ಆದಿತ್ಯಾ ರಾವ್ ಲಾಕರ್ ನಲ್ಲಿ‌ ದೊರಕಿದ್ದು ಸೈನೈಡ್ ಎಂಬುದು ದೃಢ!

ಮಂಗಳೂರು ಬಜ್ಪೆ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟ ಆರೋಪಿ ಆದಿತ್ಯಾ ರಾವ್ ವಿಚಾರಣೆ ತೀವ್ರಗೊಂಡಿದ್ದು, ಆತನ ಬ್ಯಾಂಕ್ ಲಾಕರ್‌ನಲ್ಲಿ ಪತ್ತೆಯಾದ ವಸ್ತು ಸೈನೇಡ್  ಎಂಬುದು ಈಗ ದೃಢಪಟ್ಟಿದೆ.

Published: 27th January 2020 01:43 PM  |   Last Updated: 27th January 2020 01:43 PM   |  A+A-


Mangaluru Airport Bomb Case

ಆರೋಪಿ ಆದಿತ್ಯಾ ರಾವ್

Posted By : Srinivasamurthy VN
Source : UNI

ಮಂಗಳೂರು: ಮಂಗಳೂರು ಬಜ್ಪೆ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟ ಆರೋಪಿ ಆದಿತ್ಯಾ ರಾವ್ ವಿಚಾರಣೆ ತೀವ್ರಗೊಂಡಿದ್ದು, ಆತನ ಬ್ಯಾಂಕ್ ಲಾಕರ್‌ನಲ್ಲಿ ಪತ್ತೆಯಾದ ವಸ್ತು ಸೈನೇಡ್  ಎಂಬುದು ಈಗ ದೃಢಪಟ್ಟಿದೆ.

ವಿಧಿವಿಜ್ಞಾನ ಪ್ರಯೋಗಾಲಯ ನೀಡಿರುವ ಪ್ರಾಥಮಿಕ ವರದಿಯಲ್ಲಿ ಈ ವಿಷಯ ಬಹಿರಂಗಗೊಂಡಿದೆ. ಹೀಗಾಗಿ ಬಾಂಬರ್  ಆದಿತ್ಯ ನನ್ನು ಸೈನೇಡ್ ಕುರಿತು ಮಂಗಳೂರು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.  ಸೈನೇಡ್  ಆತನಿಗೆ ಎಲ್ಲಿಂದ ದೊರಕಿತ್ತು? ಆತನೇ ವಸ್ತುಗಳನ್ನು ಬಳಸಿ ಸೈನೇಡ್ ತಯಾರಿಸಿದ್ದಾನಾ?  ಯಾವ ಉದ್ದೇಶಕ್ಕಾಗಿ ಅದನ್ನು ಬ್ಯಾಂಕ್ ಲಾಕರ್‌ನಲ್ಲಿ ಏಕೆ ಇಡಲಾಗಿತ್ತು ಎಂಬಿತ್ಯಾಗಿ  ತನಿಖೆಯನ್ನು ಪೊಲೀಸರು ಕೈಗೊಂಡಿದ್ದಾರೆ. 

ಇಂದು  ಪೌರತ್ವ ತಿದ್ದುಪಡಿ ಕಾಯ್ದೆ ಪರ ಕೇಂದ್ರ ಸಚಿವ ರಾಜ್ ನಾಥ್ ಸಿಂಗ್ ಅವರು  ಮಂಗಳೂರಿನಲ್ಲಿರುವ ಹಿನ್ನೆಲೆಯಲ್ಲಿ ಪೊಲೀಸ್ ಬಿಗಿಭದ್ರತೆಯನ್ನು ಮಂಗಳೂರು ಉತ್ತರ  ವಿಭಾಗದ ಎಸಿಪಿ ಬೆಳ್ಳಿಯಪ್ಪ ಅವರು ವಹಿಸಿರುವ ಹಿನ್ನೆಲೆಯಲ್ಲಿ, ಆದಿತ್ಯ ರಾವ್ ನನ್ನು ಇಂದು ಕಿರಿಯ ಪೊಲೀಸ್ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ. 

ಸಮಾವೇಶ ಮುಗಿದ ಬಳಿಕ ಮತ್ತೆ ಬೆಳ್ಳಿಯಪ್ಪ ಅವರು ಆದಿತ್ಯನನ್ನು ತೀವ್ರ ವಿಚಾರಣೆಗೆ ಒಳಪಡಿಸಲಿದ್ದಾರೆ ಎಂದು ತಿಳಿದು ಬಂದಿದೆ. ಆರೋಪಿಯನ್ನು ಶನಿವಾರ ಉಡುಪಿಗೆ ಕರೆತಂದಿದ್ದ ಮಂಗಳೂರಿನ ಪೊಲೀಸರು ಹಲವೆಡೆ ಸ್ಥಳ ಮಹಜರು ನಡೆಸಿದರು. 

ಕರ್ನಾಟಕ  ಬ್ಯಾಂಕ್‌ ಕುಂಜಿಬೆಟ್ಟು ಶಾಖೆಗೆ ಆದಿತ್ಯ ರಾವ್‌ ಅನ್ನು ಕರೆತರಲಾಗಿತ್ತು. ಆತನ  ಲಾಕರ್‌ನ ಕೀಲಿ ಕಳೆದು ಹೋಗಿದ್ದರಿಂದ ಕೀ ರಿಪೇರಿ ಮಾಡುವ ವ್ಯಕ್ತಿಯನ್ನು  ಕರೆಸಿ ಲಾಕರ್  ಬಾಗಿಲು ತೆರೆಯಲಾಗಿತ್ತು. ಬಳಿಕ ಅದರೊಳಗಿದ್ದ ವಸ್ತು ವಶಕ್ಕೆ ತೆಗೆದುಕೊಳ್ಳಲಾಯಿತ್ತು‌.  ನಂತರ ಲಾಕರ್ ನಲ್ಲಿ‌ ದೊರಕಿದ್ದ ಪುಡಿಯನ್ನು ಪರೀಕ್ಷೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು.  ಮಂಗಳೂರು  ಬಜ್ಪೆ ವಿಮಾನದ ಟಿಕೇಟ್ ಕೌಂಟರ್ ಬಳಿ ಬ್ಯಾಗ್ ನಲ್ಲಿ ಸಜೀವ ಬಾಂಬ್ ಇಟ್ಟ ತಾನೇ ಪರಾರಿಯಾಗಿರುವುದಾಗಿ ಆರೋಪಿ ಆದಿತ್ಯ ರಾವ್, ಬೆಂಗಳೂರು ಪೊಲೀಸರಿಗೆ ಶರಣಾಗಿದ್ದನು.

Stay up to date on all the latest ರಾಜ್ಯ news with The Kannadaprabha App. Download now
Poll
school

ಶಾಲೆಗಳನ್ನು ತೆರೆಯಲು ಸರ್ಕಾರ ಅನುಮತಿಸಿದರೆ ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ನೀವು ಸಿದ್ಧರಿದ್ದೀರಾ?


Result
ಹೌದು
ಇಲ್ಲ
ಇನ್ನೂ ನಿರ್ಧರಿಸಿಲ್ಲ
facebook twitter whatsapp