ಗಣತಂತ್ರಕ್ಕೆ ಬಂದ ಬಾಲಗಾಂಧಿಗೆ ಶಿಕ್ಷಣ ಸಚಿವರು ಫಿದಾ. 

ನಗರದಲ್ಲಿ ನಡೆದ 71ನೇ ಗಣರಾಜ್ಯೋತ್ಸವದಲ್ಲಿ ಗಾಂಧಿ ವೇಷ ಧರಿಸಿದ್ದ ಬಾಲಕನನ್ನು ಕಂಡು ಶಿಕ್ಷಣ ಸಚಿವರೇ ಫಿದಾ ಆಗಿದ್ದರು. ಬಾಲಕನಿಗೆ ಶಿಕ್ಷಣ ಸಚಿವ ಎಸ್‌. ಸುರೇಶಕುಮಾರ್ 10 ಕ್ಕೂ ಹೆಚ್ಚು ಗಾಂಧೀಜಿ ಕುರಿತ ಪ್ರಶ್ನೆಗಳನ್ನು ಕೇಳಿದರು. ಸಚಿವರಿಂದ ತೂರಿಬರುತ್ತಿದ್ದ ಪ್ರಶ್ನೆಗಳ ಸುರಿಮಳೆಗೆ ಬಾಲಕ ಉತ್ತರಿಸಿ ಸೈ ಎನಿಸಿಕೊಂಡಿದ್ದಾನೆ.
ಗಣತಂತ್ರಕ್ಕೆ ಬಂದ ಬಾಲಗಾಂಧಿಗೆ ಶಿಕ್ಷಣ ಸಚಿವರು ಫಿದಾ.
ಗಣತಂತ್ರಕ್ಕೆ ಬಂದ ಬಾಲಗಾಂಧಿಗೆ ಶಿಕ್ಷಣ ಸಚಿವರು ಫಿದಾ.

ಚಾಮರಾಜನಗರ: ನಗರದಲ್ಲಿ ನಡೆದ 71ನೇ ಗಣರಾಜ್ಯೋತ್ಸವದಲ್ಲಿ ಗಾಂಧಿ ವೇಷ ಧರಿಸಿದ್ದ ಬಾಲಕನನ್ನು ಕಂಡು ಶಿಕ್ಷಣ ಸಚಿವರೇ ಫಿದಾ ಆಗಿದ್ದರು. ಬಾಲಕನಿಗೆ ಶಿಕ್ಷಣ ಸಚಿವ ಎಸ್‌. ಸುರೇಶಕುಮಾರ್ 10 ಕ್ಕೂ ಹೆಚ್ಚು ಗಾಂಧೀಜಿ ಕುರಿತ ಪ್ರಶ್ನೆಗಳನ್ನು ಕೇಳಿದರು. ಸಚಿವರಿಂದ ತೂರಿಬರುತ್ತಿದ್ದ ಪ್ರಶ್ನೆಗಳ ಸುರಿಮಳೆಗೆ ಬಾಲಕ ಉತ್ತರಿಸಿ ಸೈ ಎನಿಸಿಕೊಂಡಿದ್ದಾನೆ.

ಚಾಮರಾಜನಗರ: ಜಿಲ್ಲಾಡಳಿತ ವತಿಯಿಂದ ನಗರದ ಡಾ. ಬಿ. ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 71ನೇ ಗಣರಾಜ್ಯೋತ್ಸವದಲ್ಲಿ ಗಾಂಧಿ ವೇಷ ಧರಿಸಿದ್ದ ಬಾಲಕನಿಗೆ ಶಿಕ್ಷಣ ಸಚಿವ ಎಸ್‌.ಸುರೇಶ ಕುಮಾರ್ ಮನಸೋತರು.

ಗಾಂಧಿ ವೇಷ ಧರಿಸಿದ್ದ 3ನೇ ತರಗತಿ ಸಾದಿಕ್ ಉಲ್ಲಾ ಖಾನ್ ಎಂಬ ವಿದ್ಯಾರ್ಥಿಯನ್ನು ಕಂಡು ವೇದಿಕೆಯಿಂದ ಕೆಳಗಿಳಿದ ಶಿಕ್ಷಣ ಸಚಿವರು ಆತನೊಂದಿಗೆ 10 ಕ್ಕೂ ಹೆಚ್ಚು ಗಾಂಧೀಜಿ ಕುರಿತ ಪ್ರಶ್ನೆಗಳನ್ನು ಕೇಳಿದರು. ಸಚಿವರಿಂದ ತೂರಿಬರುತ್ತಿದ್ದ ಪ್ರಶ್ನೆಗಳಿಗೆ ಪಟಾಪಟ್ ಎಂದು ಉತ್ತರಿಸಿ ಸೈ ಎನಿಸಿಕೊಂಡಿದ್ದಾನೆ. 

 ಶಿಕ್ಷಣ ಸಚಿವ ಫಿಧಾ
ಇದೇ ವೇಳೆ, ಎರಡೂವರೆ ತಾಸು ಬಣ್ಣ ಹಚ್ಚಿಕೊಳ್ಳಲು ಸಮಯ ಬೇಕಿದ್ದು ತನ್ನ ಅಮ್ಮ ತನಗೆ ವೇಷಭೂಷಣ ಹಾಕುತ್ತಾರೆ ಎಂದು ತಿಳಿದಿದ್ದಕ್ಕೆ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು. ಬಳಿಕ, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಕ್ಕಳ ಬಳಿ ತೆರಳಿ ಮಾತನಾಡಿಸಿ ಹಾಸ್ಯ ಚಟಾಕಿಗಳನ್ಕು ಹಾರಿಸಿದರು‌.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com