ಬಿಡದಿಯ ಬಾಷ್ ಕಂಪನಿಗೂ ಕೊರೋನಾ ಕಂಟಕ: 62 ಮಂದಿಯಲ್ಲಿ ವೈರಸ್ ದೃಢ

ಮಹಾಮಾರಿ ಕೊರೋನಾ ವೈರಸ್'ಗೆ ಇಡೀ ವಿಶ್ವವೇ ಬಿಚ್ಚಿಬಿದ್ದಿದ್ದು, ಪ್ರತೀಯೊಬ್ಬರನ್ನೂ ಕಾಡಲು ಆರಂಭಿಸಿದೆ. ದಿನದಿನಕ್ಕೆ ಮಹಾಮಾರಿಯ ಕರಾಳತೆ ಮಿತಿ ಮೀರುತ್ತಿದ್ದು, ಇದೀಗ ಬಿಡದಿ ಬಳಿಯಿರುವ ಬಾಷ್ ಕಂಪನಿಗೂ ಕೊರೋನಾ ಕಂಟಕ ಶುರುವಾಗಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಮಹಾಮಾರಿ ಕೊರೋನಾ ವೈರಸ್'ಗೆ ಇಡೀ ವಿಶ್ವವೇ ಬಿಚ್ಚಿಬಿದ್ದಿದ್ದು, ಪ್ರತೀಯೊಬ್ಬರನ್ನೂ ಕಾಡಲು ಆರಂಭಿಸಿದೆ. ದಿನದಿನಕ್ಕೆ ಮಹಾಮಾರಿಯ ಕರಾಳತೆ ಮಿತಿ ಮೀರುತ್ತಿದ್ದು, ಇದೀಗ ಬಿಡದಿ ಬಳಿಯಿರುವ ಬಾಷ್ ಕಂಪನಿಗೂ ಕೊರೋನಾ ಕಂಟಕ ಶುರುವಾಗಿದೆ. 

ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸುಮಾರು 62 ಮಂದಿ ನೌಕರರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಕಂಪನಿಯಲ್ಲಿ ಒಟ್ಟು 768 ಮಂದಿ ಕಾರ್ಯನಿರ್ವಹಿಸುತ್ತಿದ್ದು, ಇದೀಗ ಎಲ್ಲರಲ್ಲೂ ಆತಂಕ ಹೆಚ್ಚಾಗುವಂತೆ ಮಾಡಿದೆ. 

ಇನ್ನು ಸೋಂಕು ಪತ್ತೆಯಾಗಿರುವ 62 ಮಂದಿ ಜೊತೆಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ 182 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದ್ದು, 62 ಮಂದಿ ಸೋಂಕಿತರಲ್ಲಿ ಓರ್ವ ವ್ಯಕ್ತಿ ಚೇತರಿಸಿಕೊಳ್ಳುತ್ತಿದ್ದಾರೆಂದು ತಿಳಿದುಬಂದಿದೆ. 

ಇದೀಗ ಕಂಪನಿಯಿರುವ ಪ್ರದೇಶವನ್ನು  ಸೀಲ್'ಡೌನ್ ಮಾಡಲಾಗಿದ್ದು, ಸಂಪೂರ್ಣ ಸ್ಯಾನಿಟೈಸ್ ಮಾಡುವ ಕೆಲಸಗಳನ್ನು ಮಾಡಲಾಗುತ್ತಿದೆ. ಸೋಂಕಿತ ವ್ಯಕ್ತಿಗಳು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ರಾಮನಗರದಲ್ಲಿ ಸೋಂಕಿತರೊಂದಿಗೆ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕ ಹೊಂದಿದ್ದ ಜನರನ್ನು ಹುಡುಕಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಈ ನಡುವೆ ನೌಕರರಲ್ಲಿ ವೈರಸ್ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಉಳಿದ ನೌಕರರು ಇದೀಗ ಕೆಲಸಕ್ಕೆ ತೆರಳಲು ನಿರಾಕರಿಸುತ್ತಿದ್ದಾರೆ. ರಜೆ ಕಾರ್ಖಾನೆಯನ್ನು ಸೀಲ್'ಡೌನ್ ಮಾಡಿ, ರಜೆ ನೀಡುವಂತೆ ಆಗ್ರಹಿಸುತ್ತಿದ್ದಾರೆ. ಒಂದು ವೇಳೆ ನಾವು ಸ್ವಯಂಪ್ರೇರಿತರಾಗಿ ಕೆಲಸಕ್ಕೆ ಹೋಗದಿದ್ದರೆ, ನಮ್ಮನ್ನು ಕಂಪನಿಯವರು ಕೆಲಸದಿಂದ ತೆಗೆದುಹಾಕುತ್ತಾರೆ. ಸರ್ಕಾರ ನೌಕರರಿಗೆ ಬೆಂಬಲ ನೀಡುತ್ತಿಲ್ಲ. ಕಾರ್ಮಿಕರ ಸಂಘಟನೆಯ ನಾಯಕರೂ ಕೂಡ ಕಂಪನಿಯ ಆಡಳಿತ ಮಂಡಳಿಗೇ ಬೆಂಬಲ ನೀಡುತ್ತಿದ್ದಾರೆ. ಇಷ್ಟು ಮಟ್ಟದಲ್ಲಿ ವೈರಸ್ ಹರಡುತ್ತಿದ್ದರು, ಕಂಪನಿಯವರು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ, ಮಾಸ್ಕ್ ಧರಿಸುವಂತೆ ತಿಳಿಸುತ್ತಿದ್ದಾರೆಂದು ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com