ಸಿಎಎ ವಿರುದ್ಧ ಗಾಂಧಿ ಮಾರ್ಗದ ಹೋರಾಟ- ಎಚ್. ಡಿ. ದೇವೇಗೌಡ

ಪೌರತ್ವ ತಿದ್ದುಪಡಿ ಕಾಯ್ದೆ- ಸಿಎಎ  ವಿರುದ್ಧ ಮಹಾತ್ಮ  ಗಾಂಧಿಯವರ ಮಾರ್ಗದಲ್ಲಿ ಶಾಂತಿಯುತ ಹೋರಾಟ  ನಡೆಸಲಾಗುವುದು ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್. ಡಿ. ದೇವೇಗೌಡ ಹೇಳಿದ್ದಾರೆ

Published: 26th January 2020 11:18 AM  |   Last Updated: 26th January 2020 11:20 AM   |  A+A-


HDDevegowda1

ಎಚ್. ಡಿ. ದೇವೇಗೌಡ

Posted By : Nagaraja AB
Source : UNI

ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ- ಸಿಎಎ  ವಿರುದ್ಧ ಮಹಾತ್ಮ  ಗಾಂಧಿಯವರ ಮಾರ್ಗದಲ್ಲಿ ಶಾಂತಿಯುತ ಹೋರಾಟ  ನಡೆಸಲಾಗುವುದು ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್. ಡಿ. ದೇವೇಗೌಡ ಹೇಳಿದ್ದಾರೆ

ಇಂದು 71ನೇ ಗಣರಾಜ್ಯೋತ್ಸವ ಪ್ರಯುಕ್ತ ನಗರದ ಜೆಡಿಎಸ್ ಪಕ್ಷದ ಪ್ರಧಾನ ಕಚೇರಿ ಜೆ.ಪಿ.ಭವನದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.


ಕೇಂದ್ರ ಸರ್ಕಾರ ತನ್ನ ನಿರ್ಧಾರವನ್ನು ಪುನರ್  ಪರಿಶೀಲಿಸಬೇಕು. ಪ್ರತಿಕ್ರಿಯೆಗೆ ಪ್ರತಿಕ್ರಿಯೆಯೂ ಇರುತ್ತದೆ. ಹೀಗಾಗಿ‌ ಕೇಂದ್ರ ತನ್ನ  ನಿರ್ಧಾರವನ್ನು ಮತ್ತೊಮ್ಮೆ ಪರಿಶೀಲಿಸಲಿ ಎಂದು ಸೂಚ್ಯವಾಗಿ ದೇವೇಗೌಡ  ನುಡಿದರು. 

ಸಿಎಎ ಜಾರಿಗೆ ಮುಂದಾಗಿರುವ ಕೇಂದ್ರ ಸರ್ಕಾರದದ ವಿರುದ್ಧ ಹರಿಹಾಯ್ದ ದೇವೇಗೌಡ,  ಕೇಂದ್ರದ  ಇತ್ತೀಚಿನ ನಿರ್ಧಾರಗಳು ರಾಷ್ಟ್ರದ ಹಿತಾಸಕ್ತಿಗೆ ಧಕ್ಕೆ ತಂದಿವೆ. ಸಿಎಎ ವಿರುದ್ಧ ದೇಶದ ಜನ ಹೋರಾಟ ನಡೆಸುತ್ತಿದ್ದಾರೆ. ಆದರೆ  ಕೆಲವು ರಾಜ್ಯಗಳು ಸಿಎಎ ಜಾರಿ ಮಾಡದಿರಲು ನಿರ್ಧರಿಸಿವೆ ಎಂದರು‌.

Stay up to date on all the latest ರಾಜ್ಯ news
Poll
Farmers_Protest1

ಹೊಸ ಕೃಷಿ ಕಾನೂನುಗಳ ಬಗ್ಗೆ ರೈತರನ್ನು ದಾರಿ ತಪ್ಪಿಸಲಾಗುತ್ತಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp