ಕೊರೋನಾ ಎಫೆಕ್ಟ್: ರಾಜ್ಯದಲ್ಲಿ ಮುಂದುವರೆದ ಅಮಾನವೀಯ ಅಂತ್ಯಸಂಸ್ಕಾರ, ಶವವನ್ನು ನೆಲದಲ್ಲಿ ದರದರನೆ ಎಳೆದೊಯ್ದ ಸಿಬ್ಬಂದಿ!

ಕೊರೋನಾ ವೈರಸ್ ವ್ಯಾಪಕವಾದ ಹಿನ್ನೆಲೆಯಲ್ಲಿ ಬಲಿಯಾದವರ ಮೃತದೇಹಗಳನ್ನು ವಿದೇಶಗಳಲ್ಲಿ ಬೇಕಾಬಿಟ್ಟು ಹೇಯವಾಗಿ ಸಂಸ್ಕಾರ ಮಾಡಿದ ಘಟನೆಗಳು ಬೇಕಾದಷ್ಟು ನಡೆದಿವೆ. ಆದರೆ, ಅಂತಹದ್ದೇ ಅಮಾನವೀಯ ಘಟನೆಗಳು ಕರ್ನಾಟಕದಲ್ಲೂ ಬೆಳಕಿಗೆ ಬರುತ್ತಿದ್ದು, ನಾಗರೀಕರು ಬೆಚ್ಚಿ ಬೀಳುವಂತೆ ಮಾಡುತ್ತಿದೆ.
ಮೃತದೇಹವನ್ನು ನೆಲದಲ್ಲಿ ಎಳೆದೊಯ್ಯುತ್ತಿರುವ ಸಿಬ್ಬಂದಿಗಳು
ಮೃತದೇಹವನ್ನು ನೆಲದಲ್ಲಿ ಎಳೆದೊಯ್ಯುತ್ತಿರುವ ಸಿಬ್ಬಂದಿಗಳು

ಯಾದಗಿರಿ: ಕೊರೋನಾ ವೈರಸ್ ವ್ಯಾಪಕವಾದ ಹಿನ್ನೆಲೆಯಲ್ಲಿ ಬಲಿಯಾದವರ ಮೃತದೇಹಗಳನ್ನು ವಿದೇಶಗಳಲ್ಲಿ ಬೇಕಾಬಿಟ್ಟು ಹೇಯವಾಗಿ ಸಂಸ್ಕಾರ ಮಾಡಿದ ಘಟನೆಗಳು ಬೇಕಾದಷ್ಟು ನಡೆದಿವೆ. ಆದರೆ, ಅಂತಹದ್ದೇ ಅಮಾನವೀಯ ಘಟನೆಗಳು ಕರ್ನಾಟಕದಲ್ಲೂ ಬೆಳಕಿಗೆ ಬರುತ್ತಿದ್ದು, ನಾಗರೀಕರು ಬೆಚ್ಚಿ ಬೀಳುವಂತೆ ಮಾಡುತ್ತಿದೆ. 

ಬಳ್ಳಾರಿಯ ಹೊರವಲಯದಲ್ಲಿ ತೋಡಿದ್ದ ಗುಂಡಿಗೆ ಕೋರೋನಾ ಮೃತರ 8 ಶವಗಳನ್ನು ಎಸೆದ ರೀತಿಯಲ್ಲಿಯೇ ಶವಗಳನ್ನು ನೆಲದಲ್ಲಿ ಎಳೆದುಕೊಂಡು ಬಂದು ಹಾಕಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ. 

ರಾಯಚೂರು ಜಿಲ್ಲೆಯ ಸಿರವಾರದಲ್ಲಿ ಭಾನುವಾರ ಮಗಳ ಮದುವೆ ಮುಗಿಸಿದ ಬಳಿಕ ಸೋಮವಾರ ರಾಯಚೂರಿ ರಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟ ಕೊರೋನಾ ಸೋಂಕಿತನ ಶವವನ್ನು ಯಾದಗಿರಿ ಜಿಲ್ಲೆಯ ಹೋನಗೆರಾ ತಾಲೂಕಿನ ವ್ಯಕ್ತಿಯ ಮೃತದೇಹವನ್ನು ಮಂಗಳವಾರ ಜಮೀನೊಂದರಲ್ಲಿ ಅಂತ್ಯಸಂಸ್ಕಾರ ಮಾಡಿದ ರೀತಿ ಚರ್ಚೆಗೆ ಗ್ರಾಸವಾಗಿದೆ. 

ಆ್ಯಂಬುಲೆನ್ಸ್ ನಿಂದ ಕೆಳಗಿಳಿಸಲ್ಪಟ್ಟ ಶವವನ್ನು ಪಿಪಿಇ ಕಿಟ್ ಧರಿಸಿದ್ದ ಇಲಾಖೆಯ ಸಿಬ್ಬಂದಿ ಗುಂಡಿಯವರೆಗೆ ನೆಲದಲ್ಲೇ ಎಳೆದುಕೊಂಡು ಸುರಿದಿದ್ದಾರೆ. ಅಂತ್ಯಸಂಸ್ಕಾರದ ವೇಳೆ, ಮೃತನ ಕಿರಿಯ ಸಹೋದರನನ್ನು ಹೊರತುಪಡಿಸಿದರೆ, ಉಳಿದ ಸಂಬಂಧಿಕರು ಯಾರೂ ಉಪಸ್ಥಿತರಿರಲಿಲ್ಲ. ಆದರೆ, ಪಶುಗಳಿಗಿಂತಲೂ ಕೀಳಾಗಿ ಮೃತಪಟ್ಟ ಸೋಂಕಿತನ ಅಂತ್ಯಕ್ರಿಯೆ ನಡೆಸಿದ ಪರಿ ಇಲ್ಲಿನ ಜನರನ್ನು ಆತಂಕಕ್ಕೀಡಾಗುವಂತೆ ಮಾಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com