ಕರ್ನಾಟಕದಲ್ಲಿ ದಾಖಲೆ ಹಂತ ತಲುಪಿದ ಕೊರೋನಾ: 5 ದಿನದಲ್ಲಿ 5,500 ಪ್ರಕರಣ!

ರಾಜ್ಯದಲ್ಲಿ ಒಂದೇ ದಿನ ದಾಖಲೆಯ 1,272 ಪ್ರಕರಣಗಳು ದಾಖಲಾಗಿವೆ, ಬುಧವಾರ 16,514 ಒಟ್ಟು ಕೇಸ್ ಗಳಾಗಿವೆ, ಜೂನ್ 27ರಿಂದ ಜುಲೈ 1 ರವರೆಗೆ ದಾಖಲೆಯ 5,509 ಕೊರೋನಾ ಪ್ರಕರಣ ದಾಖಲಾಗಿವೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ಒಂದೇ ದಿನ ದಾಖಲೆಯ 1,272 ಪ್ರಕರಣಗಳು ದಾಖಲಾಗಿವೆ, ಬುಧವಾರ 16,514 ಒಟ್ಟು ಕೇಸ್ ಗಳಾಗಿವೆ, ಜೂನ್ 27ರಿಂದ ಜುಲೈ 1 ರವರೆಗೆ ದಾಖಲೆಯ 5,509 ಕೊರೋನಾ ಪ್ರಕರಣ ದಾಖಲಾಗಿವೆ,

ಹೆಚ್ಚಿನ ಆತಂಕ ಎದುರಾಗಿರುವುದು ಬೆಂಗಳೂರು ನಗರದಲ್ಲಿ, ದಿನೇ ದಿನೇ ಸೋಂಕಿತರ ಪ್ರಮಾಣದಲ್ಲಿ ಏರಿಕೆಯಾಗುತ್ತಲೇ ಇದೆ, 

"ಸೋಂಕಿನ ಮೂಲವನ್ನು ಹುಡುಕುತ್ತಿರುವ ಬಿಬಿಎಂಪಿ, ಯಾವುದೇ ಪ್ರಯಾಣದ ಇತಿಹಾಸ ಅಥವಾ ರೋಗಿಗಳ ಸಂಪರ್ಕಗಳನ್ನು ಹೊಂದಿರದ ಪ್ರಕರಣಗಳು ಗಮನಾರ್ಹವಾಗಿ ಏರುತ್ತಿವೆ.

ರಾಜ್ಯದಲ್ಲಿ ಸಾವಿನ ಸಂಖ್ಯೆ 253 ಕ್ಕೆ ತಲುಪಿದೆ. ಇಬ್ಬರು ಬೆಂಗಳೂರಿನವರು, ಇಬ್ಬರೂ 50 ವರ್ಷ ವಯಸ್ಸಿನವರು ಒಬ್ಬ ಮಹಿಳೆ ಮತ್ತು ಮತ್ತೊಬ್ಬ ಪುರುಷ.

ಬೀದರ್‌ನಲ್ಲಿ ತೆಲಂಗಾಣದಿಂದ ಹಿಂದಿರುಗಿ ಜ್ವರ, ಕೆಮ್ಮು ಮತ್ತು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಇಬ್ಬರು ಮೃತಪಟ್ಟಿದ್ದಾರೆ. ದಕ್ಷಿಣ ಕನ್ನಡ, ಬೆಳಗಾವಿ ಮತ್ತು ಹಾಸನ ತಲಾ ಒಂದು ಸಾವು ದಾಖಲಾಗಿದೆ ಎಂದು ಕರ್ನಾಟಕ ವಾರ್ ರೂಮ್ ಉಸ್ತುವಾರಿ ಮನೀಶ್ ಮೌದ್ಗೀಲ್ ಹೇಳಿದ್ದಾರೆ.

ಬಲ್ಲಾರಿ ಜಿಲ್ಲೆಯಲ್ಲಿ 85 ಪ್ರಕರಣಗಳಿದ್ದು, ಅವುಗಳಲ್ಲಿ 20 ಪ್ರಕರಣಗಳು ಐಎಲ್ಐ ಮತ್ತು ನಾಲ್ಕು ಸಾರಿ ಪ್ರಕರಣಗಳು, ಮೂರು ಪ್ರಕರಣಗಳ ಸಂಪರ್ಕಗಳು ಇನ್ನೂ ಪತ್ತೆಯಾಗಬೇಕಿದೆ.

ಉಳಿದವು ಹಿಂದಿನ ರೋಗಿಗಳ ಸಂಪರ್ಕಗಳಾಗಿವೆ. ದಕ್ಷಿಣ ಕನ್ನಡದಲ್ಲಿ 84 ಪ್ರಕರಣಗಳಿದ್ದು, ಆರು ಪ್ರಕರಣಗಳು ಶಾರ್ಜಾದಿಂದ, 27 ಐಎಲ್ಐ ಪ್ರಕರಣಗಳು ಮತ್ತು ಹಿಂದಿನ ರೋಗಿಗಳ ಉಳಿದ ಸಂಪರ್ಕದಿಂದ ಸೋಂಕು ಹರಡಿದೆ. 27 ಐಎಲ್ಐ ಪ್ರಕರಣಗಳು ಮತ್ತು ಹಿಂದಿನ ರೋಗಿಗಳ ಉಳಿದ ಸಂಪರ್ಕಗಳು. ಧಾರವಾಡದಲ್ಲಿ 35 ಮತ್ತು ಬೆಂಗಳೂರು ಗ್ರಾಮೀಣ 29. ವಿಜಯಪುರ ಮತ್ತು ಹಾಸನಗಳಿಗೆ ತಲಾ 28, ಉತ್ತರ ಕನ್ನಡ, ಉಡುಪಿ, ಚಾಮರಾಜನಗರ ಮತ್ತು ಬಾಗಲಕೋಟೆ ಕ್ರಮವಾಗಿ 23, 22, 21 ಮತ್ತು 20 ಪ್ರಕರಣಗಳು ದಾಖಲಾಗಿವೆ.

ತುಮಕೂರನಲ್ಲಿ 19 ಪ್ರಕರಣಗಳು ದಾಖಲಾದರೇ ದಾವಣಗೆರೆ 16. ಚಿಕ್ಕಬಳ್ಳಾಪುರದಲ್ಲಿ 15, ಕಲಬುರ್ಗಿ ಮತ್ತು ರಾಮನಗರ ತಲಾ 14 ಪ್ರಕರಣಗಳು ಮತ್ತು ಕೊಪ್ಪಳ, ರಾಯಚೂರು ಮತ್ತು ಚಿತ್ರದುರ್ಗದಲ್ಲಿ ತಲಾ 12 ಪ್ರಕರಣಗಳು ದಾಖಲಾಗಿವೆ. ಯಾದಗಿರಿ, ಬೆಳಗಾವಿ ಮತ್ತು ಬೀದರ್ ತಲಾ ಎಂಟು, ಕೊಡಗು ಏಳು, ಮಂಡ್ಯ ಮತ್ತು ಕೋಲಾರ್ ನಲ್ಲಿ ತಲಾ ಐದು, ಶಿವಮೊಗ್ಗ ಮೂರು, ಗದಗದಲ್ಲಿ ಎರಡು ಪ್ರಕರಣಗಳು ದಾಖಲಾಗಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com