್ದು, ಠೇವಣಿದಾರರು ಯಾವುದೇ ಗೊಂದಲಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ ಎಂದು ಜನತಾ ಸೇವಾ ಕೋ ಆಪರೇಟಿವ್‌ ಬ್ಯಾಂಕಿನ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬ್ಯಾಂಕಿನ ಅಧ್ಯಕ್ಷ ರಾಮು, ಬ್ಯಾಂಕಿನಲ್ಲಿ ಬಹುಕೋಟಿ ಬೇನಾಮಿ ಸಾಲಗಳನ್ನು ಬ್ಯಾಂಕಿನ ಅಧ್ಯಕ್ಷರು ಮತ್ತು ನಿರ್ದೇಶಕ ಮಂಡಳಿಯವರು 2015 ರಿಂದ 2018 ರ ಅವಧಿಯಲ್ಲಿ ನೀಡಿದ್ದಾರೆ. ಮೆ. ತಿರುಮಲ ಕನ್ಸ್ಟ್ರಕ್ಷನ್‌ ಮತ್ತು ಇತರೆ ಸಂಸ್ಥೆಗಳಿಗೆ 42 ಕೋಟಿ ರೂ ಸಾಲವನ್ನು ಬೇನಾಮಿಯಾಗಿ ಮಂಜೂರು ಮಾಡಿರುವುದಾಗಿ ಕುಮಾರ್‌ ಆರ್‌ ಎಂಬುವರು ಇದೇ 24 ರಂದು ಅಡಿಷನಲ್‌ ಚೀಪ್‌ ಮೆಟ್ರೋಪಾಲಿಟನ್‌ ಮ್ಯಾಜಿಸ್ಟ್ರೇಟ್‌ನಲ್ಲಿ ದಾವೆಯನ್ನು ದಾಖಲಿಸಿದ್ದು, ಬ್ಯಾಂಕಿನ ವಿರುದ್ದ ಆರೋಪ ಮಾಡಿರುತ್ತಾರೆ. ಇವೆಲ್ಲವೂ ಸತ್ಯಕ್ಕೆ ದೂರವಾಗಿವೆ ಎಂದರು.

ಕುಮಾರ್‌ ಆರ್‌ ಮತ್ತು ಪತ್ನಿ ಡಾ. ಮಂಜುಳ ಕುಮಾರ್‌ ಅವರು ತಮ್ಮ ಹೆಸರಿನಲ್ಲಿರುವ ಸ್ಥಿರಾಸ್ತಿಗಳನ್ನು ಆಧಾರವಾಗಿ ಮೆ.ವಿ.ಎನ್‌. ಕನ್ಸ್ಟ್ರಕ್ಷನ್‌ ಸಂಸ್ಥೆಯವರು ಸಾಲವಾಗಿ ಪಡೆದಿದ್ದು, ಅವರು ಸಾಲವನ್ನು ಮರುಪಾವತಿಸದೆ ಸುಸ್ತಿದಾರರಾದ ಕಾರಣ ಅವರ ವಿರುದ್ದ ಕಾನೂನು ಕ್ರಮಗಳನ್ನು ಕೈಗೊಳ್ಳುವ ಸಲುವಾಗಿ ಇದೇ ತಿಂಗಳ 14 ರಂದು ಸ್ವಾಧೀನ ನೋಟಿಸನ್ನು ನೀಡಲಾಗಿತ್ತು. ಬ್ಯಾಂಕಿನ ಈ ಕ್ರಮದ ವಿರುದ್ದ‍್ಧ ದ್ವೇಷದಿಂದ ಹಾಗೂ ಬ್ಯಾಂಕಿನ ತೇಜೋವಧೆ ಮಾಡುವ ಉದ್ದೇಶದಿಂದ ಬ್ಯಾಂಕಿನ ವಿರುದ್ದ ಆರೋಪಗಳನ್ನು ಅವರು ಮಾಡಿದ್ದಾರೆ ಎಂದು ಹೇಳಿದರು.

ಕುಮಾರ್‌ ಆರ್‌ ಮತ್ತು ಪತ್ನಿ ಡಾ. ಮಂಜುಳ ಕುಮಾರ್‌ ತಮ್ಮ ಹೆಸರಿನಲ್ಲಿರುವ ಸ್ಥಿರಾಸ್ತಿಗಳನ್ನು ಆಧಾರವಾಗಿ ಮೆ.ವಿ.ಎನ್‌. ಕನ್ಸ್ಟ್ರಕ್ಷನ್‌ ಸಂಸ್ಥೆಯವರು ಸಾಲವಾಗಿ ಪಡೆದಿದ್ದು, ಅವರು ಸಾಲವನ್ನು ಮರುಪಾವತಿಸದೆ ಸುಸ್ತಿದಾರರಾದ ಕಾರಣ ಅವರ ವಿರುದ್ದ ಕಾನೂನು ಕ್ರಮಗಳನ್ನು ಕೈಗೊಳ್ಳುವ ಸಲುವಾಗಿ 14-01-2020 ರಲ್ಲಿ ಸ್ವಾಧೀನ ನೋಟಿಸನ್ನು ನೀಡಲಾಗಿ ದಿನಪತ್ರಿಕೆಗಳಲ್ಲೂ ಪ್ರಕಟಣೆ ನೀಡಿರುತ್ತೇವೆ. ಬ್ಯಾಂಕಿನ ಈ ಕ್ರಮದ ವಿರುದ್ದ‍್ಧ ದ್ವೇಷದಿಂದ ಹಾಗೂ ಬ್ಯಾಂಕಿನ ತೇಜೋವಧೆ ಮಾಡುವ ಉದ್ದೇಶದಿಂದ ಬ್ಯಾಂಕಿನ ವಿರುದ್ದ ಆರೋಪಗಳನ್ನು ಮಾಡಿದ್ದಾರೆ ಎಂದು ಹೇಳಿದರು. 

1969 ರಿಂದ ಕಾರ್ಯನಿರ್ವಹಿಸುತ್ತಿರುವ ಈ ಬ್ಯಾಂಕ್‌ ರಾಜ್ಯದಲ್ಲಿ ಅತ್ಯಂತ ಕಾರ್ಯಕ್ಷಮತೆಯಿಂದ ಕಾರ್ಯನಿರ್ವಹಿಸುತ್ತಿರುವ 10 ಬ್ಯಾಂಕುಗಳಲ್ಲಿ 6 ನೇ ಸ್ಥಾನವನ್ನು ಹೊಂದಿದೆ. 16000 ಸಾವಿರ ಜನ ಸದಸ್ಯರಿದ್ದು, ಸದಸ್ಯರ ಹಿತಾಸಕ್ತಿಯನ್ನು ಕಾಪಾಡುವ ಹಿನ್ನಲೆಯಲ್ಲಿ ಬ್ಯಾಂಕಿನಲ್ಲಿ ಅತ್ಯಂತ ಕಾನೂನು ಬದ್ದವಾದ ಕ್ರಮಗಳನ್ನು ಅನುಸರಿಸಲಾಗುತ್ತದೆ. ಬ್ಯಾಂಕು ಇಷ್ಟು ವೇಗವಾಗಿ ಬೆಳೆಯಲು ಹಾಗೂ ಸುಮಾರು 1300 ಕೋಟಿ ರೂಪಾಯಿಗಳಷ್ಟು ಠೇವಣಿ ಹೊಂದಲು ಕಾರಣ ಬ್ಯಾಂಕಿನ ಸದಸ್ಯರಾಗಿದ್ದಾರೆ. ಈ ಹಿನ್ನಲೆಯಲ್ಲಿ ಬ್ಯಾಂಕಿನ ಯಾವುದೇ ಠೇವಣಿದಾರರು ಆತಂಕಕ್ಕೆ ಒಳಗಾಗದೆ ಇರುವಂತೆ ಮನವಿ ಮಾಡಿದರು.

Stay up to date on all the latest ರಾಜ್ಯ news
Poll
RBI

ಕಾರ್ಪೊರೇಟ್‌ ಕಂಪನಿಗಳಿಗೆ ಬ್ಯಾಂಕ್‌ ಆರಂಭಿಸಲು ಅನುಮತಿಸುವಂತೆ ಕೇಂದ್ರ ಸರ್ಕಾರಕ್ಕೆ ಆರ್ ಬಿಐ ನೀಡಿರುವ ಸಲಹೆಯನ್ನು ಸ್ವಾಗತಿಸುತ್ತೀರಾ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp