ಜಯದೇವ ಆಸ್ಪತ್ರೆ ಸಿಬ್ಬಂದಿಗೆ ಕೊರೋನಾ ಸೋಂಕು ಪ್ರಕರಣಕ್ಕೆ ಟ್ವಿಸ್ಟ್: ಆಡಳಿತ ಮಂಡಳಿಯಿಂದ ಪೊಲೀಸರಿಗೆ ದೂರು!

ನಗರದ ಪ್ರತಿಷ್ಠಿತ ಜಯದೇವ ಇನ್ಸ್ಟಿಟ್ಯೂಟ್ ಆಫ್ ಕಾರ್ಡಿಯೋವಾಸ್ಕುಲರ್ ಸೈನ್ಸಸ್ ಅಂಡ್ ರಿಸರ್ಚ್ ಆಸ್ಪತ್ರೆಯ ಸಿಬ್ಬಂದಿಗೆ ಕೊರೋನಾ ಸೋಂಕು ಒಕ್ಕರಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆಡಳಿತ ಮಂಡಳಿ ಪೊಲೀಸ್ ದೂರು ನೀಡಲು ಮುಂದಾಗಿದೆ.
ಜಯದೇವ ಆಸ್ಪತ್ರೆ
ಜಯದೇವ ಆಸ್ಪತ್ರೆ

ಬೆಂಗಳೂರು: ನಗರದ ಪ್ರತಿಷ್ಠಿತ ಜಯದೇವ  ಇನ್ಸ್ಟಿಟ್ಯೂಟ್ ಆಫ್ ಕಾರ್ಡಿಯೋವಾಸ್ಕುಲರ್ ಸೈನ್ಸಸ್ ಅಂಡ್ ರಿಸರ್ಚ್ ಆಸ್ಪತ್ರೆಯ ಸಿಬ್ಬಂದಿಗೆ ಕೊರೋನಾ ಸೋಂಕು ಒಕ್ಕರಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆಡಳಿತ ಮಂಡಳಿ ಪೊಲೀಸ್ ದೂರು ನೀಡಲು ಮುಂದಾಗಿದೆ.

ಹೌದು.. ಇತ್ತೀಚೆಗೆ ಜಯದೇವ ಆಸ್ಪತ್ರೆಯ ಸಿಬ್ಬಂದಿಗೆ ಕೊರೋನಾ ವೈರಸ್ ಸೋಂಕು ತಗುಲಿದ್ದರಿಂದ ಆಸ್ಪತ್ರೆ ಹೊರರೋಗಿಗಳ ವಿಭಾಗವನ್ನು ತಾತ್ಕಾಲಿಕ ಬಂದ್ ಮಾಡಲಾಗಿತ್ತು. ಈ ಸುದ್ದಿ ನಗರಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಇದೀಗ ಈ ಪ್ರಕರಣಕ್ಕೆ ಹೊಸ ಟ್ವಿಸ್ಟ್ ದೊರೆತಿದ್ದು, ಸೋಂಕಿಗೆ ತುತ್ತಾದ ಸಿಬ್ಬಂದಿ ಮೊಬೈಲ್ ಗೆ ನಿಮ್ಮ ವರದಿ ನೆಗೆಟಿವ್ ಬಂದಿದೆ ಎಂಬ ಮೆಸೇಜ್ ಬರಲಾರಂಭಿಸಿದೆ.

ಈ ಬಗ್ಗೆ ಮಾತನಾಡಿರುವ ಆಸ್ಪತ್ರೆ ನಿರ್ದೇಶಕ ಡಾ.ಸಿಎನ್ ಮಂಜುನಾಥ್ ಅವರು ಕಳೆದ ಕೆಲ ದಿನಗಳಿಂದ ಅನಾಮಿಕರು ಸೋಂಕು ಪೀಡಿತ ಸಿಬ್ಬಂದಿಗೆ ನಿಮ್ಮ ವರದಿ ನೆಗೆಟಿವ್ ಬಂದಿದೆ ಎಂಬ ಮೆಸೇಜ್ ಕಳುಹಿಸುತ್ತಿದ್ದಾರೆ. ಈ ಮೆಸೇಜ್ ಗಳಿಂದ ತೀವ್ರ ಗೊಂದಲಕ್ಕೆ ಈಡಾಗಿರುವ ಸಿಬ್ಬಂದಿ ಇದೀಗ ಮತ್ತೊಮ್ಮೆ ಪರೀಕ್ಷೆಗೊಳಪಡುವಂತಾಗಿದೆ. ಆದರೆ ಇಂತಹ ಕೆಲಸ ಮಾಡುತ್ತಿರುವುದು ಯಾರು.. ಕೆಲ ಕಿಡಿಗೇಡಿಗಳು ಇಂತಹ ಕೃತ್ಯ ಮಾಡುತ್ತಿದ್ದು, ಬಹುಶಃ ದತ್ತಾಂಶ ಸೋರಿಕೆಯಾಗಿರಬಹುದು. ನಮ್ಮ ತಂಡ ಈ ಕುರಿತು ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಿದೆ ಎಂದು ಹೇಳಿದ್ದಾರೆ.

ಅಂತೆಯೇ  ನಾನು ಕಿದ್ವಾಯ್ ಆಸ್ಪತ್ರೆಗೂ ಈ ಬಗ್ಗೆ ಮಾಹಿತಿ ನೀಡಿದ್ದು, ಯಾವುದೇ ನಂಬರ್ ನಿಂದ ಈ ಮೆಸೇಜ್ ಬಂದಿಲ್ಲ. ಬದಲಿಗೆ AD-BHOOMI ಎಂಬ ಖಾತೆದಾರನಿಂದ ಈ ಮೆಸೇಜ್ ಬಂದಿದೆ. ಇದೇ ರೀತಿಯ ಮೆಸೇಜ್ ಕಿದ್ವಾಯ್ ನಿರ್ದೇಶಕ ಡಾ.ಸಿ ರಾಮಚಂದ್ರ ಅವರಿಗೂ ಬಂದಿದೆ. ಒಂದು ವೇಳೆ ವರದಿ ತಪ್ಪಾಗಿದ್ದರೆ ಐಸಿಎಂಆರ್ ಅಥವಾ ಸಂಬಂಧ ಪಟ್ಟ ಲ್ಯಾಬ್ ನಿಂದ ಮಾಹಿತಿ ಬರಬೇಕು. ಇಂತಹ ಸೂಕ್ಷ್ಮ ವಿಚಾರಗು ಹೇಗೆ ಖಾಸಗಿಯವರಿಗೆ ಸಿಗುತ್ತಿದೆ. ನಮ್ಮಿಂದ ಯಾವುದೇ ರೀತಿಯ ದತ್ತಾಂಶ ಸೋರಿಕೆಯಾಗಿಲ್ಲ. ಈ ಬಗ್ಗೆ ಗಂಭೀರ ತನಿಖೆಯಾಗಬೇಕು ಎಂದು ಡಾ.ಸಿಎನ್ ಮಂಜುನಾಥ್ ಹೇಳಿದ್ದಾರೆ.

ಈ ವರೆಗೂ 50 ಸಾವಿರ ಕೋವಿಡ್ ಟೆಸ್ಟ್ ಗಳನ್ನು ನಡೆಸಲಾಗಿದ್ದು, ವರದಿ ಪಾಸಿಟಿವ್ ಬಂದರೆ ಅದನ್ನು ಟಾಸ್ಕ್ ಫೋರ್ಸ್ ಗೆ ರವಾನೆ ಮಾಡುತ್ತೇವೆ ಎಂದು ಕಿದ್ವಾಯ್ ನಿರ್ದೇಶಕ ಡಾ.ಸಿ ರಾಮಚಂದ್ರ  ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com