ಕರ್ನಾಟಕಕ್ಕೆ ಕೊರೋನಾಘಾತ: ಇಂದು ಬೆಂಗಳೂರಿನಲ್ಲಿ 889, ರಾಜ್ಯದಲ್ಲಿ 1,502 ಪ್ರಕರಣಗಳು ಪತ್ತೆ!

ರಾಜ್ಯದಲ್ಲಿ ಕೊರೋನಾ ವೈರಸ್ ಮರಣ ಮೃದಂಗ ಮುಂದುವರೆದಿದ್ದು, ಗುರುವಾರ ಒಂದೇ ದಿನ ಬೆಂಗಳೂರಿನಲ್ಲಿ 889 ಮತ್ತು ಒಟ್ಟಾರೆ ರಾಜ್ಯದಲ್ಲಿ 1,502 ಪ್ರಕರಣಗಳು ಪತ್ತೆಯಾಗಿವೆ.

Published: 02nd July 2020 07:33 PM  |   Last Updated: 02nd July 2020 08:01 PM   |  A+A-


for representation purpose only

ಸಂಗ್ರಹ ಚಿತ್ರ

Posted By : Vishwanath S
Source : Online Desk

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ವೈರಸ್ ಮರಣ ಮೃದಂಗ ಮುಂದುವರೆದಿದ್ದು, ಗುರುವಾರ ಒಂದೇ ದಿನ ಬೆಂಗಳೂರಿನಲ್ಲಿ 889 ಮತ್ತು ಒಟ್ಟಾರೆ ರಾಜ್ಯದಲ್ಲಿ 1,502 ಪ್ರಕರಣಗಳು ಪತ್ತೆಯಾಗಿವೆ.

ಕೊರೋನಾ ವೈರಸ್ ನಿಂದಾಗಿ ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 19 ಮಂದಿ ಸಾವನ್ನಪ್ಪಿದ್ದು ಒಟ್ಟಾರೆ ಸಾವಿನ ಸಂಖ್ಯೆ 272ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಇಂದು ಬೆಂಗಳೂರಿನಲ್ಲಿ 889 ಸೇರಿದಂತೆ ದಕ್ಷಿಣ ಕನ್ನಡದಲ್ಲಿ 90, ಮೈಸೂರಿನಲ್ಲಿ 68, ಬಳ್ಳಾರಿಯಲ್ಲಿ 65, ಧಾರವಾಡದಲ್ಲಿ 47, ವಿಜಯಪುರದಲ್ಲಿ 39, ರಾಮನಗರದಲ್ಲಿ 39, ಕಲಬುರಗಿಯಲ್ಲಿ 38, ಬೀದರ್‌ನಲ್ಲಿ 32, ತುಮಕೂರಿನಲ್ಲಿ 26, ಶಿವಮೊಗ್ಗದಲ್ಲಿ 23, ಮಂಡ್ಯದಲ್ಲಿ 19, ಉತ್ತರಕನ್ನಡದಲ್ಲಿ 17, ಹಾಸನದಲ್ಲಿ 15, ಉಡುಪಿಯಲ್ಲಿ 14 ಪ್ರಕರಣಗಳು ವರದಿಯಾಗಿವೆ.

ರಾಜ್ಯದಲ್ಲಿ ಹೊಸದಾಗಿ 1,502 ಮಂದಿಗೆ ಕೊವಿಡ್-19 ಪಾಸಿಟಿವ್ ದೃಢಪಟ್ಟಿದ್ದು, ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 18,016ಕ್ಕೆ ಏರಿಕೆಯಾಗಿದೆ.

ರಾಜ್ಯದಲ್ಲಿ ಚೇತರಿಕೆಯ ಪ್ರಮಾಣ ಕೂಡ ಉತ್ತಮವಾಗಿದ್ದು ಚೇತರಿಕೆ ಕಂಡವರ ಸಂಖ್ಯೆ 8334ಕ್ಕೇರಿಕೆಯಾಗಿದೆ. ರಾಜ್ಯದಲ್ಲಿ ಒಟ್ಟು 9406 ಸಕ್ರಿಯ ಪ್ರಕರಣಗಳಿವೆ.

Stay up to date on all the latest ರಾಜ್ಯ news
Poll
IPL2020

ಚೀನಾದ ಪ್ರಾಯೋಜಕರೊಂದಿಗಿನ ಒಪ್ಪಂದವನ್ನು ಮುಂದುವರಿಸಿರುವ ಕಾರಣ ಭಾರತೀಯರು ಐಪಿಎಲ್ ಅನ್ನು ಬಹಿಷ್ಕರಿಸಬೇಕೆಂದು ಸ್ವದೇಶಿ ಜಾಗರನ್ ಮಂಚ್ ಹೇಳಿದೆ. ನೀವು ಏನಂತೀರಿ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp