ಕೊರೋನಾ: ಜನರಲ್ಲಿ ಜಾಗೃತಿ ಮೂಡಿಸಲು ಬಿಜೆಪಿಯಿಂದ 427 ವರ್ಚ್ಯುವಲ್ ರ್ಯಾಲಿ

ಕೊರೋನಾ ವೈರಸ್ ಕುರಿತು ಸಾರ್ವಜನಿಕರಲ್ಲಿ ಜನಜಾಗೃತಿ ಮೂಡಿಸಲು ಜು.7 ರಿಂದ 30ರವಸೆಗೆ 23 ದಿನಗಳ ಕಾಲ ಬಿಜೆಪಿ ಮನೆ ಮನೆ ಸಂಪರ್ಕ ಹಾಗೂ ವರ್ಚ್ಯುವಲ್ ರ್ಯಾಲಿ ಹಮ್ಮಿಕೊಂಡಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕೊರೋನಾ ವೈರಸ್ ಕುರಿತು ಸಾರ್ವಜನಿಕರಲ್ಲಿ ಜನಜಾಗೃತಿ ಮೂಡಿಸಲು ಜು.7 ರಿಂದ 30ರವಸೆಗೆ 23 ದಿನಗಳ ಕಾಲ ಬಿಜೆಪಿ ಮನೆ ಮನೆ ಸಂಪರ್ಕ ಹಾಗೂ ವರ್ಚ್ಯುವಲ್ ರ್ಯಾಲಿ ಹಮ್ಮಿಕೊಂಡಿದೆ. 

ರಾಜ್ಯದಲ್ಲಿ ಒಟ್ಟು 427 ರ್ಯಾಲಿಗಳು ನಡೆಯಲಿದ್ದು, ಸಾಮಾಜಿಕ ಜಾಲತಾಣಗಳ ಮೂಲಕ ಜಾನಜಾಗೃತಿ, ವಿಡಿಯೋ ಕಾನ್ಫರೆನ್ಸ್ ಮತ್ತು ವರ್ಚ್ಯುವಲ್ ರ್ಯಾಲಿಗಳು ನಡೆಯಲಿವೆ ಎಂದು ತಿಳಿದುಬಂದಿದೆ. 

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಪ ಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ್ ಹಾಗೂ ವಿಧಾನಪರಿಷತ್ ಸದಸ್ಯ ರವಿಕುಮಾರ್ ಅವರು, ರಾಜ್ಯದಲ್ಲಿ ಪಕ್ಷದ ವಿವಿಧ ಮೋರ್ಚಾಗಳ ವತಿಯಿಂದ 427 ರ್ಯಾಲಿಗಳು ನಡೆಯಲಿದ್ದು, 5.13 ಲಕ್ಷ ಜನ ಭಾಗವಹಿಸುವ ಗುರಿ ಇದಿ ಎಂದು ಹೇಳಿದ್ದಾರೆ. 

ರ್ಯಾಲಿಯಲ್ಲಿ ಮುಖ್ಯ ಭಾಷಣಕಾರರಾಗಿ ಅವರು, ಈ ರ್ಯಾಲಿಯಲ್ಲಿ ಮುಖ್ಯ ಅತಿಥಿಗಳಾಗಿ ಡಿಸಿಎಂ ಗೋವಿಂದ ಕಾರಜೋಳ ಪಾಲ್ಗೊಳ್ಳಲಿದ್ದಾರೆ. ದಿಕ್ಸೂಚಿ ಭಾಷಣವನ್ನು ಪಕ್ಷದ ರಾಜ್ಯ ಉಸ್ತುವಾರಿಯೂ ಆಗಿರುವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುರಳೀಧರರಾವ್ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಹಿಸಲಿದ್ದಾರೆ. 

ಕಾರ್ಯಕ್ರಮವನ್ನು ಫೇಸ್'ಬುಕ್, ಟ್ವಿಟರ್, ಎಸ್ಎಂಎಸ್, ಆಡಿಯೋ ಕರೆ, ಯೂಟ್ಯೂಬ್ ಇತ್ಯಾದಿ ಜಾಲತಾಣದ ಮೂಲಕ ನಡೆಸಲಾಗುತ್ತದೆ ಎಂದು ವಿವರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com