ಬೆಂಗಳೂರಿನಲ್ಲಿ ಮಾನವೀಯತೆ ಮರೆತ ವೈದ್ಯರು: ತುಂಬು ಗರ್ಭಿಣಿಯ ಕಣ್ಣೀರ ಕತೆ- ವ್ಯಥೆ

ಸತತ ಹನ್ನೆರಡು ಗಂಟೆಗಳಿಂದ ಹೊಟ್ಟೆಯಲ್ಲಿ 9 ತಿಂಗಳ ಮಗುವನ್ನು ಹೊತ್ತುಕೊಂಡು ಆಸ್ಪತ್ರೆಯಿಂದ ಆಸ್ಪತ್ರೆ ಗೆ ತುಂಬು ಗರ್ಭಿಣಿ ಅಲೆದಾಡುತ್ತಿದ್ದರೂ ಕೊರೋನಾ ಭಯದಿಂದ ಡೆಲಿವರಿ ಮಾಡಲು ಯಾವ ಆಸ್ಪತ್ರೆಗಳು ಮುಂದೆ ಬಾರದೆ ಕುಂಟು ನೆಪ ಹೇಳಿ ಮುಂದೆ ಸಾಗಾಕಿರುವ ಕಣ್ಣೀರ ಕಥೆ ಇದು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಸತತ ಹನ್ನೆರಡು ಗಂಟೆಗಳಿಂದ ಹೊಟ್ಟೆಯಲ್ಲಿ 9 ತಿಂಗಳ ಮಗುವನ್ನು ಹೊತ್ತುಕೊಂಡು ಆಸ್ಪತ್ರೆಯಿಂದ ಆಸ್ಪತ್ರೆ ಗೆ ತುಂಬು ಗರ್ಭಿಣಿ ಅಲೆದಾಡುತ್ತಿದ್ದರೂ ಕೊರೋನಾ ಭಯದಿಂದ ಡೆಲಿವರಿ ಮಾಡಲು ಯಾವ ಆಸ್ಪತ್ರೆಗಳು ಮುಂದೆ ಬಾರದೆ ಕುಂಟು ನೆಪ ಹೇಳಿ ಮುಂದೆ ಸಾಗಾಕಿರುವ ಕಣ್ಣೀರ ಕಥೆ ಇದು. ಇದೊಂದು ಅಮಾನವೀಯ ಹಾಗೂ ತಲೆತಗ್ಗಿಸಬೇಕಾದ ಘಟನೆ ಎಂದರೂ ಅದು ಅತಿಶಯೋಕ್ತಿಯೇನಲ್ಲ .! 

ಇದು ಮೈಸೂರು ರಸ್ತೆಯಲ್ಲಿರುವ ಭೀಮನಕುಪ್ಪೆಯ ನಿವಾಸಿ ಗರ್ಭಿಣಿ ಮಮತಾ ಕಣ್ಣೀರ ಕಥೆ. ಕೇಳಿದರೆ ಯಾರಿಗಾದರೂ ಕರುಳು ಚುರಕ್ ಎನ್ನುತ್ತದೆ ಅಂತಹದ್ದರಲ್ಲಿ ವೈದ್ಯರಿಗೆ ಆಸ್ಪತ್ರೆಗಳಿಗೆ, ಮನ ಕರಗಲಿಲ್ಲ ಎಂದರೆ ಏನು ಹೇಳ ಬೇಕೋ ಗೊತ್ತಾಗುತ್ತಿಲ್ಲ. ನಿಜಕ್ಕೂ ನಾವು ಇಂತಹ ಅಮಾನವೀಯ ಜಗತ್ತಿನಲ್ಲಿ, ಸಿಟಿಯಲ್ಲಿ ಬದುಕಿದ್ದೇವೆಯಲ್ಲ ಎಂಬ ಅಸಹಾಯಕತೆಯೂ ಬೆಂಕಿ ರೀತಿಯಲ್ಲಿ ಸುಡುತ್ತದೆ. 

ನಡೆದಿದ್ದಾರೂ ಏನು? ಆಕೆ ಪಟ್ಟ ಕಷ್ಟ ಯಾವ ದೇವರಿಗೆ ತಾನೆ ಪ್ರೀತಿ? ರಾತ್ರಿಯಿಡಿ ನಡೆದ ಘಟನೆ ನೋಡಿದರೆ, ಕೇಳಿದರೆ ಅಯ್ಯೋ ಎನಿಸುತ್ತದೆ, ಅಂತಹದ್ದರಲ್ಲಿ ವೈದ್ಯರಿಗೆ ಮನ ಕರಗಲಿಲ್ಲ ಎಂದರೆ ಹೇಗೆ? ಆಕೆ ಪ್ರತಿ ತಿಂಗಳು ಕೆಂಗೇರಿಯ ಬಿಜಿಎಸ್ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಕೊಳ್ಳುತ್ತಿದ್ದರು ಇಂದು ಡಿಲೆವೆರಿಗೆ ದಿನಾಂಕ ನೀಡಿದ್ದರು. ಆದರೆ ಅವರಿಗೆ ರಾತ್ರಿಯೇ ಹೆರಿಗೆ ನೋವು ಕಾಣಿಸಿಕೊಂಡಿದೆ ನಿನ್ನೆ ರಾತ್ರಿ ಹನ್ನೆರಡು ಗಂಟೆಗೆ ಕೆಂಗೇರಿಯ ಬಿಜಿಎಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ವೈದ್ಯರು ಇಲ್ಲಿ ನಮಗೆ ಸಮಸ್ಯೆ ಆಗುತ್ತದೆ. ನೀವು ವಾಣಿ ವಿಲಾಸಕ್ಕೆ ಕರೆದುಕೊಂಡು ಹೋಗಿ ಎಂದು ಸಬೂಬು ಹೇಳಿ ಅಲ್ಲಿಂದ ವಾಪಸ್ ಕಳುಹಿಸಿದ್ದಾರೆ. 

ಅಲ್ಲಿಂದ ನೇರವಾಗಿ ವಾಣಿ ವಿಲಾಸ ಆಸ್ಪತ್ರೆಗೆ ಹೋದರೆ. ಇಲ್ಲಿ ಕೊರೊನಾ ರೋಗಿಗಳು ಇದ್ದಾರೆ ನಿಮಗೆ ಚಿಕಿತ್ಸೆ ಕೊಡಲು ಆಗುವುದಿಲ್ಲ. ನೀವು ಕಿಮ್ಸ್ ಗೆ ಹೋಗಿ ಎಂದು ಸಾಗ ಹಾಕಿದ್ದಾರೆ. ಅಲ್ಲಿಗೆ ಹೋದ್ರೆ ಕೊರೋನಾ ರೋಗಿಗಳ ಜೊತೆಯಲ್ಲಿ ಇವರಿಗೂ ಚಿಕಿತ್ಸೆ ಕೊಡುತ್ತೇವೆ ಆಗಬಹುದಾ ಎಂಬ ರಾಗ ಎಳೆದು ಆಮೇಲೆ ಇವರಿಗೆ ಕೊರೋನಾ ಬಂದರೆ ನಮಗೆ ಕೇಳುವ ಹಾಗಿಲ್ಲ ಎಂದು ಮಜ ತೆಗೆದುಕೊಂಡಿದ್ದಾರೆ. 

ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿಸಿದ್ದಾರೆ. ಕರಣೆಯಿಲ್ಲದೆ ಮಾತನಾಡಿದ್ದಾರೆ. ಗೋವಿಂದರಾಜ ನಗರದಲ್ಲಿರುವ ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡಿದರೂ ಸಹ ಚಿಕಿತ್ಸೆ ಕೊಡಲಿಲ್ಲ. ಸದ್ಯ ವಾರ್ಡ್ 127 ರಲ್ಲಿರುವ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಆ ಆಸ್ಪತ್ರೆಯವರು ಹೆರಿಗೆ ಮಾಡುತ್ತೇವೆ ಆದರೆ ಮಗುವಿನ ಜವಾಬ್ದಾರಿ ತೆಗೆದುಕೊಳ್ಳುವುದಿಲ್ಲ ಮಗುವನ್ನು ಬೇರೆ ಕಡೆ ಚಿಕಿತ್ಸೆ ಕೊಡಿಸುವಂತೆ ಸೂಚನೆ ಕೊಟ್ಟು ನಡು ಬೀದಿಯಲ್ಲಿ ತುಂಬು ಗರ್ಭಿಣಿಯನ್ನು ನಿಲ್ಲಿಸಿ ಅಮಾನವೀಯವಾಗಿ ವರ್ತಿಸಿದ್ದಾರೆ . 

ಕೊರೋನಾ ಹೆಸರು ಹೇಳಿ, ತೋರಿಸಿ ಸಹಾಯ ಮಾಡದೆ ಸಬೂಬು ಹೇಳಿ ಕೈ ತೊಳೆದುಕೊಂಡವರಿಗೆಲ್ಲ ತಕ್ಕ ಶಾಸ್ತಿ ಮಾಡಬೇಕು ತಾನೆ? ಆಕೆ ಮಾಡಿದ ತಪ್ಪಾದಾರೂ ಏನು? ಬೆಂಗಳೂರಿಗೆ ಗೌರವ ತರುವ ಘಟನೆಯೇ? ವೈದ್ಯರು, ಆಸ್ಪತ್ರೆಗಳಿಗೆ ಮನ ಕರಗಲಿಲ್ಲ ಎಂದರೆ ಕಟುಕರ ಸಾಮಾಜ್ರದ್ಯಲ್ಲಿ ಬದುಕಿದ್ದೇವೆಯೇ ಎಂಬ ಪ್ರಶ್ನೆ ಮೂಡಲಾರಂಭಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com