ಉದ್ಯೋಗದಲ್ಲಿ ಬಡ್ತಿ ಪಡೆಯಲು 55ನೇ ವಯಸ್ಸಿನಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದ ಪೊಲೀಸ್!

ಉದ್ಯೋಗದಲ್ಲಿ ಬಡ್ತಿಗೋಸ್ಕರ ರಾಜ್ಯ ಮೀಸಲು ಪೊಲೀಸ್ ಪಡೆ (ಕೆಎಸ್ ಆರ್ ಪಿ) ಮೂರನೇ ಬೆಟಾಲಿಯನ್ ಕೋರಮಂಗಲದ ಹೆಡ್ ಕಾನ್ಸ್ ಟೇಬಲ್ ಒಬ್ಬರು 55 ನೇ ವರ್ಷದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದಿದ್ದಾರೆ.
ಪರೀಕ್ಷೆ ಬರೆಯುತ್ತಿರುವ ಹೆಡ್ ಕಾನ್ಸ್ ಟೇಬಲ್ ಮಂಜುನಾಥ್
ಪರೀಕ್ಷೆ ಬರೆಯುತ್ತಿರುವ ಹೆಡ್ ಕಾನ್ಸ್ ಟೇಬಲ್ ಮಂಜುನಾಥ್

ಕೋಲಾರ: ಉದ್ಯೋಗದಲ್ಲಿ ಬಡ್ತಿಗೋಸ್ಕರ ರಾಜ್ಯ ಮೀಸಲು ಪೊಲೀಸ್ ಪಡೆ (ಕೆಎಸ್ ಆರ್ ಪಿ) ಮೂರನೇ ಬೆಟಾಲಿಯನ್ ಕೋರಮಂಗಲದ ಹೆಡ್ ಕಾನ್ಸ್ ಟೇಬಲ್ ಒಬ್ಬರು 55 ನೇ ವರ್ಷದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದಿದ್ದಾರೆ.

ನಿವೃತ್ತಿಗೂ ಮುನ್ನ ಸಹಾಯಕ ಸಬ್ ಇನ್ಸ್ ಪೆಕ್ಟರ್ ನಂತರ ಸಬ್ ಇನ್ಸ್ ಪೆಕ್ಟರ್ ಆಗಿ ಬಡ್ತಿ ಪಡೆಯಬೇಕೆಂಬ ಉದ್ದೇಶದಿಂದ
ಹೆಡ್ ಕಾನ್ಸ್ ಟೇಬಲ್ ಕೆ.ಎನ್. ಮಂಜುನಾಥ್ ಇದೀಗ, 15 ದಿನಗಳ ರಜೆ ಪಡೆದು ಕೋಲಾರ ಸರ್ಕಾರಿ ಬಾಲಕಿಯರ ಜೂನಿಯರ್ ಕಾಲೇಜಿನಲ್ಲಿ ಇಂದು ಪರೀಕ್ಷೆ ಬರೆದರು.

ಪರೀಕ್ಷೆ ಮುಗಿದ ಬಳಿಕ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಮಂಜುನಾಥ್, 1993ರಲ್ಲಿ ಶಿವಮೊಗ್ಗದಲ್ಲಿ ಕೆಎಸ್ ಆರ್ ಪಿಗೆ ಸೇರಿಕೊಂಡಿದ್ದು, ನಂತರ ಬೆಂಗಳೂರಿಗೆ ವರ್ಗಾವಣೆಯಾಯಿತು. ಬಡ್ತಿ ಪಡೆಯಲು ತೊಂದರೆಯಾಗಿದ್ದರಿಂದ ಪರೀಕ್ಷೆ ಬರೆಯಲು ನಿರ್ಧರಿಸಿದ್ದಾಗಿ ಹೇಳಿದರು.

ಆರು ತಿಂಗಳ ಹಿಂದೆ ಓದಲು ಪ್ರಾರಂಭಿಸಿದೆ. ಕೋಲಾರದ ಕಟಾರಿಪಾಳ್ಯದಲ್ಲಿ ವಾಸವಾಗಿದ್ದು, ಕೆಲಸಕ್ಕಾಗಿ ಬೆಂಗಳೂರಿಗೆ ಬರಬೇಕಾಗಿದ್ದರಿಂದ ತುಂಬಾ ಕಷ್ಟ ಏನಿಸಿತು. ಆದರೆ, ನಂತರ ಆಸಕ್ತಿಯಿಂದ ಪರೀಕ್ಷೆಗೆ ಸಿದ್ಧತೆ ನಡೆಸಿದ್ದಾಗಿ ತಿಳಿಸಿದರು.

ಕೋವಿಡ್-19 ಸಾಂಕ್ರಾಮಿಕ ರೋಗದ ಮಧ್ಯೆಯೂ ಪರೀಕ್ಷೆ ನಡೆಸಿದ ರಾಜ್ಯಸರ್ಕಾರಕ್ಕೆ ಧನ್ಯವಾದ ತಿಳಿಸಿದರು. ಪರೀಕ್ಷೆ ಮುಂದೂಡಲ್ಪಟ್ಟಿದ್ದರಿಂದ ಭಯವಾಗಿತ್ತು. ಆದರೆ, ಸರ್ಕಾರ ಹೊಸ ದಿನಾಂಕ ಘೋಷಿಸಿದ ನಂತರ ತಮ್ಮ ಮಗ, ಮಗಳು ಹಾಗೂ ಕೆಲ ಸ್ನೇಹಿತರ ಸಹಾಯದಿಂದ ಪರೀಕ್ಷೆಗೆ ಸಿದ್ಧತೆ ನಡೆಸಿದ್ದಾಗಿ ತಿಳಿಸಿದರು.

55 ವರ್ಷದಲ್ಲಿ ಪರೀಕ್ಷೆ ತೆಗೆದುಕೊಂಡ ಬಗ್ಗೆ ಆತಂಕವೇನಿಲ್ಲ, ನಿವೃತ್ತಿ ಸಂದರ್ಭದಲ್ಲಿ ಉತ್ತಮ ಪ್ರಯೋಜನ ಪಡೆದುಕೊಳ್ಳಬೇಕು, ಬಡ್ತಿ ಪಡೆದುಕೊಳ್ಳಬೇಕೆಂಬುದರಲ್ಲಿ ಸ್ಪಷ್ಟವಾಗಿರುವುದಾಗಿ ಮಂಜುನಾಥ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com