ಕೆಎಲ್ ಇ ತಾಂತ್ರಿಕ ವಿವಿಯ ವಿದ್ಯಾರ್ಥಿಗಳಿಂದ ಆನ್ ಲೈನ್ ಪರೀಕ್ಷೆ ವಿರುದ್ಧ ಆಂದೋಲನ

ಕೆಎಲ್ ಇ ತಾಂತ್ರಿಕ ವಿಶ್ವವಿದ್ಯಾಲಯ ಇಂಜಿನಿಯರಿಂಗ್ ಪದವಿ(ಬಿಇ)ಯ ವಾರ್ಷಿಕ ಪರೀಕ್ಷೆಯನ್ನು ಆನ್ ಲೈನ್ ಮೂಲಕ ನಡೆಸಲು ನಿರ್ಧರಿಸಿದ್ದು, ಇದಕ್ಕೆ ವಿದ್ಯಾರ್ಥಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಆನ್ ಲೈನ್ ಪರೀಕ್ಷೆ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಆಂದೋಲನ ಆರಂಭಿಸಿದ್ದಾರೆ.
ಕೆಎಲ್ ಇ
ಕೆಎಲ್ ಇ

ಹುಬ್ಬಳ್ಳಿ: ಕೆಎಲ್ ಇ ತಾಂತ್ರಿಕ ವಿಶ್ವವಿದ್ಯಾಲಯ ಇಂಜಿನಿಯರಿಂಗ್ ಪದವಿ(ಬಿಇ)ಯ ವಾರ್ಷಿಕ ಪರೀಕ್ಷೆಯನ್ನು ಆನ್ ಲೈನ್ ಮೂಲಕ ನಡೆಸಲು ನಿರ್ಧರಿಸಿದ್ದು, ಇದಕ್ಕೆ ವಿದ್ಯಾರ್ಥಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಆನ್ ಲೈನ್ ಪರೀಕ್ಷೆ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಆಂದೋಲನ ಆರಂಭಿಸಿದ್ದಾರೆ.

ಕೊರೋನಾ ವೈರಸ್ ಲಾಕ್ ಡೌನ್ ಹಿನ್ನೆಲೆಯಲ್ಲಿ ಇಂಜಿನಿಯರಿಂಗ ವಾರ್ಷಿಕ ಪರೀಕ್ಷೆ ನಡೆಸಿಲ್ಲ. ಹೀಗಾಗಿ ಸ್ವಾಯತ್ತ ವಿವಿಯಾಗಿರುವ ಕೆಎಲ್ ಇ ಜುಲೈ 21ರಿಂದ ಆನ್ ಲೈನ್ ಪರೀಕ್ಷೆ ನಡೆಸಲು ನಿರ್ಧರಿಸಿದೆ. ಅಲ್ಲದೆ ಲ್ಯಾಪ್ ಟಾಪ್ ನೊಂದಿಗೆ ಪರೀಕ್ಷೆ ಬರೆಯಲು ಸಿದ್ಧವಾಗಿರಿ ಎಂದು ವಿದ್ಯಾರ್ಥಿಗಳಿಗೆ ಸೂಚಿಸಿದೆ. ಒಂದು ವೇಳೆ ಲ್ಯಾಪ್ ಟಾಪ್ ಗೆ ಇಂಟರ್ ನೆಟ್ ಸಂಪರ್ಕ ಕಡಿತವಾದರೆ ಅದಕ್ಕೆ ಪರ್ಯಾಯವಾಗಿ ಸ್ಮಾರ್ಟ್‌ಫೋನ್ ಅನ್ನು ಇಟ್ಟುಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸೂಚಿಸಿದೆ.

ಆನ್ ಲೈನ್ ಪರೀಕ್ಷೆಯನ್ನು ಹಲವು ವಿದ್ಯಾರ್ಥಿಗಳು ವಿರೋಧಿಸಿದ್ದು, ಟ್ವೀಟರ್ ನಲ್ಲಿ #unjustifiedKLETUexams ಎಂಬ ಹ್ಯಾಷ್ ಟ್ಯಾಗ್ ನೊಂದಿಗೆ ಆಂದೋಲನ ಆರಂಭಿಸಿದ್ದಾರೆ ಮತ್ತು ವಿವಿ ಆನ್ ಲೈನ್ ಪರೀಕ್ಷೆ ನಡೆಸುವ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಒತ್ತಾಯಿಸಿದ್ದಾರೆ.

ಕೆಲವು ವಿದ್ಯಾರ್ಥಿಗಳು ಬಡ ಕುಟುಂಬದಿಂದ ಬಂದವರಾಗಿದ್ದು, ಅವರ ಬಳಿ ಲ್ಯಾಪ್ ಟಾಪ್ ಇರುವುದಿಲ್ಲ. ಇನ್ನು ಕೆಲವರ ಬಳಿ ಸ್ಮಾರ್ಟ್ ಫೋನ್ ಸಹ ಇರುವುದಿಲ್ಲ. ಲಾಕ್ ಡೌನ್ ವೇಳೆ ತಮ್ಮ ಪೋಷಕರ ಸ್ಮಾರ್ಟ್ ಫೋನ್ ಪಡೆದು ಆನ್ ಲೈನ್ ತರಗತಿಗಳಲ್ಲಿ ಭಾಗವಹಿಸಿದ್ದಾರೆ. ಪರೀಕ್ಷೆಗೂ ಮುಂಚೆ ಕನಿಷ್ಠ ಒಂದು ತಿಂಗಳಾದರೂ ನಮಗೆ ಆಫ್ ಲೈನ್ ತರಗತಿಗಳ ಅಗತ್ಯ ಇದೆ ಎಂದು ಕೆಲವು ವಿದ್ಯಾರ್ಥಿಗಳು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com