ಕೆಐಎಗೆ ಸಂಪರ್ಕಿಸುವ ಮೆಟ್ರೋ ಬ್ಲೂ ಲೈನ್ ಮಾರ್ಗಕ್ಕೆ ಹೊಸ ವಿನ್ಯಾಸ!

ಬಹು ನಿರೀಕ್ಷಿತ ಬೆಂಗಳೂರಿನ ನಮ್ಮ ಮೆಟ್ರೋ ಯೋಜನೆಯ ನೀಲಿ ಬಣ್ಣದ ಲೈನ್ ಮಾರ್ಗಕ್ಕೆ ಹೊಸ ವಿನ್ಯಾಸ ನೀಡಲಾಗಿದ್ದು, ಈ ಲೈನ್ ನಲ್ಲಿ ಬರುವ 2 ನಿಲ್ದಾಣಗಳು ಭಾಗಶಃ ಸುರಂಗಮಾರ್ಗದ ನಿಲ್ದಾಣಗಳಾಗಿರುತ್ತವೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಬಹು ನಿರೀಕ್ಷಿತ ಬೆಂಗಳೂರಿನ ನಮ್ಮ ಮೆಟ್ರೋ ಯೋಜನೆಯ ನೀಲಿ ಬಣ್ಣದ ಲೈನ್ ಮಾರ್ಗಕ್ಕೆ ಹೊಸ ವಿನ್ಯಾಸ ನೀಡಲಾಗಿದ್ದು, ಈ ಲೈನ್ ನಲ್ಲಿ ಬರುವ 2 ನಿಲ್ದಾಣಗಳು ಭಾಗಶಃ ಸುರಂಗಮಾರ್ಗದ ನಿಲ್ದಾಣಗಳಾಗಿರುತ್ತವೆ ಎಂದು ತಿಳಿದುಬಂದಿದೆ.

ಬೆಂಗಳೂರಿನ ಕೆಆರ್ ಪುರಂ ಮಾರ್ಗವಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೆಟ್ರೋ ಮಾರ್ಗ ವಿಸ್ತರಿಸುವ ಬಿಎಂಆರ್ ಸಿಎಲ್ ಯೋಜನೆಗೆ ವೇಗ ದೊರೆತಿದ್ದು, ಈ ನೀಲಿ ಬಣ್ಣದ ಮಾರ್ಗಕ್ಕೆ ಹೊಸ ವಿನ್ಯಾಸ ನೀಡಲಾಗಿದೆ. ಈ ನೂತನ ವಿನ್ಯಾಸದ ಮಾರ್ಗದ ನಕ್ಷೆಯನ್ನು ನಮ್ಮ ಮೆಟ್ರೋದ ಆರ್ಥಿಕ ಪಾಲುದಾರ ಸಂಸ್ಥೆಯಾದ ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ (ಎಡಿಬಿ) ಬಿಡುಗಡೆ ಮಾಡಿದೆ. ಈ ನೀಲಿ ಬಣ್ಣದ ಮಾರ್ಗದಲ್ಲಿ ಬರುವ 2 ನಿಲ್ದಾಣಗಳಾದ ಸ್ಕೈ ಗಾರ್ಡೆನ್ ಮತ್ತು ಕಿಯಾ ಟನಲ್ ಗಳು ಭಾಗಶಃ ಸುರಂಗ ಮಾರ್ಗದ ನಿಲ್ದಾಣಗಳಾಗಿರಲಿವೆ.

2019ರಲ್ಲಿ ಬಿಡುಗಡೆ ಮಾಡಲಾಗಿದ್ದ ನಕ್ಷೆಯ ನೋಟಿಫಿಕೇಶನ್ ನಲ್ಲಿ ಇದನ್ನು ಗ್ರೇಡ್ ಸ್ಟೇಷನ್ ಗಳಾಗಿ ತೋರಿಸಲಾಗಿತ್ತು. ಆದಕೆ ಹೊಸ ನಕ್ಷೆಯಲ್ಲಿ ಈ ನಿಲ್ದಾಣಗಳು ಭಾಗಶಃ ಸುರಂಗ ಮಾರ್ಗದ ನಿಲ್ದಾಣಗಳಾಗಿರಲಿವೆ. ಈ ಬಗ್ಗೆ ಮಾತನಾಡಿದ ಬಿಎಂಆರ್ ಸಿಎಲ್ ನಿರ್ವಹಣಾ ನಿರ್ದೇಶಕ ಅಜಯ್ ಸೇಠ್ ಅವರು, ನಾವು ಹೊಸ ವಿನ್ಯಾಸದ ನಮ್ಮ ನೂತನ ನಕ್ಷೆಯನ್ನು ಬಿಎಂಆರ್ ಸಿಎಲ್ ಗೆ ನೀಡಿದ್ದೇವೆ. ಐದು ಪ್ಯಾಕೇಜ್ ಗಳಿಗಾಗಿ ಟೆಂಡರ್ ಕರೆಯಲಾಗಿದ್ದು. ಕೆಆರ್ ಪುರಂ ನಿಂದ ವಿಮಾನ ನಿಲ್ದಾಣಕ್ಕೆ ಸಂಪರ್ಕಿಸುವ ಮಾರ್ಗಕ್ಕಾಗಿ ತಿಂಗಳಾಂತ್ಯದೊಳಗೆ ಇನ್ನೂ ಮೂರು ಟೆಂಡರ್ ಕರೆಯಲಾಗುತ್ತದೆ.

ಡೆಪೋ, ಟ್ರ್ಯಾಕ್ ಕೆಲಸಗಳಿಗಾಗಿ ಈ ಟೆಂಡರ್ ಕರೆಯಲಾಗುತ್ತಿದೆ. ಕಳೆದ ವರ್ಷ ಸಿಲ್ಕ್ ಬೋರ್ಡ್ ನಿಂದ ಕೆಆರ್ ಪುರ ಸಂಪರ್ಕದ ಮಾರ್ಗಕ್ಕೆ ಅಂದಾಜು 1,325 ಮೊತ್ತದ ಟೆಂಡರ್ ಕರೆಯಲಾಗಿತ್ತು. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೆಟ್ರೋ ಮಾರ್ಗಕ್ಕೆ ಕೇಂದ್ರ ಸರ್ಕಾರ ಅನುಮೋದನೆ ಬಾಕಿ ಇದ್ದು ಈ ಪ್ರಕ್ರಿಯೆ 3 ರಿಂದ 4 ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಹೇಳಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com