'ಓಮ್ನಿಯಲ್ಲಿ 15 ಶಾಲಾ  ಮಕ್ಕಳು: ಒಂದು ವೇಳೆ ಅಪಘಾತ ಸಂಭವಿಸಿದರೆ ಯಾರು ಹೊಣೆ'?

ಪೊಲೀಸ್ ಕಮೀಷನರ್ ಬಾಸ್ಕರ್ ರಾವ್, ಶಾಲಾ ವಾಹನವೊಂದರ ಫೋಟೋ ಹಾಕಿ ಶಾಲೆ ಆಡಳಿತ ಮಂಡಳಿ ಮತ್ತು ಪೋಷಕರನ್ನು ಪ್ರಶ್ನಿಸಿದ್ದಾರೆ.
ಭಾಸ್ಕರ್ ರಾವ್
ಭಾಸ್ಕರ್ ರಾವ್

ಬೆಂಗಳೂರು: ಪೊಲೀಸ್ ಕಮೀಷನರ್ ಬಾಸ್ಕರ್ ರಾವ್, ಶಾಲಾ ವಾಹನವೊಂದರ ಫೋಟೋ ಹಾಕಿ ಶಾಲೆ ಆಡಳಿತ ಮಂಡಳಿ ಮತ್ತು ಪೋಷಕರನ್ನು ಪ್ರಶ್ನಿಸಿದ್ದಾರೆ.

ಹದಿನೈದು ಮಕ್ಕಳನ್ನು ಕರೆದೊಯ್ಯುತ್ತಿರುವ ಓಮ್ನಿ ಕಾರೊಂದರ ಫೋಟೊವನ್ನು ಟ್ವಿಟರ್‌ನಲ್ಲಿ ಅಪ್‌ಲೋಡ್‌ ಮಾಡುವ ಮೂಲಕ ಪೊಲೀಸ್‌ ಕಮಿಷನರ್‌ ಭಾಸ್ಕರ್‌ ರಾವ್, ಶಾಲಾ ಆಡಳಿತ ಮಂಡಳಿ ಮತ್ತು ಪೋಷಕರಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

‘4+1 ಜನರ ಸಾಮರ್ಥ್ಯದ ಓಮ್ನಿಯಲ್ಲಿ 15 ಮಕ್ಕಳು ಪ್ರಯಾಣಿಸುತ್ತಿದ್ದಾರೆ. ಈ ವಾಹನವನ್ನು ಪೊಲೀಸು ತಡೆದರೆ ಪೋಷಕರು ಮತ್ತು ಶಾಲಾ ಆಡಳಿತ ಮಂಡಳಿ ಆಕ್ರೋಶ ವ್ಯಕ್ತಪಡಿಸುತ್ತದೆ. ಈ ವಾಹನದಲ್ಲಿರುವ ಸಿಲಿಂಡರ್ ಮೇಲೆ ಮಕ್ಕಳು ಕುಳಿತಿದ್ದಾರೆ. 

ಸಾಮರ್ಥ್ಯಕ್ಕಿಂತ ಹೆಚ್ಚು ಜನರನ್ನು ಕೊಂಡೊಯ್ಯುವ ವಾಹನಗಳು ಅಪಘಾತಕ್ಕೊಳಗಾಗುವ ಸಾಧ್ಯತೆಗಳಿರುತ್ತವೆ. ಒಂದು ವೇಳೆ ಅಪಘಾತ ಸಂಭವಿಸಿದರೆ ಯಾರು ಹೊಣೆ’ ಎಂದು ಕಮಿಷನರ್‌ ಟ್ವೀಟ್‌ನಲ್ಲಿ ಪ್ರಶ್ನಿಸಿದ್ದಾರೆ.

ಅಗತ್ಯಕ್ಕಿಂತ ಹೆಚ್ಚಿನ ಮಕ್ಕಳನ್ನು  ಕರೆದೊಯ್ಯುವ ವಾಹನವನ್ನು ಆರ್‌ಟಿಒ ಮತ್ತು ಟ್ರಾಫಿಕ್ ಪೊಲೀಸರುತಡೆದು ಅವುಗಳನ್ನು ವಶಪಡಿಸಿಕೊಳ್ಳಬೇಕು. ಕೋರ್ಟ್ ದಂಡ ವಿಧಿಸಬೇಕು,  ಇಲ್ಲಿ  ಪೊಲೀಸ್ ಕಮಿಷನರ್ ಶಾಲೆಗಳು ಮತ್ತು ಮಕ್ಕಳ ಪೋಷಕರೇ ನೈತಿಕ ಜವಾಬ್ದಾರಿ ಹೊರಬೇಕು ಎಂದು ಹೇಳಿದ್ದಾರೆ, ಸುಪ್ರಿಂಕೋರ್ಟ್ ಕೂಡ  ವಾಹನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನನು ತುಂಬಬಾರದು ಇದು ಶಾಲೆಯ ಜವಾಬ್ದಾರೆ ಎಂದು ಆದೇಶಿಸಿದೆ, ಆದರೆ ಇದನ್ನು ಯಾರು ಅನುಸರಿಸುತ್ತಿಲ್ಲ ಎಂದು ಸಂಚಾರ ವಿಭಾಗದ ಹೆಚ್ಚುವರಿ ಕಮಿಷನರ್ ರವಿಕಾಂತೇಗೌಡ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com